twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಳೂರಿನಲ್ಲಿ ನಡೆಯಬೇಕಿದ್ದ 'ಸನ್ನಿ ನೈಟ್ಸ್' ಕ್ಯಾನ್ಸಲ್

    By Bharath Kumar
    |

    ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆ ಏರ್ಪಡಿಸಲಾಗಿದ್ದ 'ಸನ್ನಿ ನೈಟ್ಸ್' ಕಾರ್ಯಕ್ರಮವನ್ನ ಕ್ಯಾನ್ಸಲ್ ಮಾಡುವಂತೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ. ಈ ಮೂಲಕ ಪಡ್ಡೆ ಹುಡುಗರ ಆಸೆ ನುಚ್ಚು ನೂರಾಗಿದೆ.

    ಡಿಸೆಂಬರ್ 31 ರಂದು ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ 'ಸನ್ನಿ ನೈಟ್ಸ್' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದರು. ಆದ್ರೆ, ಕನ್ನಡ ಪರ ಹೋರಾಟಗಾರರು ಹಾಗೂ ಕೆಲವು ಸಮುದಾಯಗಳು 'ಸನ್ನಿ ನೈಟ್ಸ್'ಗೆ ವಿರೋಧ ವ್ಯಕ್ತಪಡಿಸಿ ಬೀದಿಗಿಳಿದು ಪ್ರತಿಭಟನೆ ಮಾಡಿದ್ದರು. ಇದನ್ನ ಗಮನಿಸಿದ ಹೋಮ್ ಮಿನಿಸ್ಟರ್ ಇಂತಹ ಕಾರ್ಯಕ್ರಮಕ್ಕೆ ಅವಕಾಶ ನೀಡವುದಿಲ್ಲ ಎಂದಿದ್ದಾರೆ.

    ಸನ್ನಿ ಲಿಯೋನ್ ವಿರುದ್ಧ ಬೆಂಗಳೂರಿನಲ್ಲಿ ಹೆಚ್ಚಾಯ್ತು ಪ್ರತಿಭಟನೆಸನ್ನಿ ಲಿಯೋನ್ ವಿರುದ್ಧ ಬೆಂಗಳೂರಿನಲ್ಲಿ ಹೆಚ್ಚಾಯ್ತು ಪ್ರತಿಭಟನೆ

    Bangalore sunny nights Programme cancelled

    ಈ ಬಗ್ಗೆ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು ''ಸನ್ನಿ ನೈಟ್ಸ್ ಕಾರ್ಯಕ್ರಮವನ್ನ ವಿರೋಧ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಹಾಗಾಗಿ, ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ನಮ್ಮ ಸಂಸ್ಕೃತಿಯಂತೆ ನಾಟಕ, ನೃತ್ಯ ಬೇಕಾದರೂ ಮಾಡಲಿ. ಒಂದು ವೇಳೆ 'ಸನ್ನಿ ನೈಟ್ಸ್' ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದರೇ ಹಿಂಪಡೆಯುತ್ತೇವೆ'' ಎಂದು ತಿಳಿಸಿದ್ದಾರೆ.

    ಈ ಮೂಲಕ ಕಳೆದ ಕೆಲದಿನಗಳಿಂದ ಪರ-ವಿರೋಧದ ಚರ್ಚೆಯಾಗಿದ್ದ 'ಸನ್ನಿನೈಟ್ಸ್ ಗೆ ಬ್ರೇಕ್ ಬಿದ್ದಿದೆ. ಮತ್ತೊಂದೆಡೆ 'ಸನ್ನಿ ನೈಟ್ಸ್' ಕಾರ್ಯಕ್ರಮಕ್ಕೆ ಹೋಗಲು ಸಿದ್ದವಾಗಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.

    ಸನ್ನಿ ಲಿಯೋನ್ ವಿರುದ್ಧ ಕನ್ನಡ ಹೋರಾಟಗಾರರು ಪ್ರತಿಭಟನೆಸನ್ನಿ ಲಿಯೋನ್ ವಿರುದ್ಧ ಕನ್ನಡ ಹೋರಾಟಗಾರರು ಪ್ರತಿಭಟನೆ

    English summary
    Home Minister Ramalinga reddy instructs to police commissioner, not allow 'Sunny nights' the New Year party at Manyata Park.
    Friday, December 15, 2017, 17:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X