For Quick Alerts
  ALLOW NOTIFICATIONS  
  For Daily Alerts

  ಗೋಲ್ಡನ್ ಗರ್ಲ್ ರಮ್ಯಾಗೆ ಅತ್ಯುತ್ತಮ ನಟಿ ಪ್ರಶಸ್ತಿ

  By Rajendra
  |

  ಈಗಾಗಲೆ ಹಲವಾರು ಬಾರಿ ಅತ್ಯುತ್ತಮ ತಾರೆಯಾಗಿ ಆಯ್ಕೆಯಾಗಿರುವ ಗೋಲ್ಡನ್ ಗರ್ಲ್ ರಮ್ಯಾ ಇದೀಗ ಮತ್ತೊಮ್ಮೆ ಅತ್ಯುತ್ತಮ ನಟಿ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಬೆಂಗಳೂರು ಟೈಮ್ಸ್ ನಡೆಸಿದ ಸಮೀಕ್ಷೆಯಲ್ಲಿ ರಮ್ಯಾಗೆ ಅತ್ಯಧಿಕ ಮತಗಳು ಬೀಳುವ ಮೂಲಕ ಅವರು ಆಯ್ಕೆಯಾಗಿದ್ದಾರೆ.

  ಈ ಬಗ್ಗೆ ಟ್ವೀಟಿಸಿರುವ ರಮ್ಯಾ, "ಬೆಂಗಳೂರು ಟೈಮ್ಸ್ ಅತ್ಯುತ್ತಮ ನಟಿ 2011 ಪ್ರಶಸ್ತಿಗೆ ಆಯ್ಕೆಯಾಗಿದ್ದೇನೆ. ಮತ ಹಾಕಿ ತಮ್ಮನ್ನು ಗೆಲ್ಲಿಸಿದ ಎಲ್ಲರಿಗೂ ಬಿಗ್ ಥ್ಯಾಂಕ್ಸ್. ಮೊಟ್ಟ ಮೊದಲ ಬಾರಿಗೆ ಈ ರೀತಿಯ ಪ್ರಶಸ್ತಿ ನೀಡಲಾಗಿದೆ " ಎಂದಿದ್ದಾರೆ.

  ಅತ್ಯುತ್ತಮ ನಟಿಯ ಜೊತೆಗೆ "ಕರ್ನಾಟಕದ ಹೆಮ್ಮೆಯ ತಾರೆ"ಯಾಗಿಯೂ ರಮ್ಯಾ ಆಯ್ಕೆಯಾಗಿರುವುದು ವಿಶೇಷ. ಖಾಸಗಿ ಟಿವಿ ವಾಹಿನಿಗಳ ಸಮೀಕ್ಷೆಯಲ್ಲೂ ರಮ್ಯಾ ಅತ್ಯಂತ ಜನಪ್ರಿಯ ಹಾಗೂ ಅತ್ಯುತ್ತಮ ತಾರೆಯಾಗಿ ಹೊರಹೊಮ್ಮಿದ್ದಾರೆ.

  ಈ ಬಗೆಗಿನ ರಮ್ಯಾ ಟ್ವೀಟ್ ಹೀಗಿದೆ. "ಈ ವರ್ಷದ ನನಗೆ ಸಿಕ್ಕಿದ ಐದನೇ ಪ್ರಶಸ್ತಿ ಇದು. ಟೈಮ್ಸ್, ಪ್ರೈಡ್ ಆಫ್ ಕರ್ನಾಟಕ, ಸುವರ್ಣ (ಅತ್ಯುತ್ತಮ ಹಾಗೂ ಅತ್ಯಂತ ಜನಪ್ರಿಯ ತಾರೆ ) ಟಿವಿ9 ಮೂಲಕ ಸಾರ್ವಜನಿಕರೇ ಓಟ್ ಮಾಡಿ ಆಯ್ಕೆ ಮಾಡಿದ್ದಾರೆ" ಎಂದಿದ್ದಾರೆ.

  ತಮ್ಮನ್ನು ಆಯ್ಕೆ ಮಾಡಿದ ಅಭಿಮಾನಿಗಳಿಗೆ ರಮ್ಯಾ ಕೃತಜ್ಞತೆಗಳನ್ನೂ ತಿಳಿಸಿದ್ದಾರೆ. ಏತನ್ಮಧ್ಯೆ 'ಕಠಾರಿವೀರ ಸುರಸುಂದರಾಂಗಿ' ಚಿತ್ರದ ಬಳಿಕ ರಮ್ಯಾ ಯಾವುದೇ ಹೊಸ ಚಿತ್ರಕ್ಕೂ ಸಹಿಹಾಕಿಲ್ಲ. 'ಜಾನಿ 2' ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದರೂ ಸುದ್ದಿ ಇನ್ನೂ ಖಚಿತವಾಗಿಲ್ಲ.

  ಕೋಡಿ ರಾಮಕೃಷ್ಣ ಆಕ್ಷನ್ ಕಟ್ ಹೇಳಲಿರುವ ಚಿತ್ರವೊಂದರಲ್ಲಿ ರಮ್ಯಾ ಅಭಿನಯಿಸಲಿದ್ದಾರೆ. ಈ ಚಿತ್ರದ ನಾಯಕ ಚಾಕೋಲೇಟ್ ಹೀರೋ ದಿಗಂತ್. ಕೋಡಿ ರಾಮಕೃಷ್ಣ ಸಿನಿಮಾ ಮ್ಯಾಜಿಕ್ ಬಗ್ಗೆ ಎಲ್ಲರಿಗೂ ಗೊತ್ತು. ಜೊತೆಯಲ್ಲಿ ಲಕ್ಕಿ ಸ್ಟಾರ್ ರಮ್ಯಾ ಬೇರೆ ಇದ್ದಾರೆ. ಹಾಗಾಗಿ ಪ್ರೇಕ್ಷಕರಿಗೂ, ಘೋಷಣೆಯಾಗಿರುವ ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಯಿದೆ. (ಒನ್ ಇಂಡಿಯಾ ಕನ್ನಡ)

  English summary
  Kannada actress Ramya has been voted the best actress by the public in a survey conducted by a daily. “Bangalore Times Award for best actress 2011!BIG thank you to everybody who voted for me. This award is special since its their 1st ever, “ Ramya tweeted.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X