For Quick Alerts
  ALLOW NOTIFICATIONS  
  For Daily Alerts

  ಫೆಬ್ರವರಿ 1ಕ್ಕೆ 'ಬಜಾರ್'ಗೆ ಬರ್ತಿದೆ 'ಅನುಕ್ತ'

  |

  ಎಲ್ಲ ಅಂದುಕೊಂಡಂತೆ ಆಗಿದ್ದರೇ ಜನವರಿ 11ರಂದು ಸಂಪಲ್ ಸುನಿ ನಿರ್ದೇಶನದ 'ಬಜಾರ್' ಸಿನಿಮಾ ತೆರೆಗೆ ಬರಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿತ್ತು.

  ಈಗ ಬಜಾರ್ ಚಿತ್ರದ ರಿಲೀಸ್ ದಿನಾಂಕ ಪಕ್ಕಾ ಆಗಿದ್ದು, ಸ್ವತಃ ನಿರ್ದೇಶಕರೇ ಘೋಷಿಸಿದ್ದಾರೆ. ಸಫೆಬ್ರವರಿ 1ರಂದು ಬಜಾರ್ ಸಿನಿಮಾ ಚಿತ್ರಮಂದಿರಕ್ಕೆ ಬರ್ತಿದೆ. 'ಬಜಾರ್' ಚಿತ್ರದ ಜೊತೆಗೆ ಕನ್ನಡದ ಮತ್ತೊಂದು ನಿರೀಕ್ಷೆಯ ಚಿತ್ರದ ತೆರೆಕಾಣುತ್ತಿದೆ.

  'ಬಜಾರ್' ನಲ್ಲಿ ಸದ್ದು ಮಾಡ್ತಿದೆ ಲವ್ ಫೆಲ್ಯೂರ್ ಹಾಡು

  ಹೌದು, ಅನುಪ್ರಭಾಕರ್, ಸಂಪತ್ ರಾಜ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ಅನುಕ್ತ' ಚಿತ್ರವೂ ಫೆಬ್ರವರಿ 1ರಂದೇ ಪ್ರೇಕ್ಷಕರೆದುರು ಬರ್ತಿದೆ.

  ಈ ಎರಡು ಚಿತ್ರಗಳು ವಿಭಿನ್ನ ಕಥೆ, ವಿಭಿನ್ನ ಟ್ರೈಲರ್ ಮೂಲಕ ಭರವಸೆ ಮೂಡಿಸಿದೆ. ಒಂದು ಪಕ್ಕಾ ಮಾಸ್ ಆಗಿದ್ದು, ಇನ್ನೊಂದು ಚಿತ್ರ ಕ್ಲಾಸ್ ಆಗಿದೆ. ಹಾಗಾಗಿ, ಒಂದೇ ದಿನ ಎರಡು ರೀತಿಯ ಮನರಂಜನೆ ಕನ್ನಡ ಪ್ರೇಕ್ಷಕರಿಗೆ ಸಿಗಲಿದೆ.

  ಅಂದ್ಹಾಗೆ, ಈಗಾಗಲೇ ಟ್ರೈಲರ್ ಮೂಲಕ ಅಬ್ಬರಿಸಿರುವ ಬಜಾರ್ ಸಿನಿಮಾದಲ್ಲಿ ಧನ್ ವೀರ್ ನಾಯಕನಾಗಿದ್ದು, ಇದು ಇವರ ಮೊದಲ ಸಿನಿಮಾ. ಧನ್​ವೀರ್​ಗೆ ನಾಯಕಿಯಾಗಿ ಅದಿತಿ ಪ್ರಭುದೇವಾ ನಟಿಸಿದ್ದಾರೆ. ಇನ್ನುಳಿದಂತೆ ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿದ್ದು, ಸಂತೋಷ್​ ರೈ ಪಾತಾಜೆ ಕ್ಯಾಮರಾ ವರ್ಕ್​ ಮಾಡಿದ್ದಾರೆ.

  ಇನ್ನು ಅನುಕ್ತ ಚಿತ್ರದ ಬಗ್ಗೆ ಹೇಳುವುದಾದರೇ, ಅಶ್ವಥ್ ಸ್ಯಾಮುಯಲ್ ಚಿತ್ರಕಥೆ ರಚಿಸಿ, ನಿರ್ದೇಶನ ಮಾಡಿದ್ದಾರೆ. ಸಂತೋಷ್ ಕುಮಾರ್ ಕೊಂಚಾಡಿ ನಾಯಕ ನಟನಾಗಿದ್ದು, ಸಂಪತ್‌ ರಾಜ್ ಬಹುಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಂಗೀತಾ ಭಟ್, ಅನು ಪ್ರಭಾಕರ್, ಶ್ರೀಧರ್, ಉಷಾ ಭಂಡಾರಿ, ಚಿದಾನಂದ ಪೂಜಾರಿ, ಅನಿಲ್ ನೀನಾಸಂ, ರಮೇಶ್ ರೈ ಮುಂತಾದವರು ಚಿತ್ರದ ಇತರೆ ಪಾತ್ರಗಳಾಗಿ ಬಣ್ಣ ಹಚ್ಚಿದ್ದಾರೆ.

  English summary
  Simple suni directional Bazaar movie will releasing on february 1st. and same day anu prabhakar and sampath raj starrer anuktha movie also coming to theater.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X