For Quick Alerts
  ALLOW NOTIFICATIONS  
  For Daily Alerts

  ಜನವರಿ 3 ರಂದು ಬರಲಿದೆ ಬಜಾರ್ ಟ್ರೈಲರ್

  |

  ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿಬರ್ತಿರುವ ಬಜಾರ್ ಸಿನಿಮಾ ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಮತ್ತು ಟೀಸರ್ ನಿಂದ ಸದ್ದು ಮಾಡ್ತಿದೆ. ಈಗ ಟ್ರೈಲರ್ ಟೈಂ. ಚಿತ್ರದ ಮತ್ತಷ್ಟು ಕ ಉತೂಹಲವನ್ನ ಹೆಚ್ಚಿಸಲು ಸುನಿ ಟ್ರೈಲರ್ ರಿಲೀಸ್ ಮಾಡ್ತಿದ್ದಾರೆ.

  ಹೌದು, ಜನವರಿ 3ನೇ ತಾರೀಖು ಬಜಾರ್ ಚಿತ್ರದ ಟ್ರೈಲರ್ ಬಿಡುಗಡೆಯಾಗ್ತಿದೆ. ಅಂದ್ಹಾಗೆ, ಧನ್ ವೀರ್ ಬಜಾರ್ ಚಿತ್ರದ ನಾಯಕನಾಗಿದ್ದು, ಇದು ಇವರ ಮೊದಲ ಸಿನಿಮಾ.

  ಸಿನಿಮಾದಲ್ಲಿ ಪಾರಿವಾಳ ರೇಸ್ ​ನಿಂದ ಬೆಂಗಳೂರಿನಲ್ಲಿ ಭೂಗತ ಜಗತ್ತು ಹೇಗೆ ಬೆಳೀತು, ಇಲ್ಲಿ ಗಿರೇಬಾಜಿಯಲ್ಲಿ ಹೀರೋ ಹೇಗೆ ಬೆಳೀತಾನೆ, ನಡುವಿನ ಲವ್​ ಸ್ಟೋರಿ ಹೇಗಿರುತ್ತೆ ಅನ್ನೋ ಕಥೆ ಹೇಳಲಿದೆ ಬಜಾರ್​, ಚಿತ್ರದಲ್ಲಿ ಧನ್​ವೀರ್​ಗೆ ನಾಯಕಿಯಾಗಿ ಅದಿತಿ ಪ್ರಭುದೇವಾ ನಟಿಸಿದ್ದಾರೆ.

  ಸಿನಿಮಾದ ಒಂದು ಹಾಡನ್ನ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ರಿಲೀಸ್​ ಮಾಡಿದ್ರು, ಮತ್ತೊಂದು ಹಾಡನ್ನ ಶ್ರೀಮುರುಳಿ ರಿಲೀಸ್​ ಮಾಡಿದ್ರು. ಈಗ ಟ್ರೇಲರ್​ ರಿಲೀಸ್ ಆಗ್ತಾ ಇದೆ.

  ಇನ್ನುಳಿದಂತೆ ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿದ್ದು, ಸಂತೋಷ್​ ರೈ ಪಾತಾಜೆ ಕ್ಯಾಮರಾ ವರ್ಕ್​ ಮಾಡಿದ್ದಾರೆ. ಎಲ್ಲ ಅಂದುಕೊಂಡಂತೆ ಆದ್ರೆ, ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 11ರಂದು ಬಜಾರ್​ ಸಿನಿಮಾ ತೆರೆಗೆ ಬರಲಿದೆ.

  English summary
  Simple suni directional Bazaar movie trailer will be release on january 3rd.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X