For Quick Alerts
  ALLOW NOTIFICATIONS  
  For Daily Alerts

  ಬಳ್ಳಾರಿ ಉತ್ಸವದಲ್ಲಿ ಅಪ್ಪು ಜಪ: ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ಭಾಗಿ

  By ಫಿಲ್ಮಿಬೀಟ್ ಡೆಸ್ಕ್
  |

  ಬಳ್ಳಾರಿ ಹಾಗೂ ಹೊಸಪೇಟೆಯ ಮಂದಿಗೆ ಅಪ್ಪು ಮೇಲಿನ ಪ್ರೀತಿಗೆ ಕೊನೆಯೇ ಇಲ್ಲ. ಇದೀಗ ಬಳ್ಳಾರಿಯಲ್ಲಿ ಅದ್ಧೂರಿಯಾಗಿ ಬಳ್ಳಾರಿ ಉತ್ಸವ ನಡೆಯುತ್ತಿದ್ದು, ಉತ್ಸದಲ್ಲಿ ಅಪ್ಪು ನೆನಪು ಗಾಢವಾಗಿದೆ.

  ಬಳ್ಳಾರಿ ಜನರ ಮೇಲಿನ ಪ್ರೀತಿಯಿಂದಾಗಿ ಬಳ್ಳಾರಿ ಉತ್ಸವದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರುಗಳು ಭಾಗವಹಿಸಿದ್ದರು.

  ನಟ ರಾಘವೇಂದ್ರ ರಾಜ ಕುಮಾರ ಅವರು ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಅಭಿಮಾನಿ ದೇವರುಗಳಿಗೆ ನಮಸ್ಕಾರ ತಿಳಿಸಿದರು. ಈ ಬಳ್ಳಾರಿ ಉತ್ಸವ ಒಂದು ರೀತಿಯಲ್ಲಿ ಬಳ್ಳಾರಿಯ ದಸರಾ ಆಗಿ ಆಚರಣೆ ಮಾಡಲಾಗುತ್ತಿದೆ ಎಂದರು.

  ''ಪುನೀತ್ ರಾಜಕುಮಾರ್ ಅವರನ್ನು ಅಭಿಮಾನಿಗಳು ಸ್ಟಾರ್ ಆಗಿ ನೋಡುತ್ತಿದ್ದರು. ಆದರೆ ಈಗ ಅವರನ್ನು ಪುತ್ತಳಿಯ ರೂಪದಲ್ಲಿ ನೋಡುವಂತಾಗಿದೆ. ಪುನೀತ್ ಮೇಲೆ ಅಭಿಮಾನಿಗಳು ಇಟ್ಟಿರುವ ಅಭಿಮಾನ್ ಅಜರಾಮರ ಎನ್ನುತ್ತಾ, ಪುನೀತ ಅವರ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ ಎಂಬ ಹಾಡು ಹೇಳಿ ತಮ್ಮ ಮಾತಿಗೆ ವಿರಾಮ ನೀಡಿದರು.

  ರಾಘವೇಂದ್ರ ರಾಜ್‌ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರುಗಳಿಗೆ ಸಚಿವ ಶ್ರೀರಾಮುಲು ಹಾಗೂ ಇತರರು ಸನ್ಮಾನ ಮಾಡಿದರು. ಕಾರ್ಯಕ್ರಮದ ವೇಳೆಯಲ್ಲಿ ಅಪ್ಪು ಅಭಿಮಾನಿಗಳು ಅಪ್ಪುಗೆ ಜಯಘೋಷಣಗಳನ್ನು ಹಾಕಿದರು.

  ಬಳ್ಳಾರಿ ಉತ್ಸವದ ಸಂದರ್ಭದಲ್ಲಿಯೇ ಬಳ್ಳಾರಿಯಲ್ಲಿ ಅಪ್ಪುವಿನ ದೊಡ್ಡ ಕಂಚಿನ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಬಳ್ಳಾರಿಯ ನಲ್ಲಚರಾವು ಪ್ರದೇಶದಲ್ಲಿರುವ ಜಿಲ್ಲಾ ಕ್ರೀಡಾಂಗಣದ ಮುಂದೆ ಈ ಪ್ರತಿಮೆಯನ್ನು ಸ್ಥಾಪಿಸಲಾಗಲಿದ್ದು, ನಿನ್ನೆಯಷ್ಟೆ ಈ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ. ಇನ್ನು ರಾಜ್ಯದಲ್ಲಿ ಇಲ್ಲಿಯವರೆಗೂ ಸ್ಥಾಪಿಸಿರುವ ಪುನೀತ್ ರಾಜ್‌ಕುಮಾರ್ ಪ್ರತಿಮೆಗಳ ಪೈಕಿ ಇದು ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ, ಈ ಪ್ರತಿಮೆ 23 ಅಡಿ ಎತ್ತರವಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ರಾಕಿ ಭಾಯ್ ಪ್ರತಿಮೆಯನ್ನು ನಿರ್ಮಿಸಿದ್ದ ಜೀವನ್ ಶಿಲ್ಲಿ ತಂಡ ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ. 15 ಜನರ ತಂಡ ಸುಮಾರು ಐದು ತಿಂಗಳ ಸಮಯ ತೆಗೆದುಕೊಂಡು ಈ ಪ್ರತಿಮೆಯನ್ನು ತಯಾರಿಸಿದ್ದಾರೆ.

  ಇನ್ನು ಜಿಲ್ಲಾ ಕ್ರೀಡಾಂಗಣದ ಮುಂದೆ 23 ಅಡಿಯ ಪ್ರತಿಮೆ ನಿಲ್ಲಿಸುವುದು ಮಾತ್ರವಲ್ಲದೇ ಕ್ರೀಡಾಂಗಣದ ಪಕ್ಕದಲ್ಲೇ ಇರುವ ಪಾರ್ಕ್ ಹಾಗೂ 14 ಎಕರೆಯ ವಿಶಾಲ ಕೆರೆಗೂ ಸಹ ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಇಡಲು ತೀರ್ಮಾನಿಸಲಾಗಿದೆ. ಈ ವಿಷಯವನ್ನು ಹಾಗೂ ಕೆಲಸವನ್ನು ಆರಂಭದಿಂದ ಅಂತ್ಯದವರೆಗೂ ಉಸ್ತುವಾರಿ ತೆಗೆದುಕೊಂಡು ನೋಡಿಕೊಂಡ ಕೀರ್ತಿ ಶ್ರೀ ರಾಮುಲು ಅವರಿಗೆ ಸೇರಲಿದೆ.

  English summary
  Bellary Uthsava: Raghavendra Rajkumar and Ashwini Puneeth Rajkumar participated in Bellary Uthsava.
  Sunday, January 22, 2023, 18:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X