»   » ಮೈಸೂರು: 'ಬೆಳ್ಳಿ ಸಿನಿಮಾ- ಬೆಳ್ಳಿ ಮಾತು' ಟಿ.ಎಸ್ ನಾಗಾಭರಣ ಅತಿಥಿ

ಮೈಸೂರು: 'ಬೆಳ್ಳಿ ಸಿನಿಮಾ- ಬೆಳ್ಳಿ ಮಾತು' ಟಿ.ಎಸ್ ನಾಗಾಭರಣ ಅತಿಥಿ

Posted By:
Subscribe to Filmibeat Kannada

ಧೀಮಂತ ಚಿತ್ರೋದ್ಯಮಿ, ರಂಗಕರ್ಮಿ, ಸೃಜನಶೀಲ ಆಡಳಿತಗಾರ ಆಗಿರುವ 'ಬೆಳ್ಳಿ ಹೆಜ್ಜೆ' ರೂವಾರಿ ರಾಜ್ಯ ಚಲನಚಿತ್ರ ಅಕಾಡೆಮಿ ಪ್ರಥಮ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಧಮ್ಯ ಕನಸುಗಳಿಗೆ ರೆಕ್ಕೆ ಮೂಡಿದ್ದು, 'ಬೆಳ್ಳಿ ಹೆಜ್ಜೆ' ಕಾರ್ಯಕ್ರಮದಿಂದ. ಇದೀಗ ಮೈಸೂರಿನಲ್ಲಿ 'ಬೆಳ್ಳಿ ಹೆಜ್ಜೆ' ಕಾರ್ಯಕ್ರಮ ನಡೆಯುತ್ತಿದ್ದು, ನಾಗಾಭರಣ ಅವರ ನೆನಪುಗಳಿಗೊಂದು ಸುಂದರ ಸರಮಾಲೆಯಾಗಲಿದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ ಇದೀಗ ಆರನೇ ವರ್ಷಕ್ಕೆ ಕಾಲಿಡುತ್ತಿದೆ. ಇಷ್ಷು ಕಡಿಮೆ ಅವಧಿಯಲ್ಲಿ ಅಕಾಡೆಮಿಯು ಎಲ್ಲೆಡೆ ತನ್ನ ದಿಟ್ಟ ಹೆಜ್ಜೆಗಳನ್ನು ಮೂಡಿಸುತ್ತಾ ಬಂದಿದೆ.[ಕನ್ನಡ ಚಿತ್ರರಂಗದ ಏಳಿಗೆ ಬಗ್ಗೆ ಗಿರೀಶ್ ಕಾಸರವಳ್ಳಿ ಮಾತು]

'Belli Cinema Belli Maathu' TS Nagabharana Guest| Mysuru Karnataka Chalanachitra Academy

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅತೀ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ 'ಬೆಳ್ಳಿ ಹೆಜ್ಜೆ' ಹಿರಿಯರ, ಸಾಧಕರ, ನಟರ, ಗಾಯಕರ ಮಧುರ ನೆನಪುಗಳ ಮೆರವಣಿಗೆಯಾಗಿದೆ.[ವಿಷಾದದೊಂದಿಗೆ ಫೇಸ್ ಬುಕ್ಕಿಗೆ ಜಗ್ಗೇಶ್ ಗುಡ್ ಬೈ]

ಇದೀಗ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೈಸೂರು ಜಿಲ್ಲಾ ಕಛೇರಿ ಇವರ ಸಹಯೋಗದಲ್ಲಿ ಆಗಸ್ಟ್ 7ರಂದು ಸಂಜೆ 4 ಗಂಟೆಗೆ ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಮಾನಸಗಂಗೋತ್ರಿ ರಾಣಿ ಬಹದ್ದೂರು ಸಭಾಂಗಣದಲ್ಲಿ 'ಬೆಳ್ಳಿ ಹೆಜ್ಜೆ' ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.['ಬೆಳ್ಳಿ ಸಿನೆಮಾ-ಬೆಳ್ಳಿ ಮಾತು' ಸಿನಿ ರಸಿಕರೊಡನೆ ಸಂವಾದ]

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಂದಾಯ ಸಚಿವ ಶ್ರೀ ವಿ.ಶ್ರೀನಿವಾಸ ಪ್ರಸಾದ್, ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಸಹಕಾರ ಮತ್ತು ಸಕ್ಕರೆ ಸಚಿವ ಶ್ರೀ ಹೆಚ್.ಎಸ್.ಮಹದೇವಪ್ರಸಾದ್ ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ವಿ.ರಾಜೇಂದ್ರಸಿಂಗ್ ಬಾಬು ವಹಿಸಿಕೊಳ್ಳಲಿದ್ದಾರೆ.[ಜುಲೈ 25 ರಂದು 'ಡಿಸೆಂಬರ್ 1' ಚಿತ್ರ ಪ್ರದರ್ಶನ ಸಂವಾದ]

ಕೇವಲ ಬೆಂಗಳೂರಿನಲ್ಲಿ ಮಾತ್ರ ಮೂಡಿದ 'ಬೆಳ್ಳಿ ಹೆಜ್ಜೆ'ಗಳು ಬೇರೆ ಕಡೆಯಲ್ಲೂ ಪಸರಿಸುವ ನಿಟ್ಟಿನಲ್ಲಿ ಮೈಸೂರಿನ ಹೆಮ್ಮೆಯ ಕೊಡುಗೆ ನಾಗಾಭರಣ ಅವರ ಅನುಭವಗಳ ಧಾರೆಯಲ್ಲಿ ಈ ಬಾರಿ ಮೈಸೂರಿನಲ್ಲಿ 'ಬೆಳ್ಳಿ ಹೆಜ್ಜೆ' ಮೂಡಲಿದೆ ಎಂದು ಸಬ್ ರಿಜಿಸ್ಟ್ರಾರ್ ಹೆಚ್.ಬಿ. ದಿನೇಶ್ ತಿಳಿಸಿದ್ದಾರೆ.

English summary
Belli - Hejje program organized by Karnataka Chalana Chitra Academy on 7th August 4 pm in Rani Bahaddur auditorium, Manasa Gangotri. Myuru. Vetern Director T.S.Nagabharana will be guest.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada