»   » ಬೆಳ್ಳಿ ಮಾತಿನಲ್ಲಿ ಪವರ್ ಸ್ಟಾರ್ ಪವರ್ ಫುಲ್ ಮಾತುಗಳು

ಬೆಳ್ಳಿ ಮಾತಿನಲ್ಲಿ ಪವರ್ ಸ್ಟಾರ್ ಪವರ್ ಫುಲ್ ಮಾತುಗಳು

Posted By:
Subscribe to Filmibeat Kannada

ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರತಿ ಶನಿವಾರ ನಡೆಸುವ 'ಬೆಳ್ಳಿ ಸಿನಿಮಾ-ಬೆಳ್ಳಿ ಮಾತು' ಕಾರ್ಯಕ್ರಮದಲ್ಲಿ ಈ ಶನಿವಾರ (ಜನವರಿ 02) 'ಮೈತ್ರಿ' ಚಲನಚಿತ್ರ ಪ್ರದರ್ಶನಗೊಳ್ಳಲಿದ್ದು, ಚಿತ್ರದ ನಿರ್ದೇಶಕ ಬಿ.ಎಂ ಗಿರಿರಾಜ್ ಅವರು 'ಬೆಳ್ಳಿಮಾತು' ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕನ್ನಡ ಪ್ರಶಸ್ತಿ ಪುರಸ್ಕೃತ ಹಾಗೂ ಸದಭಿರುಚಿಯ ಕನ್ನಡ ಚಿತ್ರಗಳನ್ನು ವಾರಕ್ಕೊಮ್ಮೆ ಅಂದರೆ ಪ್ರತಿ ಶನಿವಾರ ಪ್ರದರ್ಶಿಸಿ ಆ ಚಿತ್ರಕ್ಕೆ ಸಂಬಂಧಿಸಿದ ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಹಾಗೂ ತಂತ್ರಜ್ಞರೊಡನೆ ಸಂವಾದ ನಡೆಸಲು ಅವಕಾಶ ಕಲ್ಪಿಸುವುದು 'ಬೆಳ್ಳಿ ಸಿನಿಮಾ-ಬೆಳ್ಳಿ ಮಾತು' ಕಾರ್ಯಕ್ರಮದ ಉದ್ದೇಶವಾಗಿದೆ.[ಬೆಳ್ಳಿ ಸಿನಿಮಾದಲ್ಲಿ 'ರಂಗಿತರಂಗ' ತಂಡದ ಬೆಳ್ಳಿ ಮಾತು]

'Belli Cinema-Belli Mathu' Kannada Movie 'Mythri'

ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಕಳೆದುಕೊಂಡಿರುವವರ ಬಾಲ್ಯದ ಕುರಿತಾದ ಸಿನಿಮಾವೇ 'ಮೈತ್ರಿ'. ಕಲೆ ಯಾವತ್ತೂ ಧ್ವನಿ ಇಲ್ಲದವರ ಪರವಾಗಿ ಧ್ವನಿ ಎತ್ತಬೇಕೆಂಬ ತತ್ವದಲ್ಲಿ ನಂಬಿಕೆ ಇಟ್ಟಿರುವವರು ನಾವು. ಅದರಲ್ಲೂ ಬಾಲಾಪರಾಧಿಗಳು ಅತ್ಯಂತ ನಿರ್ಲಕ್ಷ್ಷಕ್ಕೆ ತುತ್ತಾದವರು. ಈ ಮಕ್ಕಳ ಬಗ್ಗೆ ಮಾತನಾಡುವವರೇ ಇಲ್ಲ.

ಮನರಂಜನೆಯ ವ್ಯವಹಾರದಲ್ಲಿ ಯಾರಿಗೂ ನಮ್ಮ ಅಜ್ಞಾನವನ್ನು ಪ್ರಶ್ನಿಸುವ ವಿಷಯಗಳ ಬಗ್ಗೆ ಮಾತನಾಡುವುದು ಇಷ್ಟವಿರುವುದಿಲ್ಲ. ಆದರೆ ಪುನೀತ್ ರಾಜ್ ಕುಮಾರ್ ಮತ್ತು ಮೋಹನ್ ಲಾಲ್ ರಂತಹ ಸ್ಟಾರ್ ನಟರು ರಿಮ್ಯಾಂಡ್ ಹೋಮ್ ನ ಸ್ಥಿತಿ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ವಸ್ತುಸ್ಥಿತಿಯನ್ನು ಬಿಂಬಿಸುವ ಸಿನಿಮಾದಲ್ಲಿ ಭಾಗವಹಿಸಿ ಚಿತ್ರವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.[ಚಿತ್ರಗಳು: ಬೆಳ್ಳಿ ಹೆಜ್ಜೆಯಲ್ಲಿ ಡಾ.ಶಿವಣ್ಣನ ಮನದಾಳದ ಮಾತು]

ಈ ಚಿತ್ರವನ್ನು ಪ್ರೇಕ್ಷಕರು ಕೂಡ ಮನಸಾರೆ ಮೆಚ್ಚಿದ್ದು, ಮಾತ್ರವಲ್ಲದೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಪ್ರಶಂಸಿದ್ದಾರೆ. 'ಮೈತ್ರಿ' ಸಿನಿಮಾದ ಬಗ್ಗೆ ಇಂದು ಸಂಜೆ ಸಂಪೂರ್ಣ ಸಂವಾದ ಕಾರ್ಯಕ್ರಮ ಜರುಗಲಿದೆ.

'Belli Cinema-Belli Mathu' Kannada Movie 'Mythri'

'ಬೆಳ್ಳಿ ಸಿನಿಮಾ-ಬೆಳ್ಳಿ ಮಾತು' ಈ ವಾರದ ಕಾರ್ಯಕ್ರಮ ಬೆಂಗಳೂರು ಮಿಲ್ಲರ್ಸ್ ರಸ್ತೆಯ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಜನವರಿ 2 ರಂದು ಸಂಜೆ 4 ಗಂಟೆಗೆ ನಡೆಯಲಿದೆ.['ಬೆಳ್ಳಿ ಹೆಜ್ಜೆ' ಸಂವಾದ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ.!]

ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಅವರು ವಹಿಸಲಿದ್ದು, ನಿರ್ದೇಶಕ ಬಿ.ಎಂ ಗಿರಿರಾಜ್, ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ನಿರ್ಮಾಪಕ ಎನ್ ಎಸ್ ರಾಜ್ ಕುಮಾರ್ ಅವರು ಉಪಸ್ಥಿತರಿರುತ್ತಾರೆ.

    English summary
    Kannada Movie 'Mythri': 'Belli Cinema Belli Maathu' movie shows and discussions by Karnataka Chalanachitra Academy is organised in Chamundeshwari Theater, Millers Road, Bengaluru on January 2nd, 2016, Saturday at 4 o clock.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada