ರಿಷಬ್ ಶೆಟ್ಟಿಯ ಹೊಸ ಅವತಾರವನ್ನ ಒಮ್ಮೆ ನೋಡಿ
'ರಿಕ್ಕಿ' ಹಾಗೂ 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಉತ್ತಮ ನಿರ್ದೇಶಕ ಎನ್ನಿಸಿಕೊಂಡಿರುವ ರಿಷಬ್ ಶೆಟ್ಟಿ ಹೊಸ ಅವತಾರವನ್ನ ಎತ್ತಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ರಿಷಬ್ ಶೆಟ್ಟಿ 'ಬೆಲ್ ಬಾಟಂ' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಸಿನಿಮಾದ ಪಾತ್ರಕ್ಕಾಗಿ ಭರ್ಜರಿ ತಯಾರಿಯನ್ನೂ ಮಾಡಿಕೊಂಡಿದ್ದರು.
ಇತ್ತೀಚಿಗಷ್ಟೇ ಬೆಲ್ ಬಾಟಂ ಸಿನಿಮಾದಲ್ಲಿನ ರಿಷಬ್ ಶೆಟ್ಟಿ ಪಾತ್ರದ ಫಸ್ಟ್ ಲುಕ್ ರಿವಿಲ್ ಆಗಿದೆ. 70 ರ ದಶಕದಲ್ಲಿ ನಡೆಯುವ ಕಥೆ ಆದ್ದರಿಂದ ರಿಷಬ್ ಹೇಗೆ ಕಾಣಿಸುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇತ್ತು. ಈಗ ಆ ಕೌತುಕಕ್ಕೆ ತೆರೆ ಬಿದ್ದಿದ್ದು ಟೈಟಲ್ ಗೆ ತಕ್ಕಂತೆ ರಿಷಬ್ ಲುಕ್ ಎಲ್ಲರನ್ನು ಮೆಚ್ಚಿಸುವಂತಿದೆ.

ರಿಷಬ್ ಶೆಟ್ಟಿ ಲುಕ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಕೆಲ ಅಭಿಮಾನಿಗಳು ದಿವಂಗತ ನಟ ಲೋಕೇಶ್ ರಂತೆ ಕಾಣಿಸುತ್ತಿದ್ದಾರೆ ಎನ್ನುವ ಅಭಿಪ್ರಾಯವನ್ನ ವ್ಯಕ್ತ ಪಡಿಸಿದ್ದಾರೆ. ರಿಷಬ್ ಶೆಟ್ಟಿ ಈ ಹಿಂದೆಯೂ ಸಾಕಷ್ಟು ಸಿನಿಮಾಗಳಲ್ಲಿ ಸಣ್ಣ ಪಾತ್ರಗಳನ್ನ ನಿರ್ವಹಿಸಿದ್ದರೂ ಕೂಡ ಬೆಲ್ ಬಾಟಂ ನಲ್ಲಿ ಹೇಗೆ ಕಾಣಿಸುತ್ತಾರೆ ಹಾಗೂ ಅಭಿನಯ ಹೇಗಿರುತ್ತದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ.

ಬೆಲ್ ಬಾಟಂ ಸಿನಿಮಾವನ್ನ ಜಯತೀರ್ಥ ನಿರ್ದೇಶನ ಮಾಡುತ್ತಿದ್ದು ಹರಿಪ್ರಿಯಾ ಹಾಗೂ ರಿಷಬ್ ಶೆಟ್ಟಿ ತೆರೆ ಮೇಲೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೋಗ್ ಫಾಲ್ಸ್ ನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ.


Click it and Unblock the Notifications











