»   » ಬೆಂಗಾಲಿ ನಟಿ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಾಲಿ ನಟಿ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

Posted By:
Subscribe to Filmibeat Kannada

ಬೆಂಗಾಲಿ ಸಿನಿಮಾ ಹಾಗೂ ಟಿವಿ ಧಾರಾವಾಹಿ ನಟಿ ಬಿತಾಸ್ತಾ ಸಹಾ ಅವರ ಶವ ಕಸ್ಬಾದಲ್ಲಿನ ಅವರ ಫ್ಲಾಟ್ ನಲ್ಲಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಇದು ಆತ್ಮ ಹತ್ಯೆ ಎಂದು ತಿಳಿದು ಬಂದಿದೆ.

ಬಿತಾಸ್ತಾ ಸಹಾ ಕೋಲ್ಕತ್ತಾದ ಕಸ್ಬಾ ಪ್ರದೇಶದ ಫ್ಲಾಟ್ ನಲ್ಲಿ ವಾಸವಿದ್ದರು. ನೆನ್ನೆ (ಫೆ.7) ಅವರ ಸ್ನೇಹಿತೆಯೊಬ್ಬರು ಕರೆ ಮಾಡಿದಾಗ, ಎಷ್ಟು ಭಾರಿ ಕರೆ ಮಾಡಿದರು ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಸ್ನೇಹಿತೆ ಅಪಾರ್ಟ್ ಮೆಂಟ್ ಬಳಿ ಹೋದಾಗ ಎಷ್ಟು ಬಾರಿ ಡೋರ್ ಬಡೆದರು ಸಹ ಓಪನ್ ಸಹ ಮಾಡಲಿಲ್ಲ. ನಂತರ ಸ್ಥಳೀಯ ಪೊಲೀಸರು ಮಾಹಿತಿ ತಿಳಿದು ಭೇಟಿ ನೀಡಿ ಡೋರ್ ಹೊಡೆದು ನೋಡಿದಾಗ, ಬಿತಸ್ತಾ ಅವರ ಕೊಳೆತ ಶವ ನೇಣು ಬಿಗಿದಿರುವ ಅವಸ್ಥೆಯಲ್ಲಿ ಇದ್ದ ಘಟನೆ ಬೆಳಕಿಗೆ ಬಂದಿದೆ.

Bengali actress Bitasta Saha found dead in apartment

"ಕೈಗಳ ಮೇಲೆ ಹಲವು ಗಾಯಗಳು ಕಂಡುಬಂದಿವೆ. ಘಟನೆ ಸ್ಥಳದಲ್ಲಿ ಕಂಡುಬಂದಿರುವ ಲಕ್ಷಣಗಳ ಪ್ರಕಾರ ಬಿತಾಸ್ತಾ ಸಹಾ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಹಾಗೆ ಕಾಣುತ್ತಿದೆ. ಆದರೆ ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ. ಶವದ ಸೊಂಟದ ಭಾಗದಲ್ಲಿ ಆಳವಾಗಿ ಸೀಳಿದ ಗಾಯದ ಗುರುತುಗಳು ಕಾಣಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ' ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ತನಿಖೆ ವೇಳೆ ಬಿತಾಸ್ತಾ ಸಹಾ ಅವರ ಫೇಸ್ ಬುಕ್ ಚೆಕ್ ಮಾಡಿದಾಗ, ಅವರು ಮಾನಸಿಕ ಖಿನ್ನತೆಗೆ ಒಳಗಾಗಿ ತಮ್ಮ ಜೀವನಕ್ಕೆ ಕೊನೆ ಹೇಳಿರುವ ಪೋಸ್ಟ್ ಒಂದನ್ನು ಹಾಕಿದ್ದಾರೆ ಎಂಬುದು ತಿಳಿದುಬಂದಿದೆ.

English summary
A semi-decomposed body of a small-time local actress of the Bengali entertainment industry was on Tuesday recovered from her flat in the southern part of the city's Kasba area, police said.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X