For Quick Alerts
  ALLOW NOTIFICATIONS  
  For Daily Alerts

  ವಿಚ್ಛೇದನ ಅರ್ಜಿ ವಿಚಾರಣೆ: ಕೋರ್ಟ್ ಗೆ ಸುದೀಪ್ ದಂಪತಿ ಗೈರು

  By Suneetha
  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಅವರ ಪತ್ನಿ ಪ್ರಿಯಾ ಸುದೀಪ್ ಅವರು ಸಲ್ಲಿಸಿದ್ದ ವಿಚ್ಛೇದನ ಅರ್ಜಿ ವಿಚಾರಣೆ ಮುಂದಕ್ಕೆ ಹೋಗಿದೆ.

  ಈ ಮೊದಲು ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ಸುದೀಪ್ ಅವರು ಇಂದು (ಏಪ್ರಿಲ್ 22) ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆ ಇದ್ದು, ನ್ಯಾಯಾಧೀಶರ ಮುಂದೆ ತಮ್ಮ ಹೇಳಿಕೆಯನ್ನು ನೀಡಲಿದ್ದಾರೆ. ಎಂದು ವರದಿಯಾಗಿತ್ತು.[14 ವರ್ಷದ ಸುದೀಪ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ: ಡೈವೋರ್ಸ್!]

  ಆದರೆ ಸುದೀಪ್ ದಂಪತಿಗಳು ಕೆಲಸಗಳಲ್ಲಿ ಬ್ಯುಸಿ ಇರುವ ಕಾರಣ ಕಾಲಾವಕಾಶ ಕೇಳಿರುವುದರಿಂದ ವಿಚ್ಛೇದನ ಸಂಬಂಧಿತ ವಿಚಾರಣೆ ಮುಂದಕ್ಕೆ ಹೋಗಿದೆ. ಇನ್ನು ಏಪ್ರಿಲ್ 27ಕ್ಕೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.

  2015ರ ಸೆಪ್ಟೆಂಬರ್ ನಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸುವ ಮೂಲಕ ತಮ್ಮ ಹದಿನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ವಿದಾಯ ಹೇಳಲು ಕಿಚ್ಚ ಸುದೀಪ್ ದಂಪತಿಗಳು ನಿರ್ಧರಿಸಿದ್ದಾರೆ.[ವೈಯುಕ್ತಿಕ ಜೀವನದ ಬಗ್ಗೆ ಕಿಚ್ಚ ಸುದೀಪ್ ಬಾಯ್ಬಿಟ್ಟ ಸತ್ಯ]

  ಕಳೆದ ಮಾರ್ಚ್ ತಿಂಗಳಿನಲ್ಲಿ ವಿಚ್ಛೇದನ ಅರ್ಜಿ ವಿಚಾರಣೆಗೆ ದಂಪತಿ ಹಾಜರಾಗದ ಕಾರಣ, ಬೆಂಗಳೂರಿನ ಒಂದನೇ ಕೌಟುಂಬಿಕ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು. ಸುದೀಪ್ ಪರವಾಗಿ ಅವರ ಸಹೋದರಿ ಪವರ್ ಆಫ್ ಅಟಾರ್ನಿ ಪಡೆದು ವಿಚ್ಛೇದನ ಅರ್ಜಿ ಸಲ್ಲಿಸಿದ್ದರು.[ಕಿಚ್ಚನ ದಾಂಪತ್ಯದಲ್ಲಿ ಕಿಚ್ಚು : ಸುದೀಪ್ ಹೇಳಿದ್ದೇನು?]

  ಇದೀಗ ಇಂದು ಕೂಡ ನಟ ಸುದೀಪ್ ಬದಲಾಗಿ ಅವರ ಸಹೋದರಿ ಕೋರ್ಟ್ ಗೆ ಆಗಮಿಸಿರುವುದರಿಂದ ವಿಚಾರಣೆಯ ಅವಧಿಯನ್ನು ಏಪ್ರಿಲ್ 27ಕ್ಕೆ ಮುಂದೂಡಲಾಗಿದೆ.

  English summary
  Bengaluru Family court to take up Kannada Actor Sudeep's Divorce petition On April 27th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X