For Quick Alerts
  ALLOW NOTIFICATIONS  
  For Daily Alerts

  'ಕರ್ನಾಟಕ ರತ್ನ' ಬಳಿಕ ಅಪ್ಪುಗೆ ಮತ್ತೊಂದು ಗೌರವ: ಆರ್ ಅಶೋಕ್ ಕೊಟ್ಟ ಮಾತೇನು?

  |

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಇತ್ತೀಚೆಗಷ್ಟೇ ಕರ್ನಾಟಕದ ಅತೀ ದೊಡ್ಡ ಪ್ರಶಸ್ತಿ 'ಕರ್ನಾಟಕ ರತ್ನ' ನೀಡಿ ಗೌರವಿಸಲಾಗಿದೆ. ಕನ್ನಡ ರಾಜ್ಯೋತ್ಸವದ ವಿಶೇಷ ದಿನದಂದೇ ಕರ್ನಾಟಕ ಸರ್ಕಾರ ವಿಶೇಷ ಗೌರವವನ್ನು ನೀಡಿ ಗೌರವಿಸಲಾಗಿದೆ.

  ಈ ವಿಶೇಷ ಸಂದರ್ಭಕ್ಕೆ ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಯಂಗ್ ಟೈಗರ್ ಜೂ.ಎನ್‌ಟಿಆರ್ ಸಾಕ್ಷಿಯಾಗಿದ್ದರು. ಸುಧಾಮೂರ್ತಿ ಕೂಡ ಕಾರ್ಯಕ್ರಮ ಪ್ರಮುಖ ಅತಿಥಿಯಾಗಿದ್ದರು. ಆದರೆ, ಮಳೆಯ ಕಾಟದಿಂದ ಅತಿಥಿಗಳು ಅಪ್ಪು ಬಗ್ಗೆ ತಮ್ಮ ಮನದಾಳದ ಮಾತನ್ನು ಆಡಲು ಸಾಧ್ಯವಾಗಿರಲಿಲ್ಲ.

  220 ಮಕ್ಕಳಿಗೆ 'ಗಂಧದ ಗುಡಿ' ಉಚಿತ ಶೋ: ಥಿಯೇಟರ್‌ ಒಳಗೆ ಅಪ್ಪು ಪುತ್ಥಳಿ ಸ್ಥಾಪನೆಗೆ ಮುಂದಾದ ಫ್ಯಾನ್ಸ್!220 ಮಕ್ಕಳಿಗೆ 'ಗಂಧದ ಗುಡಿ' ಉಚಿತ ಶೋ: ಥಿಯೇಟರ್‌ ಒಳಗೆ ಅಪ್ಪು ಪುತ್ಥಳಿ ಸ್ಥಾಪನೆಗೆ ಮುಂದಾದ ಫ್ಯಾನ್ಸ್!

  ಈಗ ರಾಜ್ಯ ಸರ್ಕಾರ ಪುನೀತ್‌ ರಾಜ್‌ಕುಮಾರ್‌ಗೆ ಮತ್ತೊಂದು ಗೌರವ ಸೂಚಿಸಲು ಮುಂದಾಗಿದೆ. ಬೆಂಗಳೂರಿನ ಪ್ರಮುಖ ಹಾಗೂ ಅತಿ ದೊಡ್ಡ ರಸ್ತೆಗೆ ಅಪ್ಪು ಹೆಸರನ್ನು ಇಡುವುದಕ್ಕೆ ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದಾರೆ.

   ಬೆಂಗಳೂರಿನ ಪ್ರಮುಖ ರಸ್ತೆಗೆ ಅಪ್ಪು ಹೆಸರು

  ಬೆಂಗಳೂರಿನ ಪ್ರಮುಖ ರಸ್ತೆಗೆ ಅಪ್ಪು ಹೆಸರು

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹೆಸರನ್ನು ಅಜರಾಮರಗೊಳಿಸುವುದಕ್ಕೆ ಸರ್ಕಾರ ಮುಂದಾಗಿದೆ. ಕರ್ನಾಟಕ ರತ್ನ ಬಳಿ ಮತ್ತೊಂದು ಗೌರವ ನೀಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಡಾ.ಪುನೀತ್ ರಾಜ್‌ಕುಮಾರ್ ಪುಣ್ಯಭೂಮಿ ಇರುವ ರಸ್ತೆಗೆ ಅಪ್ಪು ಹೆಸರನ್ನು ನಾಮಕರಣ ಮಾಡುವುದಕ್ಕೆ ಮುಂದಾಗಿದೆ. ಸುಮಾರು ಎಂಟು ಕಿಲೋ ಮೀಟರ್ ಉದ್ದದ ಈ ರಸ್ತೆಗೆ ಶೀಘ್ರದಲ್ಲಿಯೇ ಪುನೀತ್ ಹೆಸರು ನಾಮಕರಣ ಮಾಡುವುದಾಗಿ ಆರ್. ಅಶೋಕ್ ಹೇಳಿದ್ದಾರೆ.

   8 ಕಿಮೀ ಉದ್ದದ ರಸ್ತೆಗೆ ಪುನೀತ್ ಹೆಸರು

  8 ಕಿಮೀ ಉದ್ದದ ರಸ್ತೆಗೆ ಪುನೀತ್ ಹೆಸರು

  "ಈಗ ಪುನೀತ್ ಅವರ ಹೆಸರನ್ನು ರಸ್ತೆಗೆ ಇಡಬೇಕು ಅಂತ ತೀರ್ಮಾನ ಮಾಡಿದ್ದೇವೆ. ಒಂದು ದೊಡ್ಡ ರಸ್ತೆ ರಿಂಗ್‌ ರೋಡ್‌ಗೆ ಅವರ ಹೆಸರು ಇಡಬೇಕು ಎಂದು ತೀರ್ಮಾನಿಸಿದ್ದೇವೆ. ಅವರ ಸಮಾಧಿ ಇರುವಂತಹ ರಸ್ತೆಗೆ ಪುನೀತ್ ಅವರ ಹೆಸರನ್ನು ಇಡುವಂತಹ ಕೆಲಸ ಆಗುತ್ತಿದೆ. ಉದ್ಘಾಟನೆ ಆಗುವಂತೆ ಮಾಡಿ, ಅವರ ಹೆಸರನ್ನು ಅಜರಾಮರ ಆಗುವಂತೆ, ಸೂರ್ಯ-ಚಂದ್ರ ಇರುವವರೆಗೂ ಇರುವಂತೆ ಮಾಡಬೇಕಿದೆ. ಸುಮಾರು 8 ಕಿಲೋ ಮೀಟರ್ ರಸ್ತೆ, ಡಬಲ್ ರೋಡ್ ಅದು. ಅದಕ್ಕೆ ಪುನೀತ್ ರಾಜ್‌ಕುಮಾರ್ ಹೆಸರನ್ನು ಇಡಲಾಗುತ್ತಿದೆ." ಎಂದು ಪುನೀತ್ ರಾಜ್‌ಕುಮಾರ್ ಹೇಳಿದ್ದಾರೆ.

   ಮಳೆರಾಯ ಅವಕಾಶ ಕೊಡಲಿಲ್ಲ ಅನ್ನೋ ನೋವಿದೆ

  ಮಳೆರಾಯ ಅವಕಾಶ ಕೊಡಲಿಲ್ಲ ಅನ್ನೋ ನೋವಿದೆ

  "ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿದ್ದೇವೆ. ಬಹಳ ದೂರದಿಂದ ರಜನಿಕಾಂತ್‌ ಅವರು, ಜೂನಿಯರ್ ಎನ್‌ಟಿಆರ್ ಅವರು, ಸುಧಾಮೂರ್ತಿಯವರು ಮುಖ್ಯಮಂತ್ರಿಗಳು ಎಲ್ಲರೂ ಕೂಡ ಬಂದಿದ್ದರು. ಒಳ್ಳೆ ಕಾರ್ಯಕ್ರಮ ಆಯ್ತು. ನಾನು ಮತ್ತು ಸುನೀಲ್ ಇಬ್ಬರೂ ಆಯೋಜನೆ ಮಾಡಿದ್ದೆವು. ಮಳೆ ಬಂದು ತಣ್ಣೀರು ಎರಚಿ ಮನಸ್ಸಿಗೆ ಬೇಸರ ಆಯ್ತು. ಮಳೆರಾಯ ಒಂದು ಅರ್ಧಗಂಟೆ ಕೊಟ್ಟಿದ್ದರೆ, ಇನ್ನಷ್ಟು ಒಳ್ಳೆಯ ಕಾರ್ಯಕ್ರಮ ಆಗುತ್ತಿತ್ತು. ಬಂದಂತಹ ಅತಿಥಿಗಳಿಗೂ ಪುನೀತ್ ಅವರ ಬಗ್ಗೆ ಮಾತಾಡುವುದಕ್ಕೆ ಅನುಕೂಲವಾಗುತ್ತಿತ್ತು. ಆದರೆ, ಮಳೆರಾಯ ನಮಗೆ ಅವಕಾಶ ಕೊಡಲಿಲ್ಲ. ಆ ನೋವಿದೆ." ಎಂದು ಆರ್ ಅಶೋಕ್ ಹೇಳಿದ್ದಾರೆ.

   ರಸ್ತೆಗೆ ಪ್ರೀತಿಯಿಂದ ಪುನೀತ್ ಹೆಸರು

  ರಸ್ತೆಗೆ ಪ್ರೀತಿಯಿಂದ ಪುನೀತ್ ಹೆಸರು

  "ನವರಂಗ್‌ ಹತ್ತಿರ ರಾಜ್‌ಕುಮಾರ್ ರೋಡ್ ಅಂತ ಇದೆ. ಇವತ್ತಿಗೂ ಜನರ ರಾಜ್‌ಕುಮಾರ್ ರೋಡ್ ಅಂತಾನೇ ಆಗುತ್ತಿದೆ. ಶಾರ್ಟ್ ಫಾರ್ಮ್ ಆಗಿ ಕರೆದಿಲ್ಲ. ಮಹಾತ್ಮಗಾಂಧಿ ರಸ್ತೆಯನ್ನು ಎಂಜಿ ರಸ್ತೆ ಅಂತ ಮಾಡಿದ್ದಾರೆ. ಆದರೆ, ರಾಜ್‌ಕುಮಾರ್‌ ರಸ್ತೆಯನ್ನು ಪ್ರೀತಿಯಿಂದ ಹಾಗೇ ಕರೆಯುತ್ತಿದ್ದಾರೆ. ಎಂಜಿ ರಸ್ತೆಯನ್ನೂ ಹಾಗೇ ಕರೆಯಬೇಕು. ಆಗಲೇ ಒಂದು ಗೌರವ ಬರುತ್ತೆ. ಪುನೀತ್ ಅವರ ಹೆಸರನ್ನೂ ಕೂಡ ಹೀಗೆ ಇಡುವಂತಹ ಪ್ರಯತ್ನವನ್ನು ಮಾಡುತ್ತಿದ್ದೇವೆ." ಎಂದು ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ದಾರೆ.

  ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿ ಅಪ್ಪುಗೆ ಅರ್ಪಿಸಿದ ಪತ್ನಿ ಅಶ್ವಿನಿ, ಪುತ್ರಿ ವಂದಿತಾ!ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿ ಅಪ್ಪುಗೆ ಅರ್ಪಿಸಿದ ಪತ್ನಿ ಅಶ್ವಿನಿ, ಪುತ್ರಿ ವಂದಿತಾ!

  English summary
  Bengaluru Ring Road To Be Named After Puneeth Rajkumar Said R Ashok, Know More.
  Thursday, November 3, 2022, 17:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X