»   » 2014ರ ಸ್ಯಾಂಡಲ್ ವುಡ್ ನ ಲಕ್ಕಿ ಸ್ಟಾರ್ ಗಳು ಯಾರು?

2014ರ ಸ್ಯಾಂಡಲ್ ವುಡ್ ನ ಲಕ್ಕಿ ಸ್ಟಾರ್ ಗಳು ಯಾರು?

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ 2014ರ ಡಿಸೆಂಬರ್ ಬಂದೇಬಿಟ್ಟಿದೆ. ಹೊಸ ವರ್ಷದ ಹೊಸ್ತಿಲಲ್ಲಿರುವಾಗಲೇ, ಕಳೆದು ಹೋಗುತ್ತಿರುವ ಈ ವರ್ಷದ ನೆನಪುಗಳನ್ನ ಮೆಲುಕು ಹಾಕುವ ಸಮಯವಿದು. ಹೀಗಾಗಿ, ಗಾಂಧಿನಗರದ ಬಗ್ಗೆ ಕೊಂಚ ರಿವೈಂಡ್ ಮಾಡುವುದಾದರೆ, ಈ ವರ್ಷ ಕೆಲವರಿಗೆ ಕೊಂಚ ಸಿಹಿಯಾಗಿದ್ರೆ, ಇನ್ನೂ ಕೆಲವರಿಗೆ ಬರೀ ಕಹಿ.

  ನಿರೀಕ್ಷಿಸಿದ ಮಟ್ಟಕ್ಕೆ ಯಶಸ್ವಿಯಾಗದೆ, ಕೆಲ ಸ್ಟಾರ್ ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಮಕಾಡೆ ಮಲಗಿದ್ದರೆ, ಹೇಳಹೆಸರಿಲ್ಲದಂತೆ ತೆರೆಗೆ ಬಂದ ಸಿನಿಮಾಗಳು ಕೋಟಿ ಕೋಟಿ ಲೂಟಿ ಮಾಡಿದ ದಾಖಲೆಗಳು 2014ರಲ್ಲಿ ಅಚ್ಚಾಗಿವೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

  ಗೆದ್ದ ಸಿನಿಮಾಗಳ ನಡುವೆ ಪ್ರೇಕ್ಷಕರ ಮನಗೆದ್ದ ನಾಯಕ ಯಾರು? ಯಾವ ನಾಯಕ ನಟನಿಗೆ 2014 ಲಕ್ಕಿ ವರ್ಷವಾಗಿತ್ತು? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ...ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

  ರವಿಚಂದ್ರನ್ 'ದೃಶ್ಯ' ಕಾವ್ಯ

  ಕ್ರೇಜಿಸ್ಟಾರ್ ತೆರೆಮರೆಗೆ ಸರಿಯುತ್ತಿದ್ದಾರಲ್ಲಾ ಅಂತ ಕ್ರೇಜಿ ಅಭಿಮಾನಿಗಳು ಆತಂಕದಲ್ಲಿದ್ದಾಗಲೇ ಎಲ್ಲರ ಹುಬ್ಬೇರಿಸುವಂತೆ ರವಿಚಂದ್ರನ್, ಈ ವರ್ಷ ಗತಕಾಲವನ್ನು ಮರುಕಳಿಸಿದರು. 'ಕ್ರೇಜಿಸ್ಟಾರ್' ಚಿತ್ರದ ಮೂಲಕ ವರ್ಷಾರಂಭದಲ್ಲೇ ಖಾತೆ ಓಪನ್ ಮಾಡಿದ್ದ ರವಿಮಾಮ, 'ದೃಶ್ಯ' ಚಿತ್ರದ ಮೂಲಕ ಜನಮನ ಗೆಲ್ಲುವುದರ ಜೊತೆಗೆ ತಾವೀಗಲೂ 'ಬಾಕ್ಸಾಫೀಸ್ ಕಿಂಗ್' ಅನ್ನುವುದನ್ನ ಪ್ರೂವ್ ಮಾಡಿದರು. [ಚಿತ್ರ ವಿಮರ್ಶೆ: ರೋಚಕ ರವಿಚಂದ್ರನ್ 'ದೃಶ್ಯ' ವೈಭವ]

  ಗಲ್ಲಪೆಟ್ಟಿಗೆಗೆ ಶರಣ್ 'ಅಧ್ಯಕ್ಷ'

  ಕಾಮಿಡಿ ಖಿಲಾಡಿಯಿಂದ ಹೀರೋ ಆಗಿ ಪ್ರಮೋಟ್ ಆಗಿರುವ ಶರಣ್ ಗೆ ಕಳೆದ ವರ್ಷಕ್ಕಿಂತ ಈ ವರ್ಷ ಬೋನಸ್ ತುಸು ಹೆಚ್ಚಾಗಿ ಸಿಕ್ಕಿದೆ. 'ಸ್ತ್ರೀ' ಶರಣ್ ಆಗಿ ಜೈಲಲಿತಾ ಅವತಾರದಲ್ಲಿ ಕಚಗುಳಿ ಇಟ್ಟು ಮೋಡಿ ಮಾಡಿದ್ದ ಗಾಂಧಿನಗರದ ಈ 'ಅಧ್ಯಕ್ಷ'ರು 2014ರ ನಿರ್ಮಾಪಕರ ಡಾರ್ಲಿಂಗ್ ಆಗಿದ್ದಾರೆ. ['ಅಧ್ಯಕ್ಷ' ವಿಮರ್ಶೆ: ಕಡ್ಡಾಯವಾಗಿ ನಗುವವರಿಗೆ ಮಾತ್ರ]

  ಪುನೀತ್ 'ಪವರ್'

  ವರ್ಷಕ್ಕೆ ಒಂದೇ ಸಿನಿಮಾ ಮಾಡುವ ಪುನೀತ್ ರಾಜ್ ಕುಮಾರ್, 2014ರಲ್ಲಿ ತಮ್ಮ ಅಭಿಮಾನಿಗಳಿಗೆ 'ನಿನ್ನಿಂದಲೇ' ಮತ್ತು 'ಪವರ್ ***' ಚಿತ್ರಗಳ ಮೂಲಕ ಡಬಲ್ ಧಮಾಕಾ ನೀಡಿದರು. ನಿರೀಕ್ಷಿಸಿದ ಮಟ್ಟಕ್ಕೆ 'ನಿನ್ನಿಂದಲೇ' ಯಶಸ್ವಿಯಾಗದೇ ಇದ್ದರೂ, 'ಪವರ್ ***' ಚಿತ್ರ ಮಾತ್ರ ಪುನೀತ್ 'ಪವರ್'ನ ಸಾಬೀತು ಪಡಿಸಿತು. [ಚಿತ್ರ ವಿಮರ್ಶೆ: ಪುನೀತ್ 'ಪವರ್'ಫುಲ್ ಪರಮಾತ್ಮ]

  ಶ್ರೀಮುರುಳಿಯ 'ಉಗ್ರಂ' ಪ್ರತಾಪ

  ಗಾಂಧಿನಗರದ ಮಂದಿ ಬಹುತೇಕ ಮರತೇಬಿಟ್ಟಿದ್ದ ಶ್ರೀಮುರುಳಿ 'ಉಗ್ರಂ' ಚಿತ್ರದ ಮೂಲಕ ಬಿಗ್ ಕಮ್ ಬ್ಯಾಕ್ ಮಾಡಿದರು. ಶ್ರೀಮುರುಳಿಯ ಉಗ್ರ ಪ್ರತಾಪ ಹೇಗಿತ್ತು ಅಂದ್ರೆ, ಚಿತ್ರ ಶತಕ ಬಾರಿಸುವ ಜೊತೆಗೆ ಸ್ಯಾಂಡಲ್ ವುಡ್ ನ ಅಂದಿನ ಎಲ್ಲಾ ದಾಖಲೆಗಳನ್ನು ಅಳಿಸಿಹಾಕಿ ಹೊಸ ಅಲೆಯನ್ನೇ ಸೃಷ್ಟಿಸಿತು. [ಉಗ್ರಂ ಚಿತ್ರ ವಿಮರ್ಶೆ: ಚೊಚ್ಚಲ ನಿರ್ದೇಶಕನಿಗೊಂದು ಸಲಾಂ]

  ಗಜಕೇಸರಿ ಮೇಲೆ 'ಯಶ'ಸ್ಸಿನ ಸವಾರಿ

  'ಗಜಕೇಸರಿ' ಚಿತ್ರದ ಮೂಲಕ ಮತ್ತೊಂದು 100 ಡೇಸ್ ಸಿನಿಮಾ ಕೊಟ್ಟ ಖ್ಯಾತಿ ರಾಕಿಂಗ್ ಸ್ಟಾರ್ ಯಶ್ ಗೆ ಸಲ್ಲುತ್ತೆ. ವಿಭಿನ್ನ ಲುಕ್ ನಲ್ಲಿ, ಡಬಲ್ ರೋಲ್ ನಲ್ಲಿ 'ಗಜಕೇಸರಿ'ಯಾಗಿ ಮಿಂಚಿದ್ದ ಯಶ್, ಈ ವರ್ಷ ತಮ್ಮ ಅಭಿಮಾನಿ ಬಳಗವನ್ನು ಇನ್ನಷ್ಟು ಹೆಚ್ಚಿಸಿಕೊಂಡಿರುವುದಂತೂ ಸತ್ಯ. [ಚಿತ್ರ ವಿಮರ್ಶೆ: ರಾಕಿಂಗ್ ಸ್ಟಾರ್ ಯಶ್ 'ಗಜಕೇಸರಿ']

  'ಮಾಣಿಕ್ಯ' ಸುದೀಪ್

  ಕಿರುತೆರೆಯಲ್ಲೇ ಬಿಸಿಯಾಗಿದ್ದ ಕಿಚ್ಚ ಸುದೀಪ್, ನಟನೆಯ ಜೊತೆಗೆ ನಿರ್ದೇಶನದ ಹೊಣೆಯನ್ನೂ ಹೊತ್ತು ಈ ವರ್ಷ 'ಮಾಣಿಕ್ಯ' ಚಿತ್ರವನ್ನು ತೆರೆಗೆ ತಂದ್ರು. ಮಲ್ಲ ರವಿಚಂದ್ರನ್ ಜೊತೆ ನಟಿಸಿ ಸೈ ಅನಿಸಿಕೊಂಡ ಸುದೀಪ್, ಅಭಿಮಾನಿಗಳ ಮನಸ್ಸಲ್ಲಿ 2014ರ ಮರೆಯದ 'ಮಾಣಿಕ್ಯ'. [ಚಿತ್ರ ವಿಮರ್ಶೆ: ಮನ ಗೆದ್ದ ಸುದೀಪ್ 'ಮಾಣಿಕ್ಯ']

  ಉಪ್ಪಿ 'ಸೂಪರ್ ರಂಗ'

  ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಉಪ್ಪಿ ಕೊಂಚ ಡಲ್ ಆಗಿದ್ದಾರೆ. ಬಹುನಿರೀಕ್ಷೆಯೊಂದಿಗೆ ಉಪೇಂದ್ರ ಅಭಿನಯದ 'ಬ್ರಹ್ಮ' ಚಿತ್ರ ತೆರೆಗೆ ಬಂದರೂ, ಅಷ್ಟಾಗಿ ಕ್ಲಿಕ್ ಆಗ್ಲಿಲ್ಲ. ಆದ್ರೆ, ರೀಮೇಕ್ ಆಗಿದ್ದ 'ಸೂಪರ್ ರಂಗ' ಚಿತ್ರವನ್ನು ನೋಡಿ ಉಪ್ಪಿ ಅಭಿಮಾನಿಗಳು ಸೂಪರ್ ಅಂದಿದ್ದು ನಿಜ. [ಚಿತ್ರ ವಿಮರ್ಶೆ: ರಂಗನ ಕಿಕ್ ಗೆ ಪ್ರೇಕ್ಷಕ ಕ್ಲೀನ್ ಬೌಲ್ಡ್]

  'ಬೆಳ್ಳಿ'ರಥದಲ್ಲಿ ಶಿವಣ್ಣ

  ಸೆಂಚುರಿ ಸ್ಟಾರ್ ಶಿವಣ್ಣ ಈ ವರ್ಷ ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡಿದ್ದು ಎರಡು ಚಿತ್ರಗಳಲ್ಲಿ. ಲಕ್ಕಿ ಸ್ಟಾರ್ ರಮ್ಯಾಗೆ ಕೋಚ್ 'ಆರ್ಯನ್' ಆಗಿದ್ದ ಶಿವಣ್ಣ, 'ಬೆಳ್ಳಿ'ಯಲ್ಲಿ 5 ಇನ್ 1 ಲಾಂಗ್ ಹಿಡಿದು ಮೋಡಿ ಮಾಡಿದ್ರು. ಹೇಳಿಕೇಳಿ ಈ ಎರಡೂ ಶಿವಣ್ಣನ ಸಿನಿಮಾಗಳು, ಹೀಗಾಗಿ ಶಿವಭಕ್ತರಿಗೆ ಅದು ವರವಾದರೆ, ನಿರ್ಮಾಪಕರಿಗೆ ಲಾಭ ಆಯ್ತು. [ಬೆಳ್ಳಿ ವಿಮರ್ಶೆ: ಮರೆಯಲಾಗದ 'ಲಾಂಗ್' ಸ್ಟೋರಿ]

  'ಅಭಿಮನ್ಯು' ಅರ್ಜುನ್ ಸರ್ಜಾ

  ಸ್ಯಾಂಡಲ್ ವುಡ್ ನಲ್ಲಿ ಹಿಂದೆಂದಿಗಿಂತಲೂ ಬಿಗ್ ಕಮ್ ಬ್ಯಾಕ್ ಕೊಟ್ಟು, ಗಲ್ಲಪೆಟ್ಟಿಗೆಯನ್ನು ಲೂಟಿ ಹೊಡೆದ ನಟ ಅರ್ಜುನ್ ಸರ್ಜಾ. 'ಅಭಿಮನ್ಯು' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕನಾಗಿ ಗುರುತಿಸಿಕೊಂಡ ಅರ್ಜುನ್ ಸರ್ಜಾ, ಕಮರ್ಶೀಯಲ್ಲಾಗಿ ಹೆಸರು ಮಾಡುವುದರ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿದ್ದಾರೆ. [ಅಭಿಮನ್ಯು ವಿಮರ್ಶೆ: ಕುಟುಂಬ ಸಮೇತ ಹೋಗಿ ನೋಡಿ]

  'ಅಂಬರೀಶ'ನಾದ ದರ್ಶನ್

  ಈ ವರ್ಷಾಂತ್ಯದ ಹೊತ್ತಲ್ಲಿ ಸದ್ದು-ಗದ್ದಲದೊಂದಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೆರೆಮೇಲೆ ಬಂದಿದ್ದು ರೆಬೆಲ್ ಸ್ಟಾರ್‌ ಅಂಬರೀಷ್ ಜೊತೆ 'ಅಂಬರೀಶ'ನಾಗಿ. ಬಿಡುಗಡೆಯಾದ ಬೆರಳೆಣಿಕೆಯ ದಿನಗಳಲ್ಲೇ ಕೋಟಿ ಕೋಟಿ ಕಲೆಕ್ಷನ್ ಮಾಡಿ, ದರ್ಶನ್ ಮತ್ತೊಮ್ಮೆ 'ಬಾಕ್ಸಾಫೀಸ್ ಸುಲ್ತಾನ್' ಆಗಿದ್ದಾರೆ. [ಮಾಸ್ ಪ್ರೇಕ್ಷಕರಿಗೆ 'ಅಂಬರೀಶ' ಹಬ್ಬದೂಟ]

  'ಬಹದ್ದೂರ್' ಧೃವಗೆ ಬಹುಪರಾಕ್

  ನಟಿಸಿರುವುದು ಎರಡೇ ಸಿನಿಮಾ ಆದರೂ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟ ಧೃವ ಸರ್ಜಾ. ಗಾಂಧಿನಗರದಲ್ಲಿ ಮೇನ್ ಥಿಯೇಟರ್ ಸಿಗುವುದೇ ಕಷ್ಟ. ಸಿಕ್ಕರೂ ಮೂರೇ ವಾರಕ್ಕೆ ಚಿತ್ರಮಂದಿರದಿಂದ ಚಿತ್ರ ಎತ್ತಂಗಡಿ. ಅಂತದ್ರಲ್ಲಿ ಶತಕ ಬಾರಿಸೋಕೆ ಚಿತ್ರಮಂದಿರಗಳಲ್ಲಿ ಗಟ್ಟಿಯಾಗಿ ನೆಲೆಯೂರಿರುವ ಚಿತ್ರ 'ಬಹದ್ದೂರ್'. ಅಂದ್ಮೇಲೆ 'ಬಹದ್ದೂರ್' ಮತ್ತು 'ಧೃವ'ಗೆ ಬಹುಪರಾಕ್ ಹೇಳಲೇಬೇಕಲ್ವಾ! [ಬಹದ್ದೂರ್ ವಿಮರ್ಶೆ : ಅದ್ದೂರಿ, ಕಲರ್ ಫುಲ್ ಪ್ರೇಮ ಪಯಣ]

  'ಉಳಿದವರು ಕಂಡಂತೆ' ರಕ್ಷಿತ್

  ಸಿಂಪಲ್ ಹುಡುಗ ರಕ್ಷಿತ್ ನಟಿಸಿ, ನಿರ್ದೇಶಿಸಿದ ಚಿತ್ರ ಉಳಿದವರು ಕಂಡಂತೆ. ಸಿಂಪಲ್ ಹುಡುಗನ ಈ ಸಾಹಸ ಕೆಲವರಿಗೆ ಇಷ್ಟವಾಗಿದ್ರೆ, ಇನ್ನೂ ಕೆಲವರಿಗೆ ಕಷ್ಟಕಷ್ಟ. ಆದರೂ ರಕ್ಷಿತ್ ಗೆ ಜೈ ಅನ್ನುವವರ ಸಂಖ್ಯೆ ದೊಡ್ಡದಿದೆ. [ಉಳಿದವರು ಕಂಡಂತೆ: ಗೊಂದಲ, ಸಸ್ಪೆನ್ಸ್, ನಿರಂತರ]

  ಗಣೇಶ್ 'ದಿಲ್ ರಂಗೀಲಾ'

  ಕಿರುತೆರೆಯಲ್ಲಿ ಬಿಜಿಯಾಗಿರುವ ಗೋಲ್ಡನ್ ಸ್ಟಾರ್ ಗಣೇಶ್, ಈ ವರ್ಷ 'ಬುಲ್ ಬುಲ್' ಬೆಡಗಿ ಜೊತೆ ಕಾಣಿಸಿಕೊಂಡಿದ್ದು 'ದಿಲ್ ರಂಗೀಲಾ' ಚಿತ್ರದಲ್ಲಿ. ಸಿಕ್ಸ್ ಪ್ಯಾಕ್ ಹಾಕಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡ ಗಣಿ, ತಮ್ಮ ಅಭಿಮಾನಿಗಳ ದಿಲ್ ಖುಷ್ ಮಾಡಿದ್ರು. ['ದಿಲ್ ರಂಗೀಲಾ': ಸವಕಲು ಕಥೆ ಹೊಸ ನಿರೂಪಣೆ ]

  'ಸಿಂಹಾದ್ರಿ'ಯ ಸಿಂಹ ದುನಿಯಾ ವಿಜಿ

  'ಶಿವಾಜಿನಗರ'ದಲ್ಲಿ ಲಾಂಗ್ ಹಿಡಿದು ದರ್ಬಾರ್ ಮಾಡಿದ್ದ ದುನಿಯಾ ವಿಜಿ 'ಸಿಂಹಾದ್ರಿ' ಚಿತ್ರದಲ್ಲಿ ಪ್ರೀತಿಯ ಅಣ್ಣನಾಗಿ ಹೆಂಗಳೆಯರ ಮನಗೆದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ರೀಲ್ ಮತ್ತು ರಿಯಲ್ ಲೈಫ್ ನಲ್ಲೆರಡರಲ್ಲೂ 2014 ದುನಿಯಾ ವಿಜಿ ಪಾಲಿಗೆ ಲಕ್ಕಿ. [ಸಿಂಹಾದ್ರಿ ಚಿತ್ರವಿಮರ್ಶೆ: ನಾಡಿನ ಸಮಸ್ತ ತಂಗಿಯರಿಗೆ ಅರ್ಪಣೆ]

  English summary
  2014 saw a huge string of flop and hit series of Kannada Movies. Here is the list of Top Actors of Sandalwood, who managed to give power packed performance in this year.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more