For Quick Alerts
  ALLOW NOTIFICATIONS  
  For Daily Alerts

  ಈ ವರ್ಷ ಸ್ಟಾರ್ ಕಿರೀಟ ತೊಟ್ಟ ನಟಿ ಯಾರು?

  |
  ಈ ವರ್ಷ ಸ್ಟಾರ್ ಕಿರೀಟ ತೊಟ್ಟ ನಟಿ ಯಾರು? |FILMIBEAT KANNADA

  2018ರಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳು ಕನ್ನಡದಲ್ಲಿ ಬಿಡುಗಡೆಯಾಗಿವೆ. ಅದೆಷ್ಟೋ ನಟಿಯರು ಬಂದು ಹೋಗಿದ್ದರೆ. ಇವರಲ್ಲಿ ಕೆಲವು ಮಾತ್ರ ಗೆಲುವು ಪಡೆದು ತಮ್ಮ ಇರುವಿಕೆಯನ್ನು ಸಾಬೀತು ಮಾಡಿದ್ದಾರೆ.

  ವಿಶೇಷ ಅಂದರೆ, ಈ ವರ್ಷ ಬೇರೆ ಭಾಷೆಯ ನಟಿಯರು ಕನ್ನಡಕ್ಕೆ ಬಂದಿದ್ದು ತೀರ ಕಡಿಮೆ. ಬಿಗ್ ಸ್ಟಾರ್ ಗಳ ಚಿತ್ರಗಳು ಕಡಿಮೆ ಇರುವ ಕಾರಣ ಈ ವರ್ಷ ಬೇರೆ ಭಾಷೆಯ ದೊಡ್ಡ ನಟಿಯರ ಆಗಮನ ಕಡಿಮೆ ಆಗಿರಬಹುದು. ಆಮಿ ಜಾಕ್ಸನ್ ಬಿಟ್ಟರೆ ಬೇರೆ ಭಾಷೆಯ ನಟಿಯರು ಕನ್ನಡದಲ್ಲಿ ಕಾಣಿಸಿಕೊಳ್ಳಲಿಲ್ಲ.

  ಸ್ಯಾಂಡಲ್ ವುಡ್ ಸುಂದರಿಯರಾದ ರಚಿತಾ ರಾಮ್, ಆಶಿಕಾ ರಂಗನಾಥ್, ಹರಿಪ್ರಿಯಾ, ಮಾನ್ವಿತಾ ಹರೀಶ್ ಈ ವರ್ಷ ಯಶಸ್ವಿ ಸಿನಿಮಾಗಳನ್ನ ನೀಡಿದ್ದಾರೆ. ಮತ್ತೊಂದು ಕಡೆ ರಾಧಿಕಾ ಪಂಡಿತ್ ಅವರ ಯಾವ ಸಿನಿಮಾ ಈ ವರ್ಷ ಬರಲಿಲ್ಲ. ರಶ್ಮಿಕಾ ಮಂದಣ್ಣ ಮೂರು ತೆಲುಗು ಸಿನಿಮಾ ಮಾಡಿದ್ದು ಬಿಟ್ಟರೆ, ಕನ್ನಡದಲ್ಲಿ ಅವರ ಯಾವ ಸಿನಿಮಾಗಳು ಬಿಡುಗಡೆಯಾಗಲಿಲ್ಲ.

  ಸಂದರ್ಶನ: ಪ್ರಶಸ್ತಿಗಳು ಕಲಾವಿದರ ಬಲ ಹೆಚ್ಚಿಸುತ್ತೆ-ತಾರಾ

  ಅಂದಹಾಗೆ, ಈ ವರ್ಷ ಕನ್ನಡದ ನಟಿಯರ ಸಿನಿಮಾಗಳ ಪಟ್ಟಿ ಹಾಗೂ ಗೆಲುವು ಸೋಲಿನ ಲೆಕ್ಕಾಚಾರ ಮುಂದಿದೆ ಓದಿ...

  ತಾರಾ ಪಾಲಿಗೆ ಪ್ರಶಸ್ತಿಗಳು

  ತಾರಾ ಪಾಲಿಗೆ ಪ್ರಶಸ್ತಿಗಳು

  ನಟಿ ತಾರ ಅನುರಾಧ ಈ ವರ್ಷ 'ಹೆಬ್ಬೆಟ್ ರಾಮಕ್ಕ' ಸಿನಿಮಾ ಮಾಡಿದ್ದರು. ಈ ಸಿನಿಮಾ ತಾರಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ. ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿಯನ್ನು ತಾರ ಈ ಸಿನಿಮಾಗೆ ಪಡೆದುಕೊಂಡರು. ವಿಶೇಷ ಅಂದ್ರೆ, ಇದೇ ಚಿತ್ರಕ್ಕೆ 2017ನೇ ಸಾಲಿನ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿದೆ. ಮತ್ತೆ ತಮ್ಮ ಅಮೋಘ ನಟನೆಯ ಮೂಲಕ ತಾರ ಗೆದ್ದಿದ್ದಾರೆ.

  ಈ ವರ್ಷ ಯಾವ ನಟರ ಸಿನಿಮಾ ಎಷ್ಟು, ಯಾರು ಬೆಸ್ಟು?

  ರಚಿತಾಗೆ ಸಿಹಿ ಒಂದು, ಕಹಿ ಒಂದು

  ರಚಿತಾಗೆ ಸಿಹಿ ಒಂದು, ಕಹಿ ಒಂದು

  ಸ್ಟಾರ್ ನಟಿ ರಚಿತಾ ರಾಮ್ ಈ ವರ್ಷ ಎರಡು ಸಿನಿಮಾ ಮಾಡಿದ್ದಾರೆ. ಅದರಲ್ಲಿ 'ಅಯೋಗ್ಯ' ಸೂಪರ್ ಹಿಟ್ ಆಗಿದೆ. ಮಂಡ್ಯದ ಜನ ಮನೆ ಮಗಳಾಗಿ ರಚಿತಾರನ್ನು ಸ್ವೀಕರಿಸಿದ್ದಾರೆ. ಇನ್ನು 'ಜಾನಿ ಜಾನಿ ಎಸ್ ಪಪ್ಪಾ' ಸಿನಿಮಾ ಅದೆಕೋ ಹೇಳಿಕೊಳ್ಳುವ ಮಟ್ಟಿಗೆ ಯಶಸ್ಸು ಕಾಣಲಿಲ್ಲ.

  ಈ ವರ್ಷ ಕನ್ನಡದ 'ಸ್ಟಾರ್' ನಟಿಯ ಪಟ್ಟ ಯಾರಿಗೆ?

  ಆಶಿಕಾ ಇನ್ ಡಿಮ್ಯಾಂಡ್

  ಆಶಿಕಾ ಇನ್ ಡಿಮ್ಯಾಂಡ್

  ಆಶಿಕಾ ರಂಗನಾಥ್ ಈ ವರ್ಷದ ತುಂಬ ಬ್ಯುಸಿ ಇದ್ದರು. 'ರಾಜು ಕನ್ನಡ ಮೀಡಿಯಾಂ', 'ರಾಂಬೋ 2' ಹಾಗೂ 'ತಾಯಿಗೆ ತಕ್ಕ ಮಗ' ಅವರ ನಟನೆಯಲ್ಲಿ ಈ ವರ್ಷ ಬಿಡುಗಡೆಯಾದ ಸಿನಿಮಾಗಳಾಗಿವೆ. ಇವುಗಳಲ್ಲಿ ರಾಂಬೋ 2' ಚಿತ್ರ ಸೆಂಚುರಿ ಬಾರಿಸಿದೆ. 'ರಾಜು ಕನ್ನಡ ಮೀಡಿಯಾಂ' ಓಕೆ ಓಕೆ ಎನಿದಿದೆ. ಆದರೆ, 'ತಾಯಿಗೆ ತಕ್ಕ ಮಗ' ಬಂದ ವೇಗದಲ್ಲಿಯೇ ಮರೆಯಾಗಿಯ್ತು.

  ಈ ವರ್ಷ ರೀಮೇಕ್ ಚಿತ್ರಗಳಿಗೆ ಸೋಲು, ಗೆದ್ದಿದ್ದು ಒಂದೆರೆಡು ಮಾತ್ರ.!

  ಹರಿಪ್ರಿಯಾ ನಾಲ್ಕು ಸಿನಿಮಾ

  ಹರಿಪ್ರಿಯಾ ನಾಲ್ಕು ಸಿನಿಮಾ

  ಹರಿಪ್ರಿಯಾ ಸಿನಿಮಾಗಳ ಸಂಖ್ಯೆ ಬೆಳೆಯುತ್ತಲೇ ಇದೆ. ಈ ವರ್ಷ ಅವರು ನಾಲ್ಕು ಸಿನಿಮಾ ಮಾಡಿದ್ದು, ಅದರಲ್ಲಿ ಒಂದು ತೆಲುಗು ಸಿನಿಮಾ ಸೇರಿಕೊಂಡಿತ್ತು. 'ಕನಕ, 'ಸಂಹಾರ', 'ಲೈಫ್ ಜೊತೆ ಒಂದ್ ಸೆಲ್ಫಿ' ಈ ಮೂರು ಸಿನಿಮಾಗಳು ದೊಡ್ಡ ಹಿಟ್ ಆಗಲಿಲ್ಲ. ಆದರೂ ಹರಿಪ್ರಿಯಾ ಹೊಸ ಹೊಸ ಪಾತ್ರಗಳನ್ನು ಪ್ರಯತ್ನ ಮಾಡುತ್ತಿದ್ದಾರೆ.

  'ಟಗರು' ಹಾಗೂ 'ಕನಕ'ನ ಜೊತೆ ಮಾನ್ವಿತಾ

  'ಟಗರು' ಹಾಗೂ 'ಕನಕ'ನ ಜೊತೆ ಮಾನ್ವಿತಾ

  ನಟಿ ಮಾನ್ವಿತಾ ಕಾಮತ್ ಈ ವರ್ಷ ಎರಡು ಸಿನಿಮಾದಲ್ಲಿ ನಟಿಸಿದರು. ಇವುಗಳಲ್ಲಿ 'ಟಗರು' ದೊಡ್ಡ ಯಶಸ್ಸು ಗಳಿಸಿತು. ಜನರು ಮಾತ್ರವಲ್ಲದೆ ರಾಮ್ ಗೋಪಾಲ್ ವರ್ಮ ಅವರೇ ಮಾನ್ವಿತಾ ನಟನೆಗೆ ಜೈಕಾರ ಹಾಕಿದರು. ಆದರೆ, ದುನಿಯಾ ವಿಜಯ್ ಜೊತೆಗೆ ಅಭಿನಯಿಸಿದ್ದ 'ಕನಕ' ಜಯಶಾಲಿಯಾಗಲಿಲ್ಲ.

  ಮೇಘನಾ, ರಾಗಿಣಿ ಸಾಹಸ

  ಮೇಘನಾ, ರಾಗಿಣಿ ಸಾಹಸ

  ಇವುಗಳ ನಡುವೆಯೇ ಕೆಲವು ನಟಿಯರು ಒಳ್ಳೆಯ ಪ್ರಯತ್ನದ ಸಿನಿಮಾ ಮಾಡಿದರು. ಈ ಪೈಕಿ ಮೇಘನಾ ರಾಜ್ 'ಇರುವುದೆಲ್ಲವ ಬಿಟ್ಟು' ಸಿನಿಮಾದ ಮೂಲಕ ತಮ್ಮ ನಟನ ಸಾಮರ್ಥ್ಯವನ್ನ ಸಾಬೀತು ಮಾಡಿದರು. ರಾಗಿಣಿ ದ್ವಿವೇದಿ ಸಹ 'ದಿ ಟೆರರಿಸ್ಟರ್' ಮೂಲಕ ಹೊಸ ಸಾಹಸ ಮಾಡಿದರು. ಈ ಸಿನಿಮಾಗಳ ಪಲಿತಾಂಶ ಏನೇ ಇದ್ದರೂ ಅವರ ಪ್ರಯತ್ನಕ್ಕೆ ಸಲಾಮ್.

  ಒಂದು ಸಿನಿಮಾಗೆ ಸುಸ್ತು

  ಒಂದು ಸಿನಿಮಾಗೆ ಸುಸ್ತು

  ನಟಿ ಪ್ರಿಯಾಂಕ ಉಪೇಂದ್ರ 'ಸೆಕೆಂಡ್ ಹಾಫ್', ಪೂಜಾಗಾಂಧಿ 'ದಂಡುಪಾಳ್ಯ 3', ಸಿಂಧು ಲೋಕನಾಥ್ 'ಹೀಗೊಂದು ದಿನ', ಶ್ರುತಿ ಹರಿಹರನ್ 'ಅಂಬಿ ನಿಂಗೆ ವಯಸ್ತಾಯ್ತೋ' ಹಾಗೂ ಶೀತಲ್ ಶೆಟ್ಟಿ 'ಪತಿ ಬೇಕು.ಕಾಮ್' ಸಿನಿಮಾಗಳನ್ನು ಮಾಡಿದರು. ಈ ನಾಲ್ಕು ನಟಿಯರು ಈ ವರ್ಷ ಒಂದೇ ಒಂದು ಸಿನಿಮಾ ಮಾಡಿದರು. ಇವುಗಳಲ್ಲಿ ಮೂರು ಸಿನಿಮಾಗಳ ಮಹಿಳಾ ಪ್ರಧಾನವಾಗಿತ್ತು.

  ಉಳಿದ ನಟಿಯರು, ಒಂದಷ್ಟು ಸಿನಿಮಾಗಳು

  ಉಳಿದ ನಟಿಯರು, ಒಂದಷ್ಟು ಸಿನಿಮಾಗಳು

  ನಟಿ ಸೋನು ಗೌಡ ಈ ವರ್ಷ 'ಗುಳ್ಟು', 'ಒಂಥರಾ ಬಣ್ಣಗಳು' ಹಾಗೂ 'ಕಾನೂರಾಯಣ' ಸಿನಿಮಾಗಳಲ್ಲಿ ನಟಿಸಿದ್ದು, ಇವುಗಳಲ್ಲಿ 'ಗುಳ್ಟು' ಹಿಟ್ ಆಯ್ತು. ಅನುಪಮ ಗೌಡ ತಮ್ಮ ನಟನೆ ಮೂಲಕ 'ಆ ಕರಾಳ ರಾತ್ರಿ' ಹಾಗೂ 'ಪುಟ 109' ಸಿನಿಮಾಗಳಲ್ಲಿ ಗಮನ ಸೆಳೆದರು. ರಾಧಿಕಾ ಚೇತನ್ 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಹಾಗೂ 'ಅಸತೋಮ ಸದ್ಗಮಯ' ಸಿನಿಮಾ ಮಾಡಿದ್ದರು. ಆದರೆ, ಆ ಎರಡೂ ಚಿತ್ರಗಳು ಕೈ ಕೊಟ್ಟವು.

  English summary
  Year end special, sandalwood heroine movies in 2018.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X