Don't Miss!
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Sports
IND vs NZ: ಭಾರತ ತಂಡದ ಡ್ರೆಸ್ಸಿಂಗ್ ರೂಂಗೆ ದಿಢೀರ್ ಭೇಟಿ ನೀಡಿದ ಎಂಎಸ್ ಧೋನಿ; ವಿಡಿಯೋ
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕನ್ನಡ ಚಿತ್ರರಂಗದಲ್ಲಿ ಅರಳಿರುವ ಹೊಸ ಹೂವುಗಳು
ಸಿನಿಮಾದಲ್ಲಿ ಒಂದು ಚಾನ್ಸ್ ಸಿಗುತ್ತೇ ಅಂದ್ರೆ ಯಾರು ತಾನೆ ಬೇಡ ಅನ್ನಲ್ಲ ಹೇಳಿ? ಮೊದಲ ಪ್ರೀತಿಯ ಹಾಗೆ ಮೊದಲ ಸಿನೆಮಾ ಅಂದ್ರೆ ಏನೋ ಒಂಥರಾ ಥ್ರಿಲ್. ಇಂಥ ರೋಮಾಂಚನ ಅನುಭವಿಸಿಕೊಂಡವರಲ್ಲಿ ಹಲವಾರು ಹೊಸ ಪ್ರತಿಭೆಗಳು ಯಶಸ್ಸಿನ ರುಚಿ ಉಂಡಿವೆ.
ಇದು ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಉತ್ತಮವಾದ ಬೆಳವಣಿಗೆ. ಹಳೆ ನೀರು ಕೊಚ್ಚಿ ಹೋಗದಿದ್ದರೂ, ಹೊಸ ನೀರು ಹರಿದು ಬರುತ್ತಿರಲೇಬೇಕು. 2015 ನಿಜಕ್ಕೂ ಹೊಸಬರಿಗೆ ಹೊಸ ಅವಕಾಶಗಳನ್ನು ತೆರೆದಿಟ್ಟಂಥ ವರ್ಷ. ನಟ, ನಟಿ, ನಿರ್ದೇಶಕ, ತಂತ್ರಜ್ಞರು ಮೊದಲ ಸಿನೆಮಾದಲ್ಲೇ ತಮ್ಮ ಛಾಪನ್ನು ಮೂಡಿಸಿ ಭರವಸೆಯ ಬೆಳಕು ಹರಿಸಿದ್ದಾರೆ.
2015ರಲ್ಲಿ ತೆರೆಕಂಡಿರುವ ರಾಧಿಕಾ ಪಂಡಿತ್ ಹಾಗೂ ಬಹು ಬೇಡಿಕೆಯ ನಟ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರಕ್ಕೆ ಮೊಟ್ಟ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ಸಂತೋಷ್ ಆನಂದ್ರಾಮ್ ಅವರು ಭರ್ಜರಿ ಯಶಸ್ಸನ್ನು ಕಂಡರು. [2015ರಲ್ಲಿ ಚಂದನವನವನ್ನು ಬೆಳಗಿದ ಅತ್ಯುತ್ತಮ 10 ಚಿತ್ರಗಳು]
ಈ ಚಿತ್ರ ಸುಮಾರು 200 ದಿನಗಳು ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡು 2015ರ ಸೂಪರ್ ಹಿಟ್ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದ ನಂತರ ಸಿದ್ಧಾರ್ಥ, ಮೈತ್ರಿ, ಕೃಷ್ಣನ್ ಲವ್ ಸ್ಟೋರಿ, ರಣವಿಕ್ರಮ, ರನ್ನ, ವಜ್ರಕಾಯ ಮತ್ತು ಗಣಪ ಸೇರಿದಂತೆ ಹಲವು ಕನ್ನಡ ಸಿನಿಮಾಗಳು ತೆರೆಕಂಡವು.
ಈ ಚಿತ್ರಕ್ಕಿಂತಲೂ ದೊಡ್ಡ ಯಶಸ್ಸು ಮತ್ತು ಅಚ್ಚರಿ ಮೂಡಿಸಿದ್ದ ಚಿತ್ರವೆಂದರೆ 'ರಂಗಿತರಂಗ'. ಅನೂಪ್ ಭಂಡಾರಿ ಪ್ರಥಮ ನಿರ್ದೇಶನದ, ನಿರೂಪ್ ಭಂಜಾರಿ, ರಾಧಿಕಾ ಚೇತನ್, ಅವಂತಿಕಾ ಪ್ರಥಮ ಬಾರಿ ಬಣ್ಣ ಬಳಿದುಕೊಂಡ ಚಿತ್ರ ಗಳಿಸಿದ ಪ್ರಶಸ್ತಿಗಳನ್ನಿಡಲು ಸಣ್ಣ ಶೋಕೇಸ್ ಸಾಲುವುದಿಲ್ಲ. ಈ ಚಿತ್ರದ ಯಶಸ್ಸಿನ ನಾಗಾಲೋಟ ಇನ್ನೂ ಸಾಗಿದೆ. [ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದ 'ರಂಗಿತರಂಗ']
ಕಳೆದ ವರ್ಷ ಸೆಪ್ಟಂಬರ್ 11ರಂದು ತೆರೆಕಂಡ 'ದುನಿಯಾ' ಸೂರಿ ನಿರ್ದೇಶನದ ಸಂತೋಷ್ ರಿವಾ ಮತ್ತು ಮನ್ವಿತಾ ಹರೀಶ್ ಜೋಡಿಯ 'ಕೆಂಡಸಂಪಿಗೆ' ಚಿತ್ರ ಕರ್ನಾಟಕದಲ್ಲಿ ಮಾತ್ರವಲ್ಲದೆ ಜಗತ್ತಿನಾಂಧ್ಯಂತ ಅಲೆ ಎಬ್ಬಿಸಿದೆ. ಹೀಗೆ ಚಿತ್ರಪ್ರೇಮಿಗಳನ್ನು ಸೆಳೆದವರು ಒಬ್ಬರಾ, ಇಬ್ಬರಾ? ಅವರು ಯಾರ್ಯಾರೆಂದು ಕೆಳಗಿನ ಚಿತ್ರಗಳಲ್ಲಿ ನೋಡುತ್ತಾ ಹೋಗಿರಿ. ['ಕೆಂಡಸಂಪಿಗೆ' ವಿಮರ್ಶೆ - ಸೂರಿಯ ಹೊಸ 'ದುನಿಯಾ']