»   » 'ಬೆತ್ತನಗೆರೆ' ಸೀನನ್ನ ಕೊಚ್ಚಿ ಹಾಕಿದ ಸೆನ್ಸಾರ್ ಮಂಡಳಿ

'ಬೆತ್ತನಗೆರೆ' ಸೀನನ್ನ ಕೊಚ್ಚಿ ಹಾಕಿದ ಸೆನ್ಸಾರ್ ಮಂಡಳಿ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಆಗಿದೆ. ಆ ದಾಖಲೆ ಯಾವುದು ಅಂತ ಕೇಳಿದ್ರೆ, ನೀವು ಕಣ್ಣು-ಬಾಯಿ ಬಿಡುತ್ತೀರಾ. ಅಂತಹ ರೆಕಾರ್ಡ್ ಗೆ ಪಾತ್ರವಾಗಿರುವುದು ಕನ್ನಡ ಚಿತ್ರ 'ಬೆತ್ತನಗೆರೆ'.

'ಬೆತ್ತನಗೆರೆ' ಅಂದ ತಕ್ಷಣ ನಿಮಗೆ ಥಟ್ ಅಂತ ನೆನಪಾಗುವುದು ಕುಖ್ಯಾತ ರೌಡಿ ಶೀಟರ್ ಬೆತ್ತನಗೆರೆ ಸೀನ. ನಡುರಸ್ತೆಯಲ್ಲಿ ಹತನಾದ ಬೆತ್ತನಗೆರೆ ಸೀನನ ರಕ್ತಚರಿತ್ರೆ ಈ ಸಿನಿಮಾ. [ಬೆತ್ತನಗೆರೆ ಚಿತ್ರದ ವಿರುದ್ಧ ಕೇಸು ದಾಖಲು]

Bettanagere movie receives 149 cuts from Censor Board

ಅಂದ್ಮೇಲೆ, 'ಬೆತ್ತನಗೆರೆ' ಚಿತ್ರದಲ್ಲಿ ಲಾಂಗು-ಮಚ್ಚು ಝಳಪಳಿಸಿವುದು ಗ್ಯಾರೆಂಟಿ ಅಲ್ವಾ. ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರುವ 'ಬೆತ್ತನಗೆರೆ' ಚಿತ್ರ ಮೊನ್ನೆ ಸೆನ್ಸಾರ್ ಅಂಗಳಕ್ಕೆ ಬಂದಿತ್ತು.

'ಬೆತ್ತನಗೆರೆ' ಚಿತ್ರದ ರಕ್ತಸಿಕ್ತ ಅಧ್ಯಾಯವನ್ನ ವೀಕ್ಷಿಸಿದ ಸೆನ್ಸಾರ್ ಮಂಡಳಿ ಎಷ್ಟು ಬಾರಿ ಕತ್ರಿ ಪ್ರಯೋಗ ಮಾಡಿದೆ ಗೊತ್ತಾ? ಬರೋಬ್ಬರಿ 149 ಬಾರಿ..! ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇಷ್ಟು ಕಟ್ಸ್ ಪಡೆದ ಮೊದಲ ಚಿತ್ರವಿದು..! ಇದೇ 'ಬೆತ್ತನಗೆರೆ' ಚಿತ್ರದ ದಾಖಲೆ.!!

ಅಸಲಿಗೆ ಇಷ್ಟೊಂದು ಕಟ್ಸ್ ಯಾಕೆ ಅಂದ್ರೆ 'ರಕ್ತಪಾತ' ಅನ್ನುವ ಉತ್ತರ ನಿರ್ದೇಶಕರ ಕಡೆಯಿಂದ ಬರುತ್ತೆ. ''ಚಿತ್ರವನ್ನ ನಾವು ನೈಜವಾಗಿ ತೆರೆಗೆ ತಂದಿದ್ದೀವಿ. ಸಿನಿಮಾದಲ್ಲಿ ರಿಯಲ್ ಹೆಸರುಗಳೇ ಇವೆ. ಅದರಿಂದ ವಿವಾದ ಆಗಬಹುದು ಅನ್ನುವ ಕಾರಣಕ್ಕೆ ಹೆಸರು ಬಂದ ಕಡೆಯೆಲ್ಲಾ ಕಟ್ಸ್ ಕೊಟ್ಟಿದ್ದಾರೆ. ಹೀಗಾಗಿ ಹೆಚ್ಚು ಕಟ್ ಆಗಿದೆ'' ಅಂತ ಫಿಲ್ಮಿಬೀಟ್ ಕನ್ನಡಗೆ ನಿರ್ದೇಶಕ ಮೋಹನ್ ತಿಳಿಸಿದರು.['ಬೆತ್ತನಗೆರೆ' ಎ ರಾ ಸ್ಟೋರಿ ಮೊದಲನೇ ಹಂತ ಫಿನಿಷ್!]

Bettanagere movie receives 149 cuts from Censor Board

ಬೆತ್ತನಗೆರೆ ಸೀನ ಮತ್ತು ಶಂಕ್ರ ಹೆಸರುಗಳು, ರಕ್ತಪಾತ ಸನ್ನಿವೇಶಗಳು ಜೊತೆಗೆ 'ಬೆತ್ತನಗೆರೆ' ಚಿತ್ರದಲ್ಲಿನ ಗರಮಾಗರಂ ಐಟಂ ಸಾಂಗ್ ಗೂ ಕತ್ರಿ ಬಿದ್ದಿದೆ. ''ಸೆನ್ಸಾರ್ ಚೌಕಟ್ಟನ್ನ ನಾವು ಮೀರಿದ ಕಾರಣ ಹೀಗಾಯ್ತು. ಆದರೂ, ನಮಗೆ U/A ಸರ್ಟಿಫಿಕೇಟ್ ಸಿಕ್ಕಿದೆ'' ಅಂತಾರೆ ನಿರ್ದೇಶಕರು.

ಬೆತ್ತನಗೆರೆ ಸೀನ ಪಾತ್ರದಲ್ಲಿ ಸುಮಂತ್ ಶೈಲೇಂದ್ರ ಬಾಬು ಕಾಣಿಸಿಕೊಂಡಿದ್ದರೆ, ಬೆತ್ತನಗೆರೆ ಶಂಕ್ರ ಪಾತ್ರದಲ್ಲಿ 'ಸಿಲ್ಕ್' ಖ್ಯಾತಿಯ ಅಕ್ಷಯ್ ಇದ್ದಾರೆ. ವಿಶೇಷ ಪಾತ್ರದಲ್ಲಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಕೂಡ ಅಭಿನಯಿಸಿದ್ದಾರೆ.

149 ಕಟ್ಸ್ ಆದ್ಮೇಲೆ ಸಿನಿಮಾದಲ್ಲಿ ಏನು ಉಳಿದಿರಬಹುದೋ? ನಮಗಂತೂ ಗೊತ್ತಿಲ್ಲ. ನಿಮಗೆ 'ಬೆತ್ತನಗೆರೆ' ಅಧ್ಯಾಯದ ಬಗ್ಗೆ ಕುತೂಹಲ ಇದ್ದರೆ, ಮುಂದಿನ ತಿಂಗಳವರೆಗೂ ಕಾಯಿರಿ. ಯಾಕಂದ್ರೆ ಜುಲೈನಲ್ಲಿ ಸಿನಿಮಾ ತೆರೆಗೆ ಬರಲಿದೆ. (ಫಿಲ್ಮಿಬೀಟ್ ಕನ್ನಡ)

English summary
Kannada Movie 'Bettanagere' has received 149 cuts from Censor Board. 'Bettanagere' is a life story of Rowdysheeter Bettanagere Seena, features Akshay and Sumanth Shailendra Babu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada