»   » ಸತ್ಯ.. ಬಿಡ್ಬೇಡ ಕೊಚ್ಚು ..'ಓಂ' ಗೇಮ್ ಸೂಪರ್!

ಸತ್ಯ.. ಬಿಡ್ಬೇಡ ಕೊಚ್ಚು ..'ಓಂ' ಗೇಮ್ ಸೂಪರ್!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕನ್ನಡ ಚಿತ್ರರಂಗ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ರಾಜಕುಮಾರ್ ಅವರ ವೃತ್ತಿ ಬದುಕಿಗೆ ಹೊಸ ಆಯಾಯ ತಂದುಕೊಟ್ಟ ಚಿತ್ರ.'ಓಂ'. ಸತ್ಯ ಅಲಿಯಾಸ್ ಸತ್ಯಮೂರ್ತಿ ಬೆಂಗಳೂರಿನ ಭೂಗತ ಜಗತ್ತನ್ನು ನಡುಗಿಸಿದ ಡಾನ್. ಉಪೇಂದ್ರ ಅವರು ರಿಯಲ್ ಸ್ಟಾರ್ ಆಗಿ ಚಿತ್ರರಂಗದಲ್ಲಿ ಪರಿಚಿತರಾಗುವುದಕ್ಕೂ ಮೊದಲು ನಿರ್ದೇಶಕರಾಗಿ ಗಟ್ಟಿಯಾಗಿ ನೆಲೆ ನಿಲ್ಲುವಂತೆ ಮಾಡಿದ ಚಿತ್ರ ಓಂ. ಈ ಚಿತ್ರದ ಥೀಮ್ ನಲ್ಲೇ ಈಗ ಮೊಬೈಲ್ ಗೇಮ್ ಬಂದಿದೆ.

ಈಗಾಗಲೇ ಕೆಲವು ಸುದ್ದಿ ಮಾಧ್ಯಮಗಳಲ್ಲಿ ಓಂ ಚಿತ್ರದ ಮೊಬೈಲ್ ಗೇಮ್ ಜಾಹೀರಾತು ನೋಡಿರುತ್ತೀರಿ. ಓಂ ಚಿತ್ರದಲ್ಲಿ ನಾಯಕಿ ಮಾಧುರಿ(ಪ್ರೇಮಾ) ಅವರು ಸತ್ಯ(ಶಿವರಾಜ್ ಕುಮಾರ್) ಕೈಗೆ ಕತ್ತಿ, ಚೈನು ಲಾಂಗು ಕೊಟ್ಟು ಬಿಡ್ಬೇಡ ಹೋಗು ಕೊಚ್ಚು ಎಂದು ಹೂಂಕರಿಸುವಂತೆ ನೀವು ಕೂಡಾ ನಿಮ್ಮ ನೆಚ್ಚಿನ ನಾಯಕನಟನನ್ನು ಈ ಗೇಮ್ ನಲ್ಲಿ ಓಡಿಸಿ, ಹಣಗಳಿಸಬಹುದು. ಮಾರ್ಗ ಮಧ್ಯೆ ಸಿಗುವ ರೌಡಿಗಳನ್ನು ಕೊಚ್ಚಿಹಾಕಬಹುದು.

ಸಿನಿಮಾಗಳು ಮೊಬೈಲ್ ಗೇಮ್ ಗಳಾಗುವುದು ಇದೇ ಮೊದಲಲ್ಲ. ಆದರೆ, ಕನ್ನಡ ಚಿತ್ರವೊಂದು ಅದರಲ್ಲೂ 1995ರಲ್ಲಿ ತೆರೆ ಕಂಡ ಸೂಪರ್ ಹಿಟ್ ಚಿತ್ರವೊಂದನ್ನು ಈ ರೀತಿ ಆಂಡ್ರಾಯ್ಡ್ ಲೋಕಕ್ಕೆ ಪರಿಚಯಿಸುತ್ತಿರುವುದು ಅದರಲ್ಲೂ ಯಶಸ್ಸು ಗಳಿಸುತ್ತಿರುವುದು ಉತ್ತಮ ಬೆಳವಣಿಗೆ.

ಈ ಗೇಮ್ ಹಿಂದಿನ ರುವಾರಿ ಮೊಬಿ2ಫನ್.ಕಾಂ ಸಂಸ್ಥೆಯ ವಿಜಯ್ ಪ್ರಕಾಶ್.. ಓ ಗುಲಾಬಿ ಹಾಡಿನ ಹಿನ್ನೆಲೆ ದನಿಯಿರುವ ಈ ಗೇಮ್ ಬಗ್ಗೆ, ಮೊಬಿ2ಫನ್ ಸಂಸ್ಥೆ, ಓಂ ಚಿತ್ರದ ಗೇಮ್ ಎಲ್ಲಿಂದ ಡೌನ್ ಲೋಡ್ ಮಾಡಿಕೊಳ್ಳುವುದು ಮುಂತಾದ ವಿವರ ಮುಂದಿದೆ.

ಎಲ್ಲಾ ರೌಡಿಗಳು ಒಂದಾಗಿ ಸತ್ಯನ ಕೊಲ್ಲೋಕೆ ಸ್ಕೆಚ್

ಓಂ ಚಿತ್ರದ ಕಥೆ ಎಲ್ಲರಿಗೂ ಗೊತ್ತೇ ಇದೆ. ಭೂಗತ ಲೋಕದ ಪಾತಕಿಗಳೆಲ್ಲ ಮಾಧುರಿ ಹಿಂದೆ ಬಿದ್ದ ಸತ್ಯನನ್ನು ಮುಗಿಸಲು ಸ್ಕೆಚ್ ಹಾಕಿರುತ್ತಾರೆ. ಪೊನ್ನ, ದೀನನ ಜೊತೆ ರಾಯ್ ಕೂಡಾ ಕೈಜೋಡಿಸಿರುತ್ತಾನೆ.

ಆದ್ರೆ, ಲಾಂಗ್ ಹಿಡಿದ ಸತ್ಯ ಎಲ್ಲಾ ರೌಡಿಗಳನ್ನು ಕೊಚ್ಚಿ ಹಾಕಿ ಮುಂದಕ್ಕೆ ಓಡುತ್ತಾನೆ. ಎಲ್ಲರನ್ನು ಕೊಂದರೆ ಸತ್ಯ ಬದುಕುತ್ತಾನೆ. ಲಾಂಗ್ ಎತ್ತುವುದರಲ್ಲಿ ಸ್ವಲ್ಪ ಯಾಮಾರಿದರೂ ಸತ್ಯನ ಕಥೆ ಅಲ್ಲಿಗೆ ಮುಗಿಯುತ್ತದೆ.

ಸತ್ಯನ ಗೇಮ್ ಆಡುವುದು ಹೇಗೆ?

* ಟೆಂಪಲ್ ರನ್ ಮಾದರಿಯಲ್ಲಿ ಸತ್ಯನನ್ನು ಓಡಿಸುತ್ತಾ ಇರಬೇಕು.
* ಎದುರಿಗೆ ಸಿಗುವ ರೌಡಿಗಳನ್ನು ಕೊಚ್ಚಲು ಸತ್ಯನ ಕೈಗೆ ಲಾಂಗ್ ನೀಡಬೇಕು.
* ಎಡ-ಬಲಕ್ಕೆ ಸತ್ಯನನ್ನು ಚಲಿಸಬಹುದು. ರಸ್ತೆ ತಡೆ ಬಂದರೆ ಹಾರಿಸಬಹುದು.
* ಅಡ್ಡನಿಂತ ಲಾರಿ ಕೆಳಗೆ ಸತ್ಯನನ್ನು ಬಗ್ಗಿಸಿ ಡಿಕ್ಕಿ ಹೊಡೆಯದಂತೆ ತಡೆಯಬೇಕು.
* ದಾರಿಯಲ್ಲಿ ಸಿಗುವ ಕಾಯಿನ್ ಗಳನ್ನು ಸಂಗ್ರಹಿಸಬೇಕು.
* ಜಿಪ್ಸಿ ವಾಹನವನ್ನು ಸತ್ಯ ಏರುವಂತೆ ಮಾಡಬೇಕು.
* ಎಲ್ಲಾ ರೌಡಿಗಳನ್ನು ಕೊಂದು ಹೆಚ್ಚು ಕಾಯಿನ್ ಸಂಗ್ರಹಿಸಿದರೆ ನಿಮಗೆ ಹೆಚ್ಚು ಸ್ಕೋರ್ ಸಿಗುತ್ತದೆ.

ಸತ್ಯ-ಓಂ ಗೇಮ್ ಡೌನ್ ಲೋಡ್ ಎಲ್ಲಿಂದ?

* ಆಂಡ್ರಾಯ್ಡ್ ಆಧಾರಿತ ಮೊಬೈಲ್ ಉಳ್ಳವರು ಗೂಗಲ್ ಪ್ಲೇ ಸ್ಟೋರ್ ನಿಂದ ಓಂ ಗೇಮ್ ಡೌನ್ ಲೋಡ್ ಮಾಡಿಕೊಳ್ಳಬಹುದು.
* ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ OM Game ಎಂದು ಸರ್ಚ್ ಮಾಡಿದರೆ ಸಾಕು.
* ಆಂಡ್ರಾಯ್ಡ್ ಓಎಸ್ 2.3 ಅಥವಾ ಅದಕ್ಕಿಂತ ಹೆಚ್ಚಿನ ಓಸ್ ಇದ್ದರೆ ಒಳ್ಳೆಯದು.
* ಡೌನ್ ಲೋಡ್ ಮಾಡಲು ಲಿಂಕ್ ಇಲ್ಲಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

Mobi2Fun Private Limited
ಇಮೇಲ್ : mobi2funplay@gmail.com
#52, ಪ್ರೇಸ್ಟೀಜ್ ಹೋಸ್ಟ್ ಚೇಂಬರ್ಸ್, 1ನೇ ಮುಖ್ಯರಸ್ತೆ, ಶೇಷಾದ್ರಿಪುರಂ, ಬೆಂಗಳೂರು- 560 020.

ಇಷ್ಟಕ್ಕೂ ಓಂ ಗೇಮ್ ಹೇಗಿದೆ?

* ಹೇಗೆ ಅಂಡರ್ ವರ್ಲ್ಡ್ ಆಧಾರಿತ ಚಿತ್ರಗಳಿಗೆ ಓಂ ಚಿತ್ರ ನಾಂದಿ ಹಾಡಿತೋ ಅದೇ ರೀತಿ ಕನ್ನಡ ಸಿನಿಮಾ ಆಧಾರಿತ ಈ ಗೇಮ್ ಲೋಕಕ್ಕೆ ಹೊಸ ಸಾಧ್ಯತೆ ಹುಟ್ಟುಹಾಕಿದೆ.

* ಗೂಗಲ್ ಗೇಮ್ಸ್ ಹಾಗೂ ಟೆಂಪಲ್ ರನ್ ಮಾದರಿ ಗೇಮ್ಸ್ ಪಟ್ಟಿಯಲ್ಲಿ ಟಾಪ್ ಸ್ಥಾನಕ್ಕೇರುತ್ತಿರುವ 10ಸಾವಿರ-50 ಸಾವಿರ ರೇಂಜ್ ನಲ್ಲಿ ಡೌನ್ ಲೋಡ್ ಕಂಡಿರುವ ಈ ಗೇಮ್ ಎಲ್ಲರ ಮೆಚ್ಚುಗೆ ಕಂಡಿದೆ.
* ಶಿವರಾಜ್ ಕುಮಾರ್ ಅವರ ಅಭಿಮಾನಿಯಾದ ಟೆಕ್ಕಿ ವಿಜಯ್ ಪ್ರಕಾಶ್ ಕನ್ನಡ ಆಧಾರಿತ ಗೇಮ್ಸ್, 3ಡಿ ಗೇಮ್ಸ್ ಗಳನ್ನು ನೀಡಲು ಇಚ್ಛಿಸಿದ್ದಾರೆ.

English summary
Beware! Om Kannada Movie Character Sathya enters Android Application World. Enjoy this endless running game pakka local game with the Satya’s real fight actions developed by Vijaya Prakash of Mobi2fun.com, Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada