For Quick Alerts
  ALLOW NOTIFICATIONS  
  For Daily Alerts

  ಬಾಕ್ಸ್ ಆಫೀಸಲ್ಲಿ 'ಭಜರಂಗಿ' ಭರ್ಜರಿ ಕಲೆಕ್ಷನ್

  By ಉದಯರವಿ
  |

  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 105ನೇ 'ಭಜರಂಗಿ' ಚಿತ್ರಕ್ಕೆ ರಾಜ್ಯದಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಪ್ಪತ್ತಾರು ವರ್ಷಗಳ ಹಿಂದೆ ಶಿವಣ್ಣ 'ರಥ ಸಪ್ತಮಿ' (1987) ಚಿತ್ರಕ್ಕೆ ವ್ಯಕ್ತವಾದಷ್ಟೇ ಪ್ರತಿಕ್ರಿಯೆ ಭಜರಂಗಿ ಚಿತ್ರಕ್ಕೂ ವ್ಯಕ್ತವಾಗುತ್ತಿದೆ.

  ಬಹಳಷ್ಟು ಚಿತ್ರಮಂದಿರಗಳಲ್ಲಿ ಮುಂಜಾನೆ 7 ಗಂಟೆಗೆ ಭಜರಂಗಿ ಪ್ರದರ್ಶನ ಆರಂಭಿಸಲಾಯಿತು. ಈಗಾಗಲೆ ಚಿತ್ರದ ಬಜೆಟ್ ನಲ್ಲಿ ಶೇ.85ರಷ್ಟು ವಸೂಲಿ ಮಾಡಿದೆ. ಮೊದಲ ದಿನವೇ ಈ ಪಾಟಿ ಕಲೆಕ್ಷನ್ ಆಗಿರುವುದು ಗಾಂಧಿನಗರವನ್ನು ಚಕಿತಗೊಳಿಸಿದೆ. ಒಂದು ವಾರದ ಮುಗಿದರೆ ಕಥೆ ಬೇರೆಯೇ ಆಗುತ್ತದೆ ಎಂಬ ಲೆಕ್ಕಾಚಾರದಲ್ಲಿ ನಿರ್ಮಾಪಕರಿದ್ದಾರೆ.[ಭಜರಂಗಿ ಚಿತ್ರ ವಿಮರ್ಶೆ]

  ಇದೇ ಮೊದಲ ಬಾರಿಗೆ ಶಿವಣ್ಣ ತಮ್ಮ 52ರ ಹರೆಯದಲ್ಲಿ ಸಿಕ್ಸ್ ಪ್ಯಾಕ್ ಮಾಡಿದ್ದಾರೆ. ಎಲ್ಲರೂ ನನ್ನ ಬಾಡಿ ನೋಡಲಿ ಎಂದು ಸಿಕ್ಸ್ ಪ್ಯಾಕ್ ಮಾಡಲಿಲ್ಲ. ಬುಡಕಟ್ಟು ಜನಾಂಗದ ಒಂದು ಲುಕ್ ಬರಲಿ ಎಂಬ ಉದ್ದೇಶಕ್ಕೆ ತಾವು ಆ ರೀತಿ ಮಾಡಿದೆವು ಎಂದಿದ್ದಾರೆ ಶಿವಣ್ಣ.

  ರು.9 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿದೆ

  ರು.9 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿದೆ

  ಮಲ್ಟಿಫ್ಲೆಕ್ಸ್ ಸೇರಿದಂತೆ ರಾಜ್ಯದಾದ್ಯಂತೆ ಸುಮಾರು 160 ಚಿತ್ರಮಂದಿರಗಳಲ್ಲಿ ಭಜರಂಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕದಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರವನ್ನು ಸರಿಸುಮಾರು ರು.9 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿದೆ.

  ಅನ್ಯರಾಜ್ಯಗಳಲ್ಲೂ ಚಿತ್ರ ಬಿಡುಗಡೆ

  ಅನ್ಯರಾಜ್ಯಗಳಲ್ಲೂ ಚಿತ್ರ ಬಿಡುಗಡೆ

  ಪಿವಿಆರ್ ಸಿನಿಮಾಸ್ ಚಿತ್ರವನ್ನು ಮುಂಬೈ, ದೆಹಲಿ, ಚೆನ್ನೈ ಹಾಗೂ ಹೈದರಾಬಾದಿನಲ್ಲಿ ಬಿಡುಗಡೆ ಮಾಡಿದೆ. ಶೀಘ್ರದಲ್ಲೇ ವಿದೇಶಗಳಲ್ಲೂ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಮಂಜುನಾಥ ಗೌಡ ತಿಳಿಸಿದ್ದಾರೆ.

  ಹಿಂದಿ ರೀಮೇಕ್ ಗೆ ಬೇಡಿಕೆ

  ಹಿಂದಿ ರೀಮೇಕ್ ಗೆ ಬೇಡಿಕೆ

  ಚಿತ್ರಮಂದಿರಗಳ ಸಂಖ್ಯೆಯನ್ನು ಹೆಚ್ಚಿಸಲು ಹೋಗುತ್ತಿಲ್ಲ. ಹಿಂದಿ ರೀಮೇಕ್ ಗೆ ಈಗಾಗಲೆ ಬೇಡಿಕೆ ಬಂದಿದೆ. ಒಟ್ಟಾರೆಯಾಗಿ ಭಜರಂಗಿ ಚಿತ್ರ ಮತ್ತೆ 'ಜೋಗಿ' ಚಿತ್ರದಷ್ಟೇ ಸದ್ದು ಮಾಡಿರುವುದು ಕನ್ನಡ ಚಿತ್ರೋದ್ಯಮದಲ್ಲಿ ಹೊಸ ಉತ್ಸಾಹ ತಂದಿದೆ. ಚಿತ್ರವನ್ನು ನೂರು ದಿನಗಳ ಚಿತ್ರೀಕರಿಸಲಾಗಿದೆ.

  ಕಲ್ಯಾಣಿ ಅವರ ನೃತ್ಯ ಇನ್ನೊಂದು ಹೈಲೈಟ್

  ಕಲ್ಯಾಣಿ ಅವರ ನೃತ್ಯ ಇನ್ನೊಂದು ಹೈಲೈಟ್

  ಈ ಚಿತ್ರದಲ್ಲಿ ಐಂದ್ರಿತಾ ರೇ ಇದೇ ಮೊದಲ ಬಾರಿಗೆ ಶಿವಣ್ಣನಿಗೆ ಜೋಡಿಯಾಗಿದ್ದಾರೆ. ಚಿತ್ರದಲ್ಲಿ ಅವರದು ಗ್ಲಾಮರ್ ಗಿಂತಲೂ ನೈಜತೆಗೆ ಹತ್ತಿರವಾದ ಪಾತ್ರ. ಚಿತ್ರದಲ್ಲಿ ಕಲ್ಯಾಣಿ ಅವರ ನೃತ್ಯ ಇನ್ನೊಂದು ಹೈಲೈಟ್. ಇದಕ್ಕೆ ಹರ್ಷವರೇ ಸ್ವತಃ ನೃತ್ಯ ಸಂಯೋಜನೆ ಮಾಡಿದ್ದಾರೆ.

  ಚಿತ್ರಕ್ಕೆ ಎ ಸರ್ಟಿಫಿಕೇಟ್, ಶಿವಣ್ಣ ಗರಂ

  ಚಿತ್ರಕ್ಕೆ ಎ ಸರ್ಟಿಫಿಕೇಟ್, ಶಿವಣ್ಣ ಗರಂ

  ಭಜರಂಗಿ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿರುವ ಬಗ್ಗೆ ಶಿವಣ್ಣನಿಗೆ ಒಂದು ಸಣ್ಣ ಅಸಮಾಧಾನವೂ ಇದೆ. ಇಂದಿನ ಟಿವಿ ಕಾರ್ಯಕ್ರಮಗಳಲ್ಲಿ ಕ್ರೈಂ, ಸೆಕ್ಸ್ ದೃಶ್ಯಗಳನ್ನು ನಿತ್ಯ ತೋರಿಸಲಾಗುತ್ತಿದೆ. ಅದಕ್ಕೆ ಹೋಲಿಸಿದರೆ ತಮ್ಮ ಚಿತ್ರ ಎಷ್ಟೋ ಪಾಲು ಉತ್ತಮ. ಹಾಗಿದ್ದುಕೊಂಡೂ ಚಿತ್ರಕ್ಕೆ ಎ ಸರ್ಟಿಫಿಕೇಟ್ ಕೊಟ್ಟಿರುವುದು ದುರಂತ. ಇದರಿಂದ ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಅಸಮಾಧಾನ ಅವರನ್ನು ಬಾಧಿಸುತ್ತಿದೆ.

  English summary
  Century Star Shivrajkumar 105th movie 'Bhajaragi' is getting a very good response from the audience. The redeeming feature of the business done so far is that the film is that the film is safe by 85 percent to its investment of Rs.9 crores.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X