For Quick Alerts
  ALLOW NOTIFICATIONS  
  For Daily Alerts

  'ಭರಾಟೆ' ಕ್ಲೈಮ್ಯಾಕ್ಸ್ ನಲ್ಲಿ 10 ವಿಲನ್ ಗಳ ಎದುರು ಶ್ರೀಮುರುಳಿ ಫೈಟ್

  |
  Bharaate Movie: ಕ್ಲೈಮ್ಯಾಕ್ಸ್ ನಲ್ಲಿ 10 ವಿಲನ್ ಗಳ ಎದುರು ಶ್ರೀಮುರುಳಿ ಫೈಟ್ | FILMIBEAT KANNADA

  ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ 'ಭರಾಟೆ' ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. 'ಮಫ್ತಿ' ಚಿತ್ರದ ಸಕ್ಸಸ್ ನ ನಂತರ ಮುರಳಿ ಅಭಿನಯಿಸುತ್ತಿರುವ ಸಿನಿಮಾ ಇದಾಗಿದೆ. ನಿರ್ದೇಶಕ ಚೇತನ್ ಕುಮಾರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ 'ಭರಾಟೆ' ಚಿತ್ರವನ್ನು ನಿರ್ಮಾಪಕ ಸುಪ್ರಿತ್ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಚಿತ್ರೀಕರಣ ಪ್ರಾರಂಭಿಸಿದ್ದು ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣದಲ್ಲಿ ನಿರತವಾಗಿದೆ ಚಿತ್ರತಂಡ.

  ಉತ್ತರ ಭಾರತದ ಕೆಲವು ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿ ಮುಗಿಸಿ ಸದ್ಯ 'ಭರಾಟೆ' ಟೀಂ ಬೆಂಗಳೂರಿನ ನೆಲಮಂಗಳದಲ್ಲಿ ಬೀಡುಬಿಟ್ಟಿದೆ. ಚಿತ್ರದ ಅತಿ ದುಬಾರಿ ಮತ್ತು ರೋಚಕ ಫೈಟ್ ದೃಶ್ಯವನ್ನು ಸೆರಿ ಹಿಡಿಯುವಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಈ ಕ್ಲೈಮ್ಯಾಕ್ಸ್ ಚಿತ್ರೀಕರಣದ ಒಂದಿಷ್ಟು ಮೇಕಿಂಗ್ ಫೋಟೊಗಳು ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮುಂದೆ ಓದಿ...

  ಕ್ಲೈಮ್ಯಾಕ್ಸ್ ನಲ್ಲಿ 10 ವಿಲನ್ ಗಳ ಎದುರು ಮುರಳಿ ಫೈಟ್

  ಕ್ಲೈಮ್ಯಾಕ್ಸ್ ನಲ್ಲಿ 10 ವಿಲನ್ ಗಳ ಎದುರು ಮುರಳಿ ಫೈಟ್

  'ಭರಾಟೆ' ಚಿತ್ರದಲ್ಲಿ ಬರೋಬ್ಬರಿ 10 ಖ್ಯಾತ ಖಳನಟರು ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದನ್ನು ಈಗಾಗಲೇ ಓದಿದ್ದೀರಿ. ಈಗ ಈ ಹತ್ತು ವಿಲನ್ಸ್ ಒಟ್ಟಿಗೆ ಒಂದೆ ಫ್ರೇಮಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, 'ಭರಾಟೆ' ಕ್ಲೈಮ್ಯಾಕ್ಸ್ ನ ಅಖಾಡದಲ್ಲಿ ರವಿಶಂಕರ್, ಸಾಯಿ ಕುಮಾರ್, ಶರತ್ ಲೋಹಿತಾಶ್ವ, ಉಗ್ರಂ ಮಂಜು, ನೀನಾಸಂ ಅಶ್ವತ್, ಮನಮೋಹನ್, ರಾಜು ವಾಡೆ, ಅವಿನಾಶ್, ಅಯ್ಯಪ್ಪ ಶರ್ಮ ಮತ್ತು ದೀಪಕ್ ಈ 10 ಖಳ ನಟರ ಕಾದಾಟದ ರೋಚಕ ಸನ್ನಿವೇಶವನ್ನು ಸೆರೆಹಿಡಿಯುತ್ತಿದೆ ಚಿತ್ರತಂಡ. ಈ 10 ಖಳನಟರ ಎದುರು ಶ್ರೀಮುರುಳಿ ಫೈಟ್ ಮಾಡಲಿದ್ದಾರೆ. ಬೆಂಗಳೂರಿನ ನೆಲಮಂಗಳ ಬಳಿ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿದೆ.

  'ಭರಾಟೆ' ಮೆಚ್ಚಿದ ಬಾಲಿವುಡ್ ನಟ ಸುನೀಲ್ ಶೆಟ್ಟಿ

  ವಿಭಿನ್ನ ಲುಕ್ ನಲ್ಲಿ ರವಿಶಂಕರ್ ಮಿಂಚಿಂಗ್

  ವಿಭಿನ್ನ ಲುಕ್ ನಲ್ಲಿ ರವಿಶಂಕರ್ ಮಿಂಚಿಂಗ್

  ಪ್ರತಿಯೊಂದು ಚಿತ್ರದಲ್ಲಿಯೂ ಏನಾದರೊಂದು ವಿಶೇಷತೆ ಮೂಲಕ ಪ್ರೇಕ್ಷಕರ ಗಮನ ಸೆಳೆಯುವ ನಟ ರವಿಶಂಕರ್ 'ಭರಾಟೆ' ಚಿತ್ರದಲ್ಲಿಯೂ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ದನೆಯ ಕೂದಲು ಮತ್ತು ಉದ್ದ ದಾಡಿ ಬಿಟ್ಟಿರುವ ರವಿಶಂಕರ್ ಲುಕ್ ಅಭಿಮಾನಿಗಳ ಮನಸೆಳೆಯುತ್ತಿದೆ. 'ಭರಾಟೆ' ಚಿತ್ರದಲ್ಲಿಯೂ ರವಿಶಂಕರ್ ಆರ್ಭಟ ಜೋರಾಗಿಯೆ ಇರಲಿದ್ದು, ನಾಯಕನಿಗೆ ಸರಿಯಾಗೆ ಟಕ್ಕರ್ ಕೊಡಲಿದ್ದಾರೆ.

  ಒಂದೇ ಸಿನಿಮಾದಲ್ಲಿ ಮೂವರು ಅಣ್ಣತ್ತಮ್ಮಂದಿರು

  ಒಂದೇ ಸಿನಿಮಾದಲ್ಲಿ ಮೂವರು ಅಣ್ಣತ್ತಮ್ಮಂದಿರು

  ಒಂದೇ ಸಿನಿಮಾದಲ್ಲಿ ಮೂವರು ಅಣ್ಣತ್ತಮ್ಮಂದಿರು ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಮತ್ತೊಂದು ವಿಶೇಷ. ಹೌದು, ಖ್ಯಾತ ನಟರಾದ ರವಿಶಂಕರ್, ಸಾಯಿ ಕುಮಾರ್ ಮತ್ತು ಅಯ್ಯಪ್ಪ ಶರ್ಮ ಒಂದೇ ಸಿನಿಮಾದಲ್ಲಿ, ಅದೂ ಒಂದೇ ಫ್ರೇಮಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ದೃಶ್ಯ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದು, ಮೂವರನ್ನು ಒಟ್ಟಿಗೆ ನೋಡಿ ಸಂಭ್ರಮಿಸುವ ಕ್ಷಣಕ್ಕಾಗಿ ಕಾಯುತ್ತಿದ್ದಾರೆ.

  'ಯಜಮಾನ'ನ ಯಶಸ್ಸನ್ನು ಆಚರಿಸಿದ 'ಭರಾಟೆ' ತಂಡ

  80 ಜನ ಬಾಡಿ ಬಿಲ್ಡರ್ಸ್, 400 ಜನ ಜೂನಿಯರ್ ಆರ್ಟಿಸ್ಟ್

  80 ಜನ ಬಾಡಿ ಬಿಲ್ಡರ್ಸ್, 400 ಜನ ಜೂನಿಯರ್ ಆರ್ಟಿಸ್ಟ್

  ಅದ್ದೂರಿ ಕ್ಲೈಮ್ಯಾಕ್ಸ್ ನಲ್ಲಿ ಬರೋಬ್ಬರಿ 80 ಜನ ಬಾಡಿ ಬಿಲ್ಡರ್ಸ್ ಮತ್ತು 400 ಜನ ಜೂನಿಯರ್ ಆರ್ಟಿಸ್ಟ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ. ಸುಮಾರು 60 ಲಕ್ಷ ವೆಚ್ಚದಲ್ಲಿ ಈ ಫೈಟ್ ಸೀನ್ ನಿರ್ಮಾಣವಾಗುತ್ತಿದೆ. ಈ ಅದ್ದೂರಿ ಆಕ್ಷನ್ ದೃಶ್ಯದ ನಿರ್ದೇಶನದ ಹೊಣೆಯನ್ನು ರವಿವರ್ಮ ವಹಿಸಿಕೊಂಡಿದ್ದಾರೆ. ಈ 10 ಖಳನಟರನ್ನು ಒಟ್ಟಿಗೆ ಒಂದೇ ಫ್ರೇಮಿನಲ್ಲಿ ಕರೆತರುವ ಸಾಹಸ ದೃಶ್ಯವನ್ನು ನಿರ್ದೇಶನ ಮಾಡುವ ಕ್ಷಣ ರವಿವರ್ಮ ಅವರಿಗೆ ಲಬಿಸಿದೆ.

  English summary
  Actor Sri Murali' 'Bharate' movie team busy in climax shooting with ten villains. The movie is directed by Chethan kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X