»   » ನಟ ಭರತ್ ಹಾಗೂ ಜೆಶ್ಲೆ ಮದುವೆ ಆಲ್ಬಂ ನೋಡಿ

ನಟ ಭರತ್ ಹಾಗೂ ಜೆಶ್ಲೆ ಮದುವೆ ಆಲ್ಬಂ ನೋಡಿ

By: ಶಂಕರ್, ಚೆನ್ನೈ
Subscribe to Filmibeat Kannada

ತಮಿಳು ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ನಟ ಭರತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತನ್ನ ಬಾಲ್ಯ ಕಾಲದ ಗೆಳತಿ ಡಾ.ಜೆಶ್ಲಿ ಅವರನ್ನು ವರಿಸಿದ್ದಾರೆ. ಚೆನ್ನೈನ ಲೀಲಾ ಪ್ಯಾಲೇಸ್ ನಲ್ಲಿ ನಡೆದ ಅವರ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಸಾಕಷ್ಟು ಗಣ್ಯರು ಆಗಮಿಸಿ ನೂತನ ದಂಪತಿಗಳಿಗೆ ಶುಭ ಹಾರೈಸಿದರು.

ಸೆಪ್ಟೆಂಬರ್ 14ರಂದು ನಡೆದ ಆರತಕ್ಷತೆ ಕಾರ್ಯಕ್ರಮಕ್ಕೆ ತಮಿಳು ಚಿತ್ರರಂಗದ ತಾರೆಗಳು, ದಿಗ್ಗಜರು, ತಂತ್ರಜ್ಞರು ಆಗಮಿಸಿದ್ದರು. ಭರತ್ ಕೈಹಿಡಿರುವ ಜೇಶ್ಲೆ ವೃತ್ತಿಯಲ್ಲಿ ದಂತವೈದ್ಯೆ. ಅವರ ಕುಟುಂಬಿಕರು ದುಬೈನಲ್ಲಿ ನೆಲೆಸಿರುವುದಾಗಿ ಭರತ್ ಆತ್ಮೀಯರು ತಿಳಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಒಬ್ಬರಿಗೊಬ್ಬರು ಚೆನ್ನಾಗಿ ಗೊತ್ತು. ಪರಿಚಯದ ಗೆಳೆಯನೊಬ್ಬನ ಮೂಲಕ ಜೇಶ್ಲಿ ಮತ್ತು ಭರತ್ ಒಂದಾಗಿದ್ದರು. ಬಳಿಕ ಇವರಿಬ್ಬರೂ ಒಬ್ಬರನ್ನು ಇಷ್ಟಪಟ್ಟಿದ್ದರು. ಕಡೆಗೆ ಮದುವೆಯಾಗಲು ನಿರ್ಧರಿಸಿದರು. ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಭರತ್ ವಿವರವಾಗಿ ಹೇಳಿಕೊಂಡಿದ್ದರು.

ಸೆಪ್ಟೆಂಬರ್ 14ರಂದು ಮದುವೆಯಾಗುತ್ತಿರುವುದಾಗಿ ಅವರು ಟ್ವಿಟ್ಟರ್ ನಲ್ಲೂ ತಿಳಿಸಿದ್ದರು. ಈಗ ಇಬ್ಬರೂ ಮದುವೆ ಮೂಲಕ ಇನ್ನಷ್ಟು ಹತ್ತಿರವಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಭರತ್, "ನಮ್ಮಿಬ್ಬರದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಮದುವೆ ಬಳಿಕ ಜೇಶ್ಲಿ ಇನ್ನೂ ಓದಬೇಕು. ಅವರು MDS ಮಾಡಲಿದ್ದಾರೆ" ಎಂದಿದ್ದಾರೆ.

'ಬಾಯ್ಸ್' ಚಿತ್ರದ ಮೂಲಕ ಬೆಳ್ಳಿಪರದೆಗೆ ಅಡಿಯಿಟ್ಟ ಭರತ್ ಬಳಿಕ ತಮಿಳು ಚಿತ್ರಗಳಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದವರು. ಅವರ ಮದುವೆ ಆಲ್ಬಂ ಮೇಲೆ ಒಮ್ಮೆ ಕಣ್ಣಾಡಿಸಿ.

ಎಂಕೆ ಸ್ಟ್ಯಾಲಿನ್ ನೂತನ ದಂಪತಿಗಳಿಗೆ ಹಾರೈಕೆ

ಉದಯನಿಧಿ ಸ್ಟ್ಯಾಲಿನ್ ಅವರ ತಂದೆ ಹಾಗೂ ಡಿಎಂಕೆ ಮುಖಂಡ ಎಂಕೆ ಸ್ಟ್ಯಾಲಿನ್ ಮದುವೆ ಆಗಮಿಸಿ ನೂತನ ದಂಪತಿಗಳಿಗೆ ಹಾರೈಸಿದರು.

ಶ್ರೀದೇವಿ ಕಾಣಿಸಿಕೊಂಡದ್ದು ಹೀಗೆ

ತಮಿಳು ನಿರ್ದೇಶಕ ಹರಿ ಹಾಗೂ ಕನ್ನಡದ ಪ್ರೀತಿಗಾಗಿ ಚಿತ್ರದಲ್ಲಿ ಅಭಿನಯಿಸಿದ್ದ ತಾರೆ ಶ್ರೀದೇವಿ ವಿಜಯ್ ಕುಮಾರ್ ಕಾಣಿಸಿಕೊಂಡದ್ದು ಹೀಗೆ.

ಮದುವೆ ಮನೆಯಲ್ಲಿ ನಟ ಸಿಲಂಬರಸನ್

ತಮಿಳಿನ ಜನಪ್ರಿಯ ನಟ ಸಿಲಂಬರಸನ್ (ಸಿಂಬು) ಮದುವೆಗೆ ಆಗಮಿಸಿದ್ದರು. ಸದ್ಯಕ್ಕೆ ಹಂಸಿಕಾ ಮೋಟ್ವಾನಿ ಜೊತೆ ಸಿಂಬು ಹೆಸರು ಪದೇ ಪದೇ ಕೇಳಿಬರುತ್ತಿದೆ.

ತಮಿಳು ಚಿತ್ರರಂಗದ ಗುರುಗಳ ಆಶೀರ್ವಾದ

ತಮಿಳು ಚಿತ್ರರಂಗದ ಗುರು ಹಾಗೂ ದಾದಾ ಸೇಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತ ನಿರ್ದೇಶಕ ಎಸ್ ಬಾಲಚಂದರ್ ಅವರು ನೂತನ ದಂಪತಿಗಳಿಗೆ ಆಶೀರ್ವಾದ ಮಾಡಿದರು.

ಪತ್ನಿ ಸಮೇತ ಬಂದ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಹಾಗೂ ಅವರ ಧರ್ಮಪತ್ನಿ ಆಶಾ ರಾಣಿ ಅವರು ಭರತ್ ಹಾಗೂ ಜೇಶ್ಲಿ ಅವರಿಗೆ ಶುಭ ಕೋರಿದರು.

ಮದುವೆಗೆ ಬಂದ ಮಣಿರತ್ನಂ ದಂಪತಿಗಳು

ಖ್ಯಾತ ನಿರ್ದೇಶಕ ಮಣಿರತ್ನಂ ಹಾಗೂ ಸುಹಾಸಿನಿ ಅವರು ಮದುವೆಗೆ ಬಂದು ನೂತನ ದಂಪತಿಗಳಿಗೆ ಹಾರೈಸಿದರು.

ತಮಿಳು ಸೂಪರ್ ಸ್ಟಾರ್ ಸೂರ್ಯ

ತಮಿಳು ಸೂಪರ್ ಸ್ಟಾರ್ ಸೂರ್ಯ ಅವರು ನಟ ಭರತ್ ಅವರಿಗೆ ಶುಭ ಕೋರಿದರು.

ಮನೆಯವರನ್ನು ಒಪ್ಪಿಸಿ ಮದುವೆಯಾದ ಭರತ್

ಭರತ್ ಮತ್ತು ಜೇಶ್ಲಿ ಅವರು ಒಬ್ಬರನ್ನೊಬ್ಬರು ಪ್ರೇಮಿಸುತ್ತಿದ್ದರು. ಕಡೆಗೆ ಮನೆಯವರನ್ನು ಒಪ್ಪಿಸಿ ಅರೇಂಜ್ಡ್ ಮ್ಯಾರೇಜ್ ಆಗಿದ್ದಾರೆ.

ಸನ್ನಿ ಲಿಯೋನ್ ಜೊತೆ ಭರತ್ 'ಜಾಕ್ ಪಾಟ್'

ಭರತ್ ಅಭಿನಯಿಸಲಿರುವ ಬಾಲಿವುಡ್ ನ 'ಜಾಕ್ ಪಾಟ್' ಚಿತ್ರದ ಚಿತ್ರೀಕರಣ ಮುಗಿದಿದೆ. ಈ ಚಿತ್ರದ ನಾಯಕಿ ಸನ್ನಿ ಲಿಯೋನ್. ಪಾತ್ರವರ್ಗದಲ್ಲಿ ನಾಸಿರುದ್ದೀನ್ ಶಾ, ಸಚಿನ್ ಜೋಶಿ ಮುಂತಾದವರಿದ್ದಾರೆ.

English summary
South Star Bharath bid goodbye to bachelor life and got married his childhood friend Dr Jeshly on September 9, 2013, in Chennai. Following the wedding, the grand reception was held in Leela Palace in Chennai, on Saturday, September 14, 2013.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada