»   » ಎಷ್ಟೇ ಕ್ರಮ ತಗೊಂಡ್ರು, 'ಭರ್ಜರಿ' ಸಿನಿಮಾ ಆನ್ ಲೈನ್ ನಲ್ಲಿ ಲೀಕ್ ಆಗೋಯ್ತು.!

ಎಷ್ಟೇ ಕ್ರಮ ತಗೊಂಡ್ರು, 'ಭರ್ಜರಿ' ಸಿನಿಮಾ ಆನ್ ಲೈನ್ ನಲ್ಲಿ ಲೀಕ್ ಆಗೋಯ್ತು.!

Posted By:
Subscribe to Filmibeat Kannada

ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಚಿತ್ರವನ್ನ ಬಿಡುಗಡೆಯಾಗಿದ್ದ ದಿನವೇ ಯುವಕನೊಬ್ಬ ಚಿತ್ರಮಂದಿರದಲ್ಲೇ ಫೇಸ್ ಬುಕ್ ಲೈವ್ ಮಾಡಿ ಅರ್ಧ ಸಿನಿಮಾ ಬಿಟ್ಟಿ ಪ್ರಸಾರ ಮಾಡಿದ್ದ. 'ಭರ್ಜರಿ' ಚಿತ್ರಕ್ಕೆ ಅಲ್ಲಿಂದ ಶುರುವಾದ ಶತ್ರುಗಳ ಕಾಟ ಇನ್ನು ಮುಂದುವರೆದಿದೆ.

ಹೌದು, ಸಿನಿಮಾ ಪೈರಸಿ ಆಗಬಾರದು, ಎಲ್ಲರೂ ಚಿತ್ರಮಂದಿರಕ್ಕೆ ಬಂದು ನೋಡಲಿ ಎಂಬ ಕಾಳಜಿ ವಹಿಸಿ ಸೈಬರ್ ಪೊಲೀಸರಿಗೆ ದೂರು ನೀಡಿ, ಯ್ಯೂಟ್ಯೂಬ್ ನಲ್ಲಿ ಅಪ್ ಲೌಡ್ ಆಗಿದ್ದ ವಿಡಿಯೋಗಳುನ್ನ ತೆಗೆದು ಹಾಕಿಸಿದ್ದರು.

ಹೀಗೆ, ಎಷ್ಟೇ ಕ್ರಮ ತಗೊಂಡ್ರು ಕೊನೆಗೂ 'ಭರ್ಜರಿ' ಸಿನಿಮಾ ಲೀಕ್ ಆಗೋಗಿದೆ. ಲೀಕ್ ಆಗಿದ್ದು ಎಲ್ಲಿ? ಭರ್ಜರಿ ಸಿನಿಮಾ ಎಲ್ಲಿ ಸಿಗ್ತಿದೆ ? ಮುಂದೆ ಓದಿ.....

ಆನ್ ಲೈನ್ ನಲ್ಲಿ ಸಿಗ್ತಿದೆ 'ಭರ್ಜರಿ' ಸಿನಿಮಾ

'ಭರ್ಜರಿ' ಸಿನಿಮಾ ರಾಜ್ಯಾದ್ಯಂತ ಎರಡನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದ್ರೆ, ಆನ್ ಲೈನ್ ನಲ್ಲಿ ಪೂರ್ತಿ ಸಿನಿಮಾ ಲೀಕ್ ಆಗಿದೆ.

ಡೌನ್ ಲೋಡ್ ಮಾಡಿ ನೋಡ್ತಿದ್ದಾರೆ

ಚಿತ್ರಕ್ಕೆ ಎಲ್ಲಡೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಥಿಯೇಟರ್ ಹೋಗಿ ಎಲ್ಲರೂ ಸಿನಿಮಾ ನೋಡ್ತಿದ್ದಾರೆ. ಆದ್ರೆ, ಖಾಸಗಿ ವೆಬ್ ಸೈಟ್ ವೊಂದರಲ್ಲಿ ಇಡೀ ಸಿನಿಮಾ ಅಪ್ ಲೌಡ್ ಮಾಡಿದ್ದು, ಕೆಲವರು ಫ್ರಿ-ಆಗಿ ಡೌನ್ ಲೌಡ್ ಮಾಡಿ ನೋಡುತ್ತಿದ್ದಾರೆ.

ಚಿತ್ರಮಂದಿರದಲ್ಲಿ ಸೆರೆಹಿಡಿಯಲಾಗಿದೆ

ಇಡೀ ಪೂರ್ತಿ ಸಿನಿಮಾವನ್ನ ಚಿತ್ರಮಂದಿರದಲ್ಲಿ ಪೈರಸಿ ಮಾಡಲಾಗಿದೆ. ಯಾರಿಗೂ ಗೊತ್ತಿರದ ರೀತಿಯಲ್ಲಿ ಕ್ಯಾಮೆರಾ ಬಳಸಿ ರೆಕಾರ್ಡ್ ಮಾಡಲಾಗಿದೆ.

ಹೀಗಾದ್ರೆ ಕನ್ನಡ ಸಿನಿಮಾಗಳ ಗತಿಯೇನು?

ರಿಲೀಸ್ ಆಗಿ ಎರಡು ವಾರ ಆಗಿಲ್ಲ. ಅಷ್ಟರಲ್ಲಾಗಲೇ ಆನ್ ಲೈನ್ ನಲ್ಲಿ ಸಿನಿಮಾ ಲೀಕ್ ಮಾಡಿದ್ದಾರೆ. ಹೀಗೆ ಮಾಡುವುದರಿಂದ ಕನ್ನಡ ಸಿನಿಮಾಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ. ಇಂತವರ ವಿರುದ್ಧ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು? ಎಂಬುದು ದೊಡ್ಡ ಸಮಸ್ಯೆಯಾಗಿದೆ. ಈ ಬಗ್ಗೆ ಸಿನಿಮಾರಂಗದವರು ಚರ್ಚೆ ಮಾಡಬೇಕಿದೆ.

English summary
Dhruva Sarja Starrer Bharjari Full Movie Leaked In Online.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X