»   » ವಿದೇಶದಲ್ಲಿ ಧ್ರುವ ಸರ್ಜಾ, ರಚಿತಾ ರಾಮ್ 'ಭರ್ಜರಿ' ಡ್ಯಾನ್ಸ್

ವಿದೇಶದಲ್ಲಿ ಧ್ರುವ ಸರ್ಜಾ, ರಚಿತಾ ರಾಮ್ 'ಭರ್ಜರಿ' ಡ್ಯಾನ್ಸ್

Posted By:
Subscribe to Filmibeat Kannada

'ಭರ್ಜರಿ' ಸಿನಿಮಾದ ಚಿತ್ರೀಕರಣಕ್ಕಾಗಿ ಚಿತ್ರತಂಡ ವಿದೇಶಕ್ಕೆ ತೆರಳುತ್ತಿರುವ ಬಗ್ಗೆ 'ಫಿಲ್ಮಿ ಬೀಟ್ ಕನ್ನಡ'ದಲ್ಲಿ ನೀವು ಓದ್ದಿದ್ರಿ. ಇದೀಗ 'ಭರ್ಜರಿ' ತಂಡ 'ಸ್ಲೊವೇನಿಯಾ' ತಲುಪಿದ್ದು, ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದೆ.

'ಸ್ಲೊವೇನಿಯಾ'ದ ಸುಂದರ ತಾಣಗಳಲ್ಲಿ ಹಾಡಿನ ಚಿತ್ರೀಕರಣ ಅದ್ಧೂರಿಯಾಗಿ ನಡೆಯುತ್ತಿದೆ. ಧ್ರುವ ಸರ್ಜಾ, ರಚಿತಾ ರಾಮ್ ಸ್ಟೈಲಿಶ್ ಕಸ್ಟೂಮ್ ಹಾಕಿ ಸಖತ್ ಮಿಂಚಿದ್ದಾರೆ. ಅಂದಹಾಗೆ, 'ಭರ್ಜರಿ' ಸಿನಿಮಾದ ಹಾಡಿನ ಚಿತ್ರೀಕರಣದ ಕೆಲ ಫೋಟೋಗಳು ಈಗ ಹೊರಬಂದಿದೆ. ಮುಂದೆ ಓದಿ...

ಮೇಕಿಂಗ್ ಫೋಟೋಸ್

'ಸ್ಲೊವೇನಿಯಾ'ದಲ್ಲಿ ನಡೆಯುತ್ತಿರುವ 'ಭರ್ಜರಿ' ಸಿನಿಮಾದ ಹಾಡಿನ ಚಿತ್ರೀಕರಣದ ಫೋಟೊಗಳು ಈಗ ರಿವೀಲ್ ಆಗಿದೆ.

ಕಲರ್ ಫುಲ್ ಮೇಕಿಂಗ್

ಹಾಡಿನ ಚಿತ್ರೀಕರಣದಲ್ಲಿ 'ಭರ್ಜರಿ' ಚಿತ್ರತಂಡ ಬಿಜಿಯಾಗಿದ್ದು, ಸಾಂಗ್ ಮೇಕಿಂಗ್ ಸಿಕ್ಕಾಪಟ್ಟೆ ಕಲರ್ ಫುಲ್ ಆಗಿದೆ.[ಚಿತ್ರಗಳು: 'ಭರ್ಜರಿ' ಸೆಟ್ ನಲ್ಲಿ, 'ಭರ್ಜರಿ' ಶೂಟಿಂಗ್ ಶುರುವಾಯ್ತು ನೋಡಿ..!]

ಸ್ಟೈಲಿಶ್ ಲುಕ್

ಹಾಡಿನಲ್ಲಿ ಧ್ರುವ ಸರ್ಜಾ ಮತ್ತು ರಚಿತಾ ರಾಮ್ ಇಬ್ಬರು ಸ್ಟೈಲಿಶ್ ಕಾಸ್ಟೂಮ್ ನಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.

ಮೂಗುತಿ ಸುಂದರಿ

ಡಿಂಪಲ್ ಕ್ವೀನ್ ರಚಿತಾ ಚೆಂದದ ಮೂಗುತಿ ತೊಟ್ಟು ಹಾಡಿನಲ್ಲಿ ಮೂಗುತಿ ಸುಂದರಿ ಆಗಿದ್ದಾರೆ.['ಭರ್ಜರಿ' ಚಿತ್ರತಂಡದಿಂದ ಬಂದಿರುವ ಬಿಗ್ ನ್ಯೂಸ್‌ ಇದು]

'ಬಹದ್ದೂರ್' ಸಾಂಗ್ ತರಹ ಇದೆ

ಸಿನಿಮಾದ ಈ ಹಾಡಿಗೆ ಹರ್ಷ ನೃತ್ಯ ನಿರ್ದೇಶನ ಮಾಡಿದ್ದಾರೆ. ಹಾಡುಗಳ ಫೋಟೋಗಳು 'ಬಹದ್ದೂರ್' ಸಿನಿಮಾದ ''ಸುಬ್ಬಲಕ್ಷ್ಮಿ...'' ಹಾಡನ್ನು ನೆನಪಿಸುವುದು ಪಕ್ಕಾ.

English summary
Kannada Movie 'Bharjari' song shooting in Slovenia. Check out the pictures.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada