»   » 'ಭರ್ಜರಿ' ಚಿತ್ರತಂಡದಿಂದ ಬಂದಿರುವ ಬಿಗ್ ನ್ಯೂಸ್‌ ಇದು

'ಭರ್ಜರಿ' ಚಿತ್ರತಂಡದಿಂದ ಬಂದಿರುವ ಬಿಗ್ ನ್ಯೂಸ್‌ ಇದು

Posted By:
Subscribe to Filmibeat Kannada

ಧ್ರುವ ಸರ್ಜಾ ನಟನೆಯ 'ಭರ್ಜರಿ' ಸಿನಿಮಾಗಾಗಿ ಎಲ್ಲರೂ ಅನೇಕ ದಿನಗಳಿಂದ ಕಾಯುತ್ತಿದ್ದಾರೆ. ಆದರೆ ವರ್ಷಗಳ ಹಿಂದೆ ಸೆಟ್ಟೇರಿದ್ದ ಈ ಸಿನಿಮಾಗೆ ಇನ್ನೂ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. ಜೊತೆಗೆ 'ಭರ್ಜರಿ' ಸಿನಿಮಾ ಯಾವ ಹಂತದಲ್ಲಿದೆ ಎಂಬುದು ಸಹ ಯಾರಿಗೂ ಗೊತ್ತಿಲ್ಲ.

ನಟ ನಿಖಿಲ್ ಕುಮಾರ್ ರವರ ಎರಡನೇ ಸಿನಿಮಾವನ್ನು ಶುರು ಮಾಡಿದ್ದ ನಿರ್ದೇಶಕ ಚೇತನ್, 'ಭರ್ಜರಿ' ಸಿನಿಮಾವನ್ನು ಕೈ ಬಿಟ್ಟರು ಎಂಬ ಮಾತುಗಳು ಗಾಂಧಿನಗರದಲ್ಲಿ ಹೆಚ್ಚಾಗಿತ್ತು. ಆದರೆ ಈಗ 'ಭರ್ಜರಿ' ಸಿನಿಮಾ ತಂಡದಿಂದ ಒಂದು ಸುದ್ದಿ ದೊಡ್ಡ ಹೊರ ಬಿದ್ದಿದೆ. ಮುಂದೆ ಓದಿ...['ಭರ್ಜರಿ'ಗಾಗಿ 25 ಕೆಜಿ ತೂಕ ಕಳೆದುಕೊಂಡ ಧ್ರುವ ಸರ್ಜಾ]

ಚಿತ್ರೀಕರಣ ಬಾಕಿ ಇದೆ

'ಭರ್ಜರಿ' ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಷ್ಟೇ ಬಾಕಿ ಇದೆ ಎಂಬ ಮಾತಿತ್ತು. ಆದರೆ ಸದ್ಯದ ಸುದ್ದಿ ಪ್ರಕಾರ 'ಭರ್ಜರಿ' ಚಿತ್ರದ ಶೂಟಿಂಗ್ ಇನ್ನೂ ಬಾಕಿ ಇದೆ.

ವಿದೇಶದಲ್ಲಿ ಶೂಟಿಂಗ್

'ಭರ್ಜರಿ' ಸಿನಿಮಾದ ಕೊನೆ ಹಂತದ ಚಿತ್ರೀಕರಣಕ್ಕಾಗಿ ಈಗ ಚಿತ್ರತಂಡ 'ಸ್ಲೊವೇನಿಯಾ' ಗೆ ತೆರಳುವುದಕ್ಕೆ ರೆಡಿಯಾಗಿದೆ.[ಚಿತ್ರಗಳು: 'ಭರ್ಜರಿ' ಸೆಟ್ ನಲ್ಲಿ, 'ಭರ್ಜರಿ' ಶೂಟಿಂಗ್ ಶುರುವಾಯ್ತು ನೋಡಿ..!]

ಶೂಟಿಂಗ್ ನಲ್ಲಿ ಭಾಗಿ

ನಟ ಧ್ರುವ ಸರ್ಜಾ, ರಚಿತಾ ರಾಮ್, ನೃತ್ಯ ನಿರ್ದೇಶಕ ಹರ್ಷ ಮತ್ತು ಇತರರು ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದು, ಇದು ಹಾಡಿನ ಚಿತ್ರೀಕರಣ ಅಂತ ಹೇಳಲಾಗುತ್ತಿದೆ.

'ಭರ್ಜರಿ' ಬಗ್ಗೆ

'ಬಹದ್ದೂರ್' ಸಿನಿಮಾದ ಬಳಿಕ ನಿರ್ದೇಶಕ ಚೇತನ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಆಕ್ಷನ್ ಮತ್ತು ಲವ್ ಸ್ಟೋರಿ ಕಥೆಯನ್ನು ಹೊಂದಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ಹರಿಪ್ರಿಯಾ ನಟಿಸಿದ್ದಾರೆ.

English summary
Kannada Movie 'Bharjari' team will be flying to Slovenia for song shooting.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada