For Quick Alerts
  ALLOW NOTIFICATIONS  
  For Daily Alerts

  ದೊಡ್ಡವರೂ ನೋಡಬಹುದಾದ ಚಿತ್ರ 'ಬಾಲ್ ಪೆನ್'

  By Rajendra
  |

  ಭಾವನಾ ಬೆಳಗೆರೆ ಅವರ ಚೊಚ್ಚಲ ನಿರ್ಮಾಣದ 'ಬಾಲ್ ಪೆನ್' ಚಿತ್ರ ಇದೇ ಅಕ್ಟೋಬರ್ 26ರಂದು ತೆರೆಕಾಣುತ್ತಿದೆ. ಬೆಂಗಳೂರು ಕೆ.ಜಿ.ರಸ್ತೆಯ ಕೈಲಾಸ್ (ತ್ರಿಭುವನ್ ಕಾಂಪ್ಲೆಕ್ಸ್) ಸೇರಿದಂತೆ ಪಿವಿಆರ್, ಐನಾಕ್ಸ್, ಫೇಮ್ (ಫೋರಂ ಮಾಲ್) ಸೇರಿದಂತೆ ಹಲವು ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲೂ ಚಿತ್ರ ಬಿಡುಗಡೆಯಾಗುತ್ತಿದೆ.

  'ಐಪಿಸಿ ಸೆಕ್ಷನ್ 300' ಚಿತ್ರವನ್ನು ನಿರ್ದೇಶಿಸಿದ್ದ ಶಶಿಕಾಂತ್ ಅವರು ಆಕ್ಷನ್ ಕಟ್ ಹೇಳಿರುವ ಜೊತೆಗೆ ಸಂಭಾಷಣೆಯನ್ನೂ ಹೆಣೆದಿದ್ದಾರೆ. ನಟ ಶ್ರೀನಗರ ಕಿಟ್ಟಿ ಅವರ ಹತ್ತಿರದ ಸಂಬಂಧಿಯಾದ ಸ್ಕಂದ ಪ್ರಸಾದ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರವಿಬೆಳಗೆರೆ ಅರ್ಪಿಸುವ, ಮಹಾನದಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ ಚಿತ್ರವಿದು.

  ಈ ಚಿತ್ರವನ್ನು ಕೇವಲ ಎರಡು ತಿಂಗಳಲ್ಲಿ ಸಿದ್ಧಪಡಿಸಿರುವುದು ವಿಶೇಷ. ಈಗಾಗಲೆ ಈ ಚಿತ್ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸ್ಪರ್ದೆಗೆ ಮಕ್ಕಳ ಚಿತ್ರ ವಿಭಾಗದಲ್ಲಿ ಸ್ಪರ್ಧಿಸಿದೆ. ಈ ಚಿತ್ರಕ್ಕಾಗಿ ನಿರ್ದೇಶಕ ಶಶಿಕಾಂತ್ ಅನೇಕ ಮಕ್ಕಳೊಂದಿಗೆ ಸತತ 35 ದಿನಗಳ ಚಿತ್ರೀಕರಣವನ್ನು ಹ್ಯಾಟೀ ಮಂದರಗಿ ಎಂಬ ಹಳ್ಳಿಯಲ್ಲಿ ನಡೆಸಿದ್ದಾರೆ.

  ಈ ಚಿತ್ರದ ಮತ್ತೊಂದು ವಿಶೇಷ ಎಂದರೆ 5ಡಿ ಕ್ಯಾಮೆರಾದಲ್ಲಿ ಚಿತ್ರೀಕರಿಸಿರುವುದು. ಕೆ.ಸಿ. ಮಂಜುನಾಥ್ ಹಾಗೂ ಭಾವನಾ ಬೆಳಗೆರೆ ಅವರ ಕಥೆ ಚಿತ್ರಕ್ಕಿದೆ. ಈ ಚಿತ್ರದ ಮುಖಾಂತರ ಒಬ್ಬ ಉದಯೋನ್ಮುಖ ಹಾಡುಗಾರ ಮತ್ತು ಸಂಗೀತಗಾರ ಆದಿತ್ಯ ರಾವ್ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. (ಆದಿತ್ಯ ರಾವ್ ಸಂದರ್ಶನ)

  ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು ಮಣಿಕಾಂತ್ ಕದ್ರಿ ಅವರ ಸಂಗೀತದಲ್ಲಿ ಎಲ್ಲವೂ ಇಂಪಾಗಿ ಮೂಡಿಬಂದಿವೆ. ಹಿರಿಯರ ನಿರ್ಲಕ್ಷ್ಯತೆಯನ್ನು ಮಕ್ಕಳು ಹೇಗೆ ಅರ್ಥೈಸುತ್ತಾರೆ ಎಂಬುದೇ ಚಿತ್ರದ ಒನ್ ಲೈನ್ ಕಥೆ. ಕೇವಲ ಮಕ್ಕಳಿಗಷ್ಟೇ ಅಲ್ಲದೆ ದೊಡ್ಡವರೂ ಈ ಚಿತ್ರವನ್ನು ಕಣ್ತುಂಬಿಕೊಳ್ಳಬಹುದು ಎನ್ನುತ್ತಾರೆ ಚಿತ್ರದ ನಿರ್ದೇಶಕರು.

  ಸಿ.ಜೆ.ರಾಜಕುಮಾರ್ ಅವರ ಛಾಯಾಗ್ರಹಣವಿದ್ದು ಸುಚೇಂದ್ರಪ್ರಸಾದ್, ಶ್ರೀನಗರಕಿಟ್ಟಿ, ಬಿ.ಎಸ್.ಮಲ್ಲಾಪುರಮಠ್, ಮೃತ್ಯುಂಜಯ ಹಿರೇಮಠ್, ಸುಧಾಗುಡುಗುಂಟಿ, ಸ್ಕಂಧ, ಸಮರ್ಥ, ಶಾಲಂರಾಜ್, ಚೇತನ, ವಿಶಾಲ್, ಭೂಮಿಕಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Age-appropriate movie for your kids and family - Kannada film 'Ball Pen' billed for release on 26th October 2012. Music by: Manikanth Kadri, play back, Aditya Rao. The film is produced by Bhavana Belagere and Srinagara Kitty, Cinematography C.J.Rajkumar and Screenplay- Dialogues-Direction by Shashikanth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X