»   » 'ಬಿಗ್ ಬಾಸ್'ನಿಂದ ಹೊರಬಂದ ಮೇಲೆ ಸಂಜನಾ-ಭುವನ್ ಮೊದಲ ಭೇಟಿ!

'ಬಿಗ್ ಬಾಸ್'ನಿಂದ ಹೊರಬಂದ ಮೇಲೆ ಸಂಜನಾ-ಭುವನ್ ಮೊದಲ ಭೇಟಿ!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ 4' ಕಾರ್ಯಕ್ರಮದ ಮನೆಯಲ್ಲಿ ಭುವನ್ ಮತ್ತು ಸಂಜನಾ ಜೋಡಿ ಬಗ್ಗೆ ಮಾತನಾಡದವರೇ ಇಲ್ಲ. ಅದೇ ರೀತಿ ವೀಕ್ಷಕರು ಕೂಡ ಸಂಜನಾ-ಭುವನ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಮಾಡಿದ್ದರು.[ಕಿಚ್ಚನ ಎದುರು ಸಂಜನಾ-ಭುವನ್ ಲವ್ ಸ್ಟೋರಿ !]

ಇವರಿಬ್ಬರು ಮನೆಯಿಂದ ಹೊರಬಂದ ಮೇಲೆ ಹೇಗಿರುತ್ತಾರೆ. ಮತ್ತೆ ಇವರಿಬ್ಬರು ಭೇಟಿ ಮಾಡ್ತಾರ? ಎಂಬ ಕುತೂಹಲ ವೀಕ್ಷಕರನ್ನ ಕಾಡಿದ್ದಂತೂ ಸುಳ್ಳಾಲ್ಲ. ಆದ್ರೀಗ, ಈ ಕುತೂಹಲಕ್ಕೆ ಉತ್ತರ ಸಿಕ್ಕಿದ್ದು, ವೀಕ್ಷಕರ ನಿರೀಕ್ಷೆ ನಿಜವಾಗಿದೆ.

ಭುವನ್ ಮೀಟ್ಸ್ ಸಂಜನಾ

'ಬಿಗ್ ಬಾಸ್' ಮನೆಯಿಂದ ಕಳೆದ ವಾರವಷ್ಟೇ ಹೊರಬಂದ ಭುವನ್, ತಮ್ಮ 'ಬಿಗ್ ಬಾಸ್' ಗೆಳತಿ ಸಂಜನಾ ಅವರನ್ನ ಮೀಟ್ ಮಾಡಿದ್ದಾರೆ.[ಪ್ರಥಮ್-ಸಂಜನಾ-ಭುವನ್ ತ್ರಿಕೋನ ಪ್ರೇಮಕಥೆಗೆ ಕ್ಲೈಮ್ಯಾಕ್ಸ್ ಕೊಡದ ಕಿಚ್ಚ! ]

ಕುತೂಹಲ ಹುಟ್ಟಿಸಿದ ಫೋಟೋ!

ಸಂಜನಾ ಮತ್ತು ಭುವನ್ ಭೇಟಿಯಾಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇವರಿಬ್ಬರ ಈ ಭೇಟಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.['ಸಂಜನಾ-ಭುವನ್' ಪಾಲಿಗೆ ವಿಲನ್ ಆಯ್ತು ಪ್ರಥಮ್ ಪ್ರೀತಿ.!]

ಐಸ್ ಪಾರ್ಲರ್ ನಲ್ಲಿ ಭೇಟಿ!

ಇಬ್ಬರು ಎಲ್ಲಿ ಭೇಟಿಯಾಗಿರಬಹುದು ಎಂಬ ಮಾಹಿತಿ ಇಲ್ಲ. ಆದ್ರೆ, ಭುವನ್ ಐಸ್ ತಿನ್ನುತ್ತಾ ಇರುವುದನ್ನ ಗಮನಿಸಿದ್ರೆ, ಐಸ್ ಪಾರ್ಲರ್ ವೊಂದರಲ್ಲಿ ಮೀಟ್ ಮಾಡಿರಬಹುದು.

ಸಂಜನಾ-ಭುವನ್ ಮಧ್ಯೆ ಪ್ರೀತಿನಾ-ಸ್ನೇಹನಾ?

'ಬಿಗ್ ಬಾಸ್' ಮನೆಯಲ್ಲಿ ಸಂಜನಾ ಹಾಗೂ ಭುವನ್ ತುಂಬಾ ಆತ್ಮೀಯವಾಗಿದ್ದರು. ಇವರಿಬ್ಬರ ಸ್ನೇಹ, ಬಿಗ್ ಮನೆಯಲ್ಲಿದ್ದ ಸದಸ್ಯರಿಗೂ ಅನುಮಾನ ಮೂಡುವಂತೆ ಮಾಡಿತ್ತು. ಹೀಗಾಗಿ, ಇವರಿಬ್ಬರು ಲವ್ ಮಾಡ್ತಿರಬಹುದು ಎಂಬ ಚರ್ಚೆಗಳು ಕೂಡ 'ಬಿಗ್ ಬಾಸ್' ಮನೆಯಲ್ಲಿ ಆಗಿದ್ವು. ಆದ್ರೆ, ಇವರಿಬ್ಬರ ಮಧ್ಯೆ ನಿಜವಾಗಲೂ ಇರುವುದು ಪ್ರೀತಿನಾ-ಸ್ನೇಹನಾ........ನಮ್ಗಂತೂ ಗೊತ್ತಿಲ್ಲ.

English summary
After Elimination from Bigg Boss Kannada 4, Actor Bhuvan Ponnanna Met Actress Sanjana. Check out in pic...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada