Just In
Don't Miss!
- News
ಸಮುದ್ರದಲ್ಲಿ 12 ಕಿ.ಮೀ ಒಬ್ಬಂಟಿಯಾಗಿ ಕಯಾಕ್ ಮಾಡಿ ಸಾಹಸ ಮೆರೆದ ಪತ್ರಕರ್ತ!
- Sports
ಜೋ ರೂಟ್ ದ್ವಿಶತಕ, ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ಗೆ 7 ವಿಕೆಟ್ ಗೆಲುವು
- Education
KSMHA Recruitment 2021: 15 ಅಧ್ಯಕ್ಷರು ಮತ್ತು ಸದಸ್ಯರು ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Automobiles
25 ಪೈಸೆ ಹೆಚ್ಚಳದೊಂದಿಗೆ ಸಾರ್ವಕಾಲಿಕ ಏರಿಕೆ ಕಂಡ ಪೆಟ್ರೋಲ್ ಬೆಲೆ
- Finance
ಮೈಂಡ್ ಟ್ರೀ ಕಂಪೆನಿ ನಿವ್ವಳ ಲಾಭ 66% ಹೆಚ್ಚಳ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಟ ಭುವನ್ ಪೊನ್ನಣ್ಣ ಈಗ 'ಪ್ರಣಯ ರಾಜ'
ಪ್ರಯಣ ರಾಜ ಎಂದಕ್ಷಣ ಮೊದಲು ನೆನಪಾಗುವುದು ಹಿರಿಯ ನಟ ಶ್ರೀನಾಥ್. 1970ರ ದಶಕಗಳಲ್ಲಿ ರೊಮ್ಯಾಂಟಿಕ್ ಸಿನಿಮಾಗಳ ಮೂಲಕವೇ ಹೆಚ್ಚು ಯಶಸ್ಸು ಗಳಿಸಿದ್ದ ಶ್ರೀನಾಥ್ ಬಳಿಕ ಪ್ರಣಯ ರಾಜ ಆಗಿಯೇ ಖ್ಯಾತಿ ಗಳಿಸಿದ್ದಾರೆ.
ಇದೀಗ ಪ್ರಣಯ ರಾಜ ಎನ್ನುವ ಹೆಸರು ಮತ್ತೆ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ನಟ ಭುವನ್ ಪೊನ್ನಣ್ಣ. ಹೌದು, ಸ್ಯಾಂಡಲ್ ವುಡ್ ನಲ್ಲಿ ಪ್ರಣಯ ರಾಜ ಎನ್ನುವ ಹೆಸರಿನಲ್ಲಿ ಹೊಸ ಸಿನಿಮಾ ಸೆಟ್ಟೇರುತ್ತಿದೆ. ಈ ಬಾರಿ ಪ್ರಣಯ ರಾಜನಾಗಿ ಭುವನ್ ಪೊನ್ನಣ್ಣ ಕಾಣಿಸಿಕೊಳ್ಳುತ್ತಿದ್ದಾರೆ.
2020 ಮುಕ್ತಾಯ: ಮೊದಲ ಹಾಗೂ ಕೊನೆಯ ಕನ್ನಡ ಸಿನಿಮಾ ಯಾವುದು?
ಅಂದಹಾಗೆ ಪ್ರಣಯ ರಾಜ ಚಿತ್ರಕ್ಕೆ ಸುದರ್ಶನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಚಿತ್ರದ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿರುವ ಸಿನಿಮಾತಂಡ ಇದೇ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ 30ರಂದು ಸಿನಿಮಾಗೆ ಅಧಿಕೃತ ಚಾಲನೆ ಸಿಗಲಿದೆ. ಅಂದೇ ಚಿತ್ರದ ಶೀರ್ಷಿಕೆ ಮತ್ತು ಟೀಸರ್ ರಿಲೀಸ್ ಆಗುತ್ತಿದೆ. ವಿಶೇಷ ಎಂದರೆ ಚಿತ್ರದ ಟೀಸರ್ ಅನ್ನು ನಟ ಶ್ರೀನಾಥ್ ರಿಲೀಸ್ ಮಾಡುವ ಸಾಧ್ಯತೆ ಇದೆ.
ಡಿಸೆಂಬರ್ 30 ನಟ ಭುವನ್ ಪೊನ್ನಣ್ಣ ಹುಟ್ಟಿದ ದಿನ. ವಿಶೇಷ ದಿನದಿಂದು ಪ್ರಣಯ ರಾಜನಾಗಿ ಕನ್ನಡ ಚಿತ್ರ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಇನ್ನೂ ಈ ಸಿನಿಮಾದ ವಿಶೇಷ ಎಂದರೆ 21 ನಾಯಕಿಯರು ಕಾಣಿಸಿಕೊಳ್ಳುತ್ತಿದ್ದಾರೆ. ಬೇರೆ ಬೇರೆ ಭಾಷೆಯ ನಾಯಕಿಯರು ಇರಲಿದ್ದು ಇದರಲ್ಲಿ 3 ಪ್ರಮುಖ ನಾಯಕಿಯರು ಎಂದು ಹೇಳಲಾಗುತ್ತಿದೆ. ಈಗಾಗಲೇ 18 ನಾಯಕಿಯರು ಫೈನಲ್ ಆಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ನಟ ಭುವನ್ ಮೊದಲು ರಾಂಧವ ಸಿನಿಮಾ ಮೂಲಕ ಚಿತ್ರಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನಿಮಾ ನಿರೀಕ್ಷೆಯ ಮಟ್ಟಕ್ಕೆ ಯಶಸ್ಸು ಕಾಣಲಿಲ್ಲ. ಇದೀಗ ರೊಮ್ಯಾಂಟಿಕ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಪ್ರಯಣ ರಾಜ ಲೈಕ್ರಾ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ. ವಿಕಾಶ್ ರಾಜ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಜನವರಿಯಿಂದ ಚಿತ್ರೀಕರಣದ ಪ್ರಾರಂಭವಾಗುತ್ತಿದೆ.