»   » 'ಮದುವೆ ಸುದ್ದಿ' ಬಗ್ಗೆ ಮಾತನಾಡಿದ 'ಬಿಗ್ ಬಾಸ್' ಪ್ರಥಮ್ !

'ಮದುವೆ ಸುದ್ದಿ' ಬಗ್ಗೆ ಮಾತನಾಡಿದ 'ಬಿಗ್ ಬಾಸ್' ಪ್ರಥಮ್ !

Posted By:
Subscribe to Filmibeat Kannada

'ಬಿಗ್ ಬಾಸ್' ಗೆದ್ದ ಮೇಲೆ ಪ್ರಥಮ್ ತಮ್ಮ ಸಿನಿಮಾಗಳಲ್ಲಿ ಬಿಜಿ ಇದ್ದಾರೆ. ಆದರೆ ಇದೀಗ ಇದ್ದಕ್ಕಿದ್ದ ಹಾಗೆ ಪ್ರಥಮ್ ಮದುವೆ ಸುದ್ದಿ ಹರಿದಾಡಿದೆ. ಪ್ರಥಮ್ ಮೈಸೂರಿನ ಒಬ್ಬ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದು ಅವರ ಜೊತೆ ಶೀಘ್ರದಲ್ಲಿಯೇ ಸಪ್ತಪದಿ ತುಳಿಯಲಿದ್ದಾರೆ ಎನ್ನುವ ಗುಸು ಗುಸು ಕೇಳಿ ಬಂದಿತ್ತು.

ಪ್ರಥಮ್ ನ ಫಾಲೋ ಮಾಡುತ್ತಾ ನಾಟಕ ಆಡ್ತಿದ್ದಾರಾ ದಿವಾಕರ್.?

ಆದರೆ ಮದುವೆ ಸುದ್ದಿ ಬಗ್ಗೆ ಇದೀಗ ಸ್ವತಃ ಪ್ರಥಮ್ ನಿಮ್ಮ 'ಫಿಲ್ಮ್ ಬೀಟ್ ಕನ್ನಡ'ಕ್ಕೆ ಸ್ಪಷ್ಟನೆ ನೀಡಿದ್ದಾರೆ. ''ಪ್ರೀತಿ ಇರುವುದು ನಿಜ. ಆಕೆ ಮೂಲತಃ ಇಂಜಿನಿಯರ್. ನಮ್ಮ ಇಬ್ಬರ ನಡುವೆ ಒಳ್ಳೆಯ ಸ್ನೇಹ ಇದೆ. ಒಬ್ಬರನ್ನೊಬ್ಬರು ಗೌರವಿಸುತ್ತೇವೆ. ಮದುವೆ ಈಗಲೇ ಆಗುತ್ತಿಲ್ಲ. ಎಂಗೇಜ್ ಮೆಂಟ್ ಕೂಡ ಹತ್ತಿರದಲ್ಲಿ ಇಲ್ಲ. ಈಗ ಧನುರ್ ಮಾಸ ಬರುತ್ತಿದೆ. ಅದರ ನಂತರ ಸಿನಿಮಾ ರಿಲೀಸ್ ಇದೆ. ಅದೇಲ್ಲ ಮುಗಿದ ಮೇಲೆ ಎಲ್ಲ ರಾಜಕಾರಣಿಗಳ ಸಮ್ಮುಖದಲ್ಲಿ ಮದುವೆ ಆಗುವ ಪ್ಲಾನ್ ಇದೆ.'' ಎಂದು ಹೇಳಿದ್ದಾರೆ.

'Big Boss Kannada 4' Winer Pratham spoke about his marriage gossip.

ಇನ್ನು ತಮ್ಮ ಪ್ರೇಯಸಿ ಬಗ್ಗೆ ಜಾಸ್ತಿ ವಿವರ ನೀಡಿದ ಪ್ರಥಮ್ ಆಕೆಯ ಹೆಸರನ್ನು ಹೇಳಲಿಲ್ಲ. ಜೊತೆಗೆ ''ನಮ್ಮ ಮನೆಯಲ್ಲಿ ಒಪ್ಪಿಯೇ ಮದುವೆ ಆಗುತ್ತೇನೆ. ಸದ್ಯ ನಾನು ನನ್ನ ಕೆಲಸದಲ್ಲಿ ಅವರು ಅವರ ಕೆಲಸದಲ್ಲಿ ಬಿಜಿ ಇದ್ದಾರೆ. ಮದುವೆ ಒಂದು ಖಾಸಗಿ ವಿಷಯ. ಎಲ್ಲರಿಗೂ ಹೇಳಿ ಮದುವೆ ಆಗುತ್ತೇನೆ.'' ಎಂದು ಹೇಳಿ ತಮ್ಮ ಮದುವೆ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

English summary
'Big Boss Kannada 4' Winer Pratham spoke about his marriage gossip.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada