For Quick Alerts
  ALLOW NOTIFICATIONS  
  For Daily Alerts

  ಸಮೀರಾಚಾರ್ಯ- ಕಿಚ್ಚನ ಭೇಟಿ ಹಿಂದೆ ಇಂಟ್ರೆಸ್ಟಿಂಗ್ ವಿಚಾರ

  By Pavithra
  |
  ಸುದೀಪ್ -ಸಮೀರ್ ಆಚಾರ್ಯ ಯಾಕೆ ಭೇಟಿ ಆಗಿದ್ದು..! | Filmibeat Kannada

  ಸಮೀರ್ ಆಚಾರ್ಯ.. ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡವರು. ಬಿಗ್ ಬಾಸ್ ಮುಗಿಸಿದ ನಂತರ ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಸಮೀರ್ ಆಚಾರ್ಯ ಈಗ ಏನು ಮಾಡುತ್ತಿದ್ದಾರೆ ಎನ್ನುವ ವಿಚಾರ ತಿಳಿದುಕೊಳ್ಳುವ ಗೋಜಿಗೆ ಯಾರು ಹೋಗಿಲ್ಲ.

  ಆದರೆ ಸುದೀಪ್ ಹಾಗೂ ಸಮೀರ್ ಆಚಾರ್ಯ ಮತ್ತು ಪತ್ನಿ ವಿಮಾನದಲ್ಲಿ ಕುಳಿತಿರುವ ಫೋಟೋ ಮಾತ್ರ ಎಲ್ಲೆಡೆ ವೈರಲ್ ಆಗ್ತಿದೆ. ಇತ್ತೀಚಿಗಷ್ಟೆ ಸುದೀಪ್ ಅವರನ್ನು ಸಮೀರ್ ಆಚಾರ್ಯ ದಂಪತಿ ಭೇಟಿ ಮಾಡಿದ್ದಾರೆ. ಒಟ್ಟಿಗೆ ಪ್ರಯಾಣ ಮಾಡಿದ್ದಾರೆ.

  ಮಗಳ ಸ್ನೇಹಿತೆಯ ಹಾಡಿಗೆ ಮನಸೋತ ಪ್ರಿಯಾ ಸುದೀಪ್ ಮಗಳ ಸ್ನೇಹಿತೆಯ ಹಾಡಿಗೆ ಮನಸೋತ ಪ್ರಿಯಾ ಸುದೀಪ್

  ಹಾಗಾದರೆ ಸುದೀಪ್ ಮತ್ತು ಸಮೀರ್ ಆಚಾರ್ಯ ಭೇಟಿ ಮಾಡಿದರ ಹಿಂದಿನ ಉದ್ದೇಶವೇನು? ಹೈದ್ರಾಬಾದ್ ನಲ್ಲಿ ಸಮೀರ್ ಆಚಾರ್ಯ ಏನು ಮಾಡುತ್ತಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

  ಸಮೀರಾಚಾರ್ಯ -ಕಿಚ್ಚ ಸುದೀಪ್ ಭೇಟಿ

  ಸಮೀರಾಚಾರ್ಯ -ಕಿಚ್ಚ ಸುದೀಪ್ ಭೇಟಿ

  ನಟ ಕಿಚ್ಚ ಸುದೀಪ್ ಹಾಗೂ ಸಮೀರಾಚಾರ್ಯ ಇತ್ತೀಚಿಗಷ್ಟೆ ವಿಮಾನದಲ್ಲಿ ಆಕಸ್ಮಿಕವಾಗಿ ಭೇಟಿ ಮಾಡಿದ್ದಾರೆ. ಹೈದ್ರಾಬಾದ್ ಗೆ ಇಬ್ಬರೂ ಪ್ರಯಾಣ ಬೆಳೆಸುವಾಗ ಭೇಟಿ ಮಾಡಿ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಕಿಚ್ಚ ಸಮೀರ್ ಆಚಾರ್ಯ ಅವರ ಫ್ಯಾಮಿಲಿಯನ್ನು ಒಟ್ಟಿಗೆ ಕುಳಿತುಕೊಳ್ಳಲು ಹೇಳಿ ಪ್ರಯಾಣದ ಉದ್ದಕ್ಕೂ ಮಾತುಕತೆ ನಡೆಸಿದ್ದಾರೆ.

  ಮಹದಾಯಿ ಹೋರಾಟಕ್ಕೆ ಸುದೀಪ್ ಸಾಥ್

  ಮಹದಾಯಿ ಹೋರಾಟಕ್ಕೆ ಸುದೀಪ್ ಸಾಥ್

  ಇದೇ ವೇಳೆ ಸುದೀಪ್ ಅವರೊಂದಿಗೆ ಮಹದಾಯಿ ಹೋರಾಟಕ್ಕೆ ಬೆಂಬಲ ನೀಡುವಂತೆ ಸಮೀರ್ ಆಚಾರ್ಯ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಉತ್ತರವಾಗಿ ಸುದೀಪ್ ರೈತರಿಗೆ ಸದಾ ನಮ್ಮ ಬೆಂಬಲ ಇರಲಿದೆ ಎನ್ನುವುದನ್ನು ತಿಳಿಸಿದ್ದಾರೆ.

  ಬಿಗ್ ಬಾಸ್ ಹಣದಿಂದ ಶಾಲೆ ಆರಂಭ

  ಬಿಗ್ ಬಾಸ್ ಹಣದಿಂದ ಶಾಲೆ ಆರಂಭ

  ಬಿಗ್ ಬಾಸ್ ನಲ್ಲಿ ಸದಾ ಹೇಳುತ್ತಿದ್ದ ಹಾಗೆಯೇ ಸಮೀರ್ ಆಚಾರ್ಯ ತಮ್ಮ ಊರಿನಲ್ಲಿ ಸ್ವಂತ ಎರಡು ಶಾಲೆಯನ್ನು ಆರಂಭ ಮಾಡಿದ್ದಾರೆ. ರೈತರ ಹಾಗೂ ಸೈನಿಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶದಿಂದಲೇ ಶಾಲೆ ಆರಂಭವಾಗಿದ್ದು ದೇಶದ ಯಾವುದೇ ಮಕ್ಕಳು ಓದಲು ಸಮಸ್ಯೆ ಆಗಿದ್ದಲ್ಲಿ ಅಂತವರನ್ನು ತಾವೇ ದತ್ತು ಸ್ವೀಕರಿಸಿ ಶಿಕ್ಷಣ ನೀಡಲಿದ್ದಾರೆ.

  ಟಾಲಿವುಡ್ ನಲ್ಲಿ ಸಮೀರ್ ಆಚಾರ್ಯ

  ಟಾಲಿವುಡ್ ನಲ್ಲಿ ಸಮೀರ್ ಆಚಾರ್ಯ

  ಸಮೀರ್ ಆಚಾರ್ಯ ಸದ್ಯ ಟಾಲಿವುಡ್ ಕಿರುತೆರೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದು ಬಿಗ್ ಬಾಸ್ ಕಾರ್ಯಕ್ರಮದಿಂದ ಇಂದು ಸಾಕಷ್ಟು ಉಪಯೋಗವಾಗಿದೆ ಎನ್ನುತ್ತಾರೆ. ತಂದೆ, ತಾಯಿ ಹಾಗೂ ಹೆಂಡತಿ ಸಹಾಯದಿಂದ ಇಷ್ಟೆಲ್ಲಾ ಮಾಡಲು ಅವಕಾಶವಾಯ್ತು ಎನ್ನುವುದು ಸಮೀರ್ ಆಚಾರ್ಯ ಅಭಿಪ್ರಾಯ.

  English summary
  Kannada Big boss reality show contestant Sameer Acharya has met Sudeep, Sameer Acharya has started school with money from Big Boss.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X