For Quick Alerts
  ALLOW NOTIFICATIONS  
  For Daily Alerts

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆನೇ ಚಾಲೆಂಜ್ ಮಾಡಿದ ರಣ್ವೀರ್ ಸಿಂಗ್

  |
  ಇಬ್ಬರ ಮಧ್ಯೆ ಪೈಪೋಟಿ ಏರ್ಪಟ್ಟಿರೋದು ಯಾಕೆ? | Darshan | Roberrt | Ranveer | 83 | Filmibeat kannada

  ನಟ ದರ್ಶನ್ ಚಾಲೆಂಜಿಂಗ್ ಸ್ಟಾರ್. ಆದರೆ, ಈಗ ಬಾಲಿವುಡ್ ನಟ ರಣ್ವೀರ್ ಸಿಂಗ್ ದರ್ಶನ್ ಗೆ ಚಾಲೆಂಜ್ ಹಾಕಿದ್ದಾರೆ.

  ದರ್ಶನ್ ನಟನೆಯ ಬಹು ನಿರೀಕ್ಷಿತ ಸಿನಿಮಾ 'ರಾಬರ್ಟ್' ಬಿಡುಗಡೆಯ ದಿನಾಂಕ ನಿಗದಿಯಾಗಿದೆ. ಏಪ್ರಿಲ್ ನಲ್ಲಿ ಸಿನಿಮಾ ಬರುವುದು ಪಕ್ಕಾ ಆಗಿದೆ. ಚಿತ್ರತಂಡ ಬಿಡುಗಡೆಯ ದಿನ ಘೋಷಣೆ ಮಾಡಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಆ ದಿನ ದೊಡ್ಡ ಪೈಪೋಟಿಯನ್ನು ಎದುರಿಸಬೇಕಾಗಿದೆ.

  'ರಾಬರ್ಟ್' ಸಿನಿಮಾದ ಪುಟ್ಟ ರಾಮನ ಬಗ್ಗೆ ಎಕ್ಸ್ ಕ್ಲೂಸಿವ್ ಸುದ್ದಿ'ರಾಬರ್ಟ್' ಸಿನಿಮಾದ ಪುಟ್ಟ ರಾಮನ ಬಗ್ಗೆ ಎಕ್ಸ್ ಕ್ಲೂಸಿವ್ ಸುದ್ದಿ

  ದರ್ಶನ್ ಸಿನಿಮಾದ ಜೊತೆಗೆ ಅದೇ ವೇಳೆಗೆ ಹಿಂದಿಯ ಬಹು ದೊಡ್ಡ ಸಿನಿಮಾ ಬಿಡುಗಡೆಯಾಗುತ್ತಿದೆ. ಹೀಗಾಗಿ, ಎರಡು ಚಿತ್ರಗಳ ನಡುವೆ ಸ್ಪರ್ಧೆ ನಡೆಯುವುದು ಪಕ್ಕಾ ಆಗಿದೆ.

  ಏಪ್ರಿಲ್ 10ಕ್ಕೆ '83' ಸಿನಿಮಾ

  ಏಪ್ರಿಲ್ 10ಕ್ಕೆ '83' ಸಿನಿಮಾ

  ರಣ್ವೀರ್ ಸಿಂಗ್ ನಟನೆಯ '83' ಸಿನಿಮಾ ಏಪ್ರಿಲ್ 10ಕ್ಕೆ ಬಿಡುಗಡೆ ಆಗುತ್ತಿದೆ. ಭಾರತ ಕ್ರಿಕೆಟ್ ತಂಡದ ಮೊದಲ ವಿಶ್ವ ಕಪ್ ಗೆದ್ದ ಕಥೆಯನ್ನು ಸಿನಿಮಾ ಹೊಂದಿದೆ. ಕಬೀರ್ ಖಾನ್ ಚಿತ್ರದ ನಿರ್ದೇಶನ ಮಾಡಿದ್ದಾರೆ. ಹಿಟ್ ಮೇಲೆ ಹಿಟ್ ನೀಡುತ್ತಿರುವ ರಣ್ವೀರ್ ದೊಡ್ಡ ನಿರೀಕ್ಷೆಯನ್ನು ಹುಟ್ಟುಹಾಕಿದ್ದಾರೆ.

  'ರಾಬರ್ಟ್' ಬಿಡುಗಡೆ ಏಪ್ರಿಲ್ 9ಕ್ಕೆ

  'ರಾಬರ್ಟ್' ಬಿಡುಗಡೆ ಏಪ್ರಿಲ್ 9ಕ್ಕೆ

  'ರಾಬರ್ಟ್' ಸಿನಿಮಾದ ರಿಲೀಸ್ ಪಕ್ಕಾ ಆಗಿದೆ. ಏಪ್ರಿಲ್ 9 ರಂದು ಚಿತ್ರ ರಿಲೀಸ್ ಆಗುತ್ತಿದೆ. ಗುಡ್ ಫ್ರೈಡೇ ಹಾಗೂ ರಾಮ ನವಮಿಯ ನಡುವೆ ಸಿನಿಮಾ ತೆರೆಗೆ ಬರುತ್ತಿದೆ. ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದು, ಬಿಡುಗಡೆಗೆ ಇದೇ ಒಳ್ಳೆಯ ದಿನ ಎನ್ನುವುದು ಚಿತ್ರತಂಡದ ನಿರ್ಧಾರ. ತರುಣ್ ಸುಧೀರ್ ಚಿತ್ರದ ನಿರ್ದೇಶಕ.

  ಬೇಸಿಗೆಯಲ್ಲಿ ಸ್ಟಾರ್ ನಟರ ಕಾಳಗ: ಒಂದೇ ತಿಂಗಳಲ್ಲಿ ಬರ್ತಿವೆ ಬಿಗ್ ಸಿನಿಮಾಗಳುಬೇಸಿಗೆಯಲ್ಲಿ ಸ್ಟಾರ್ ನಟರ ಕಾಳಗ: ಒಂದೇ ತಿಂಗಳಲ್ಲಿ ಬರ್ತಿವೆ ಬಿಗ್ ಸಿನಿಮಾಗಳು

  ಬೆಂಗಳೂರು ಮಾರ್ಕೆಟ್

  ಬೆಂಗಳೂರು ಮಾರ್ಕೆಟ್

  'ರಾಬರ್ಟ್' ಸೌತ್ ಇಂಡಿಯಾದ ದೊಡ್ಡ ಸಿನಿಮಾ. '83' ಬಾಲಿವುಡ್ ಬಿಗ್ ಸಿನಿಮಾ. ಈ ಎರಡು ಸಿನಿಮಾಗಳು ಒಟ್ಟಿಗೆ ಬಿಡುಗಡೆ ಆಗುವ ಕಾರಣ ಪ್ರೇಕ್ಷಕ ವರ್ಗ ವಿಭಜನೆ ಆಗುತ್ತದೆ. ಬೆಂಗಳೂರಿನಲ್ಲಿ ಎರಡು ಸಿನಿಮಾಗಳ ನಡುವೆ ಪೈಪೋಟಿ ನಡೆಯುತ್ತದೆ. ಅದೇನೇ ಇದ್ದರೂ ಸಿನಿಮಾ ಇಷ್ಟ ಆದ್ರೆ, ಜನ ಎರಡೂ ಚಿತ್ರವನ್ನೂ ಗೆಲ್ಲಿಸುತ್ತಾರೆ.

  ಏಪ್ರಿಲ್ ನಲ್ಲಿ ಕನ್ನಡ ಚಿತ್ರಗಳ ಕಾಳಗ

  ಏಪ್ರಿಲ್ ನಲ್ಲಿ ಕನ್ನಡ ಚಿತ್ರಗಳ ಕಾಳಗ

  'ರಾಬರ್ಟ್' ಮಾತ್ರವಲ್ಲದೆ, ಏಪ್ರಿಲ್ ನಲ್ಲಿ ಕನ್ನಡದ ಇನ್ನೆರಡು ಸಿನಿಮಾಗಳ ಬಿಡುಗಡೆ ಆಗಲು ಸಜ್ಜಾಗಿವೆ. ಸುದೀಪ್ ಅಭಿನಯ 'ಕೋಟಿಗೊಬ್ಬ 3' ಹಾಗೂ ಪುನೀತ್ ರಾಜ್ ಕುಮಾರ್ ನಟನೆಯ 'ಯುವರತ್ನ' ಚಿತ್ರಗಳು ಅದೇ ತಿಂಗಳಿನಲ್ಲಿ ಬರುವ ಸಾಧ್ಯತೆ ಇದೆ. ಈ ಮೂರು ಸಿನಿಮಾಗಳು ಒಂದೇ ತಿಂಗಳು ಬಂದರೆ, ಬಾಕ್ಸ್ ಆಫೀಸ್ ನಲ್ಲಿ ಬಿಗ್ ಫೈಟ್ ನಡೆಯಲಿದೆ.

  'ರಾಬರ್ಟ್'ನಲ್ಲಿ ಮೈಸೂರು ಹುಡುಗಿ: ಯಾರೀ ಸುಂದರಿ?'ರಾಬರ್ಟ್'ನಲ್ಲಿ ಮೈಸೂರು ಹುಡುಗಿ: ಯಾರೀ ಸುಂದರಿ?

  English summary
  Big fight between 83 and roberrt movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X