For Quick Alerts
  ALLOW NOTIFICATIONS  
  For Daily Alerts

  ಶಿರಾ ಉಪಚುನಾವಣೆ ಕಣಕ್ಕೆ ಧುಮುಕಲಿದ್ದಾರೆ ಬಿಗ್‌ಬಾಸ್ ಮಾಜಿ ಸ್ಪರ್ಧಿ

  |

  ಬಿಗ್‌ಬಾಸ್ ಸ್ಪರ್ಧಿ ದಿವಾಕರ್ ಅವರು ಶಿರಾ ಉಪಚುನಾವಣೆ ಕಣಕ್ಕೆ ಇಳಿದಿದ್ದಾರೆ. 'ಶಿರಾ ಕ್ಷೇತ್ರ ಉಪಚುವಾವಣೆಯಲ್ಲಿ ನಾನು ಸ್ಪರ್ಧಿಸಲಿದ್ದೇನೆ' ಎಂದು ಅವರು 'ಫಿಲ್ಮೀಬೀಟ್‌'ಗೆ ಹೇಳಿದ್ದಾರೆ.

  'ಕೆಲವು ಪಕ್ಷಗಳ ಜೊತೆಗೆ ಮಾತಾಡುತ್ತಿದ್ದೀನಿ, ಯಾವ ಪಕ್ಷದ ಚಿಹ್ನೆಯಡಿ ಚುನಾವಣೆಗೆ ನಿಲ್ಲಲಿದ್ದೇನೆ ಎಂಬುದನ್ನು ಇನ್ನು ಐದು ದಿನದಲ್ಲಿ ಘೋಷಿಸಲಿದ್ದೇನೆ. ಪಕ್ಷ ಇಲ್ಲದೇ ಹೋದರೆ ಪಕ್ಷೇತರವಾಗಿಯಾದರೂ ಸರಿ ಚುನಾವಣೆಗೆ ಸ್ಪರ್ಧಿಸುವುದಂತೂ ಖಾಯಂ' ಎಂದಿದ್ದಾರೆ ದಿವಾಕರ್.

  'ಶಿರಾ ಕ್ಷೇತ್ರದ ಪರಿಚಯ ನನಗೆ ಇದೆ. ಸೇಲ್ಸ್‌ಮ್ಯಾನ್ ಆಗಿ ಇಡೀಯ ಕರ್ನಾಟಕವನ್ನೇ ಸುತ್ತು ಹಾಕಿದ್ದೀನಿ. ತುಮಕೂರು, ಶಿರಾಗಳಲ್ಲಿ ಸಹ ಓಡಾಡಿದ್ದೇನೆ, ಜನರ ಜೊತೆ ಬೆರೆತಿದ್ದೇನೆ. ಕೊರೊನಾ ಸಮಯದಲ್ಲಿ ಮಾಸ್ಕ್ ಹಂಚಿಕೆ ಮಾಡಲು ಶಿರಾಗೆ ಬಂದಿದ್ದೆ. ಉದ್ಯೋಗದ ಕಾರಣಕ್ಕೂ ಬಂದಿದ್ದೆ ಇಲ್ಲಿನ ಜನರ ಪರಿಚಯ ನನಗೆ ಇದೆ' ಎಂದರು ದಿವಾಕರ್.

  ಖಂಡಿತ ಗೆದ್ದೇ ಗೆಲ್ಲುತ್ತೀನಿ: ದಿವಾಕರ್

  ಖಂಡಿತ ಗೆದ್ದೇ ಗೆಲ್ಲುತ್ತೀನಿ: ದಿವಾಕರ್

  'ದೊಡ್ಡ ಪಕ್ಷಗಳ ನಡುವೆ ಸ್ಪರ್ಧಿಸಿ ಸೋಲುವ ಭಯ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ದಿವಾಕರ್, 'ಸೋಲುವ ಭಯ ನನಗೆ ಸ್ವಲ್ಪವೂ ಇಲ್ಲ, ಖಂಡಿತ ಗೆದ್ದೇ ಗೆಲ್ತೀನಿ, ಸಾಕಷ್ಟು ಲೆಕ್ಕಾಚಾರ ಮಾಡಿಕೊಂಡೆ ಚುನಾವಣೆಗೆ ನಿಲ್ಲುವ ನಿರ್ಣಯಕ್ಕೆ ಬಂದಿದ್ದೇನೆ. ನನ್ನ ಕುಟುಂಬ, ಗೆಳೆಯರು, ಹಿರಿಯರೊಡನೆ ಚರ್ಚಿಸಿಯೇ ಈ ನಿರ್ಣಯ ಮಾಡಿದ್ದೇನೆ' ಎಂದರು.

  ದಿವಾಕರ್ ಗೆಳೆಯರನ್ನು ಪ್ರಚಾರಕ್ಕೆ ಕರೆತರುವ ಬಗ್ಗೆ ಯೋಚಿಸಿಲ್ಲ: ದಿವಾಕರ್

  ದಿವಾಕರ್ ಗೆಳೆಯರನ್ನು ಪ್ರಚಾರಕ್ಕೆ ಕರೆತರುವ ಬಗ್ಗೆ ಯೋಚಿಸಿಲ್ಲ: ದಿವಾಕರ್

  'ನನ್ನ ಗೆಳೆಯರು ನನಗೆ ಬೆಂಬಲ ನೀಡಿದ್ದಾರೆ. ನನ್ನ ಬಿಗ್‌ಬಾಸ್ ಗೆಳೆಯರನ್ನು ಪ್ರಚಾರಕ್ಕೆ ಕರೆದುಕೊಂಡು ಬರುವ ಬಗ್ಗೆ ಈಗಲೇ ಹೇಳಲಾರೆ. ಆದರೆ ಅವರ ಬೆಂಬಲವಂತೂ ನನಗೆ ಇದ್ದೇ ಇದೆ. ಈಗಿನಿಂದಲೇ ಶಿರಾ ಕ್ಷೇತ್ರದಲ್ಲಿ ಓಡಾಟ ಪ್ರಾರಂಭಿಸುತ್ತೇನೆ. ತಾತ್ಕಾಲಿಕವಾಗಿ ವಾಸ್ತವ್ಯವನ್ನು ಶಿರಾ ಗೆ ವರ್ಗಾವಣೆ ಮಾಡಿಕೊಳ್ಳುತ್ತೇನೆ. ಇಲ್ಲಿನ ಜನರೊಂದಿಗೆ ಬೆರೆಯುತ್ತೇನೆ ಎಂದಿದ್ದಾರೆ ದಿವಾಕರ್.

  ಬಿಗ್‌ಬಾಸ್ ಸ್ಪರ್ಧಿ ಎಂಬ ಕಾರಣಕ್ಕೆ ಮತಹಾಕುವುದು ಬೇಡ: ದಿವಾಕರ್

  ಬಿಗ್‌ಬಾಸ್ ಸ್ಪರ್ಧಿ ಎಂಬ ಕಾರಣಕ್ಕೆ ಮತಹಾಕುವುದು ಬೇಡ: ದಿವಾಕರ್

  'ನಾನು ಬಿಗ್‌ಬಾಸ್ ಸ್ಪರ್ಧಿ, ಸಿನಿಮಾ ಮಾಡಿದ್ದೇನೆ ಎಂಬ ಕಾರಣಕ್ಕೆ ಜನ ಮತ ಹಾಕುವುದು ಬೇಡ. ಅವರಿಗಾಗಿ ನಾನು ಕೆಲಸ ಮಾಡ್ತೀನಿ ಎಂಬ ನಂಬಿಕೆಯಲ್ಲಿ ನನಗೆ ಮತ ಹಾಕಲಿ ಸಾಕು. ಸಾಮಾನ್ಯವ್ಯಕ್ತಿಯಾಗಿ ನನಗೆ ಸಾಮಾನ್ಯ ವ್ಯಕ್ತಿಯ ಕಷ್ಟ ಗೊತ್ತು, ಅವರಿಗೆ ಆಗುತ್ತಿರುವ ತೊಂದರೆಗಳು ಗೊತ್ತು. ಸರ್ಕಾರದಿಂದ ಅವರಿಗೆ ಏನು ಸಿಗಬೇಕೋ ಅದು ಸಿಗುತ್ತಿಲ್ಲ, ಸಾಮಾನ್ಯರ ಹಕ್ಕನ್ನು ಅವರಿಗೆ ಕೊಡಿಸುವ ಉದ್ದೇಶದಿಂದ ನಾನು ಚುನಾವಣೆಗೆ ನಿಂತಿದ್ದೇನೆ' ಎಂದು ತಮ್ಮ ಉದ್ಧೇಶ ಸ್ಪಷ್ಟಪಡಿಸಿದರು.

  ಕಾಂಗ್ರೆಸ್-ಜೆಡಿಎಸ್ ನಡುವೆ ಸ್ಪರ್ಧೆ

  ಕಾಂಗ್ರೆಸ್-ಜೆಡಿಎಸ್ ನಡುವೆ ಸ್ಪರ್ಧೆ

  ಶಿರಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನಾಂಕವಾಗಿದೆ. ಕಾಂಗ್ರೆಸ್ ಪಕ್ಷ ಈಗಾಗಲೇ ಅಭ್ಯರ್ಥಿಯನ್ನು ಘೋಷಿಸಿ ಆಗಿದೆ. ಜೆಡಿಎಸ್ ಮತ್ತು ಬಿಜೆಪಿ ತಮ್ಮ ಅಭ್ಯರ್ಥಿ ಘೋಷಿಸಬೇಕಿದೆ. ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್‌ ಹೆಚ್ಚು ಪ್ರಭಲವಾಗಿದೆ.

  English summary
  Bigg Boss former contestant Diwakar said he will contest in Sira by election. He said talks going on with a political party.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X