Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹಿಂದಿ ಆಲ್ಬಂ ಸಾಂಗ್ ಲೋಕದಲ್ಲಿ 'ಬಿಗ್ ಬಾಸ್' ಖ್ಯಾತಿಯ ನಟ ಶೈನ್ ಶೆಟ್ಟಿ
ನಟ ಮತ್ತು ಕಿರುತೆರೆ ಸ್ಟಾರ್ ಶೈನ್ ಶೆಟ್ಟಿ ಸಿಹಿ ಸುದ್ದಿಯೊಂದಿಗೆ ಸದ್ದು ಮಾಡುತ್ತಿದ್ದಾರೆ. ಕಳೆದ ವರ್ಷ ಇದೆ ಸಮಯದಲ್ಲಿ ಬಿಗ್ ಬಾಸ್ ಸೀಸನ್ 7 ಟ್ರೋಫಿ ಎತ್ತಿ ಹಿಡಿದು ಬೀಗಿದ್ದರು. ಈ ಅದ್ಭುತ ಕ್ಷಣಕ್ಕೆ ಈಗ ಒಂದು ವರ್ಷದ ಸಂಭ್ರಮ.
Recommended Video
ಇದೇ ಖುಷಿಯಲ್ಲಿ ಶೈನ್ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಬಿಗ್ ಬಾಸ್ ಗೆದ್ದ ಬಳಿಕ ಶೈನ್ ಏನು ಮಾಡಲಿದ್ದಾರೆ, ಯಾವ ಸಿನಿಮಾಗಳಲ್ಲಿ ನಟಿಸಲಿದ್ದಾರೆ, ಕಿರುತೆರೆಯಲ್ಲೇ ಮುಂದುವರೆಯುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಶೈನ್ ಸಿನಿಮಾಗಳ ಜೊತೆಗೀಗ ಹಿಂದಿ ಆಲ್ಬಂ ಸಾಂಗ್ ಲೋಕಕ್ಕೆ ಕಾಲಿಡುತ್ತಿದ್ದಾರೆ.
ವರ್ಷದ
ಬಳಿಕ
ಶೈನ್
ಶೆಟ್ಟಿಗೆ
ಸಿಕ್ತು
'ಬಿಗ್
ಬಾಸ್-7'ನಿಂದ
ಗೆದ್ದ
ಕಾರು

ಹಿಂದಿ ಆಲ್ಬಂ ಸಾಂಗ್ ನಲ್ಲಿ ಶೈನ್ ಶೆಟ್ಟಿ
ಈ ವಿಚಾರ ಬಿಗ್ ಬಾಸ್ ಗೆದ್ದ ಒಂದು ವರ್ಷದ ಸಂಭ್ರಮವನ್ನು ಶೈನ್ ಗೆ ಮತ್ತಷ್ಟು ಹೆಚ್ಚಿಸಿದೆ. ಅಂದಹಾಗೆ ಶೈನ್ ಬಾಲಿವುಡ್ ಕಡೆ ಹೊರಟಿರುವುದು ಆಲ್ಬಂ ಹಾಡಿಗಾಗಿ. ಹೌದು, ಶೈನ್ ಶೆಟ್ಟಿ ಹಿಂದಿ ಆಲ್ಬಂ ಸಾಂಗ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ಹಾಡನ್ನು ಸಂಚಿತ್ ಹೆಗ್ಡೆ ಹಾಡುತ್ತಿದ್ದಾರೆ.

ಹಾಡಿನ ಬಗ್ಗೆ ಶೈನ್ ಹೇಳಿದ್ದೇನು?
ಹಾಡಿಗೆ ಧೂಂಡೆ ಎಂದು ಟೈಟಲ್ ಇಡಲಾಗಿದೆ. 'ಪಯಣದ ಹಾಡಾಗಿದ್ದು, ನಾಯಕ ತನ್ನನ್ನೆ ತಾನು ಪ್ರಶ್ನಿಸಿಕೊಳ್ಳುತ್ತಾ ಹೊಸ ಜೀವನವನ್ನು ನೋಡುತ್ತಿರುತ್ತಾನೆ. ಇದೊಂದು ಫ್ಯಾಂಟಸಿ ಪ್ರಯಾಣ ಕಥೆಯಾಗಿದೆ' ಎಂದು ಶೈನ್ ಟೈಮ್ಸ್ ಆಫ್ ಇಂಡಿಯಾಗೆ ನೀಡಿರುವ ಮಾಹಿತಿಯಲ್ಲಿ ಬಹಿರಂಗ ಪಡಿಸಿದ್ದಾರೆ.

ಯತೀಶ್ ರಾಜ್ ನಿರ್ದೇಶನ
ಈ ಹಾಡನ್ನು ಯತೀಶ್ ರಾಜ್ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಈ ಹಾಡಿಗೆ ಡ್ಯಾನಿ ಕುರಿಯನ್ ಮತ್ತು ಸುಮಿತ್ ಬಂಗೇರಾ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಹಾಡಿನಲ್ಲಿ ಒಂದು ಕಾಲ್ಪನಿಕ ಹಳ್ಳಿಯ
ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ಶೈನ್ ಶೆಟ್ಟಿ ಬ್ಯಾಗ್ ಡ್ರಾಪ್ ಇರಲಿದ್ದು, ಹಿಮಾಚಲ ಪ್ರದೇಶದ ಕಿನೌರ್ ಎನ್ನುವ ಹಳ್ಳಿಯನ್ನು ಸ್ಥಾಪಿಸಲಾಗಿದೆಯಂತೆ.
ಶೈನ್
ಶೆಟ್ಟಿ-
ಗಾಯಕಿ
ಸಂಗೀತಾ
ಕೊನೆಗೂ
ಸರ್ಪ್ರೈಸ್
ಕೊಟ್ಟೆ
ಬಿಟ್ಟರು!

ಮಾರ್ಚ್ ನಿಂದ ಚಿತ್ರೀಕರಣ
ಅಂದಹಾಗೆ ಶೈನ್ ಶೆಟ್ಟಿಯ ಕನಸಿನ ಪ್ರಾಜೆಕ್ಟ್ ಮಾರ್ಚ್ ತಿಂಗಳಿಂದ ಪ್ರಾರಂಭವಾಗಲಿದೆ ಎನ್ನುವ ಮಾಹಿತಿ ತಿಳಿದುಬರುತ್ತಿದೆ. ಒಟ್ಟು 10 ದಿನಗಳ ಕಾಲ ಶೂಟಿಂಗ್ ನಡೆಯಲಿದೆಯಂತೆ. ಈ ಬಗ್ಗೆ ಉತ್ಸುಕರಾಗಿರುವ ಶೈನ್ ಈ ಹಾಡು ಬಾಲಿವುಡ್ ನಲ್ಲಿ ಮತ್ತಷ್ಟು ಅವಕಾಶಗಳ ಬಾಗಿಲು ತೆರೆಯಲಿದೆಯಾ ಎನ್ನುವ ದೊಡ್ಡ ನಿರೀಕ್ಷೆಯಲ್ಲಿದ್ದಾರೆ.