»   » ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ 'ಬಿಗ್ ಬಾಸ್' ಗೌತಮಿ

ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ 'ಬಿಗ್ ಬಾಸ್' ಗೌತಮಿ

Posted By:
Subscribe to Filmibeat Kannada
ಬಿಗ್ ಬಾಸ್ ಖ್ಯಾತಿಯ ಈ ಬೆಡಗಿ ಈಗ ಮಿಸ್ಸೆಸ್ ಕ್ರಿಸ್ಟಿ | Filmibeat Kannada

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ 3ನೇ ಸೀಸನ್ ನಲ್ಲಿ ಸ್ಪರ್ಧಿಯಾಗಿದ್ದ ನಟಿ ಗೌತಮಿ ಗೌಡ ಹೊಸ ಬಾಳಿಗೆ ಕಾಲಿಡಲು ಸಿದ್ಧವಾಗಿದ್ದಾರೆ. ಇಷ್ಟು ದಿನ ಒಂಟಿ ಜೀವನ ನಡೆಸುತ್ತಿದ್ದ ಈಗ ನಟಿ ದಾಂಪತ್ಯ ಜೀವನಕ್ಕೆ ಪ್ರವೇಶ ಮಾಡುತ್ತಿದ್ದಾರೆ.

ಬಿಗ್ ಬಾಸ್ ನಿಂದ ಹೊರ ಬಂದ ನಂತರ ಕೆಲವು ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ಗೌತಮಿ ಗೌಡ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಡಲು ಅಣಿಯಾದ ಮತ್ತೊಬ್ಬ ಕನ್ನಡದ ನಟ

ತಮ್ಮ ದೀರ್ಘಕಾಲದ ಗೆಳೆಯನ ಜೊತೆ ಮುಂದಿನ ಜೀವನವನ್ನ ಸಾಗಿಸಲು ನಿರ್ಧರಿಸಿರುವ ಗೌತಮಿ ಉಂಗುರ ಬದಲಿಸಿಕೊಂಡಿದ್ದಾರೆ. ಹಾಗಿದ್ರೆ, ಗೌತಮಿ ಗೌಡ ಅವರ ನಿಶ್ಚಿತಾರ್ಥ ಯಾವಾಗ ನೆರವೇರಿತು.? ಗೌತಮಿ ಅವರನ್ನ ವರಿಸಲಿರುವ ಆ ಹುಡುಗ ಯಾರು.? ಮುಂದೆ ಓದಿ....

ಪ್ರೀತಿಸಿದ ಹುಡುಗನ ಜೊತೆ ನಿಶ್ಚಿತಾರ್ಥ

ಜಾರ್ಜ್ ಕ್ರಿಸ್ಟಿ ಎಂಬುವವರನ್ನ ಪ್ರೀತಿಸುತ್ತಿದ್ದ ಗೌತಮಿ ಗೌಡ ನಂತರ ಪ್ರೀತಿಯ ವಿಚಾರವನ್ನ ಎರಡು ಮನೆಯವರಿಗೆ ತಿಳಿಸಿ ಗುರು-ಹಿರಿಯರು ಸಮ್ಮುಖದಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಖುದ್ದು ಈ ಫೋಟೋವನ್ನ ಗೌತಮಿ ಗೌಡ ಮತ್ತು ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

in pics: ಗೌತಮಿ ಗೌಡ ನಿಶ್ಚಿತಾರ್ಥ ಫೋಟೋಗಳು

ಹಲವು ವರ್ಷಗಳ ಸ್ನೇಹಿತ

ಅಂದ್ಹಾಗೆ, ಜಾರ್ಜ್ ಕ್ರಿಸ್ಟಿ ಮತ್ತು ಗೌತಮಿ ಗೌಡ ಹಲವು ವರ್ಷಗಳ ಸ್ನೇಹಿತರು. ತಮ್ಮ ಸ್ನೇಹ, ಪ್ರೀತಿ ನಂತರ ಈಗ ದಾಂಪತ್ಯದ ಕಡೆ ಸಾಗಿದೆ. ಮೂಲತಃ ಕ್ರಿಶ್ಚಿಯನ್ ಸಮುದಾಯದವರಾಗಿರುವ ಜಾರ್ಜ್ ಕ್ರಿಸ್ಟಿ ಅವರು, ಗೌತಮಿ ಅವರ ಕುಟುಂಬಕ್ಕೂ ಪರಿಚಯ ಇದ್ದರು. ಹೀಗಾಗಿ, ಇವರ ನಡುವಿನ ಬಾಂಧವ್ಯ ಮದುವೆಗೆ ತಿರುಗಿದೆ.

ಉಂಗುರ ಬದಲಿಸಿಕೊಂಡ ಬಾಲಿವುಡ್ ನಟ ಪ್ರತೀಕ್ ಬಬ್ಬರ್

ಮದುವೆ ದಿನಾಂಕದ ಬಗ್ಗೆ ಮಾಹಿತಿ ಇಲ್ಲ

ಸದ್ಯ, ಸಂಪ್ರದಾಯವಾಗಿ ಎಂಗೇಜ್ ಮೆಂಟ್ ಮಾಡಿಕೊಂಡಿರುವ ಗೌತಮಿ ಗೌಡ ಮತ್ತು ಜಾರ್ಜ್ ಕ್ರಿಸ್ಟಿ ಅವರ ವಿವಾಹದ ದಿನಾಂಕದ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಇದೇ ವರ್ಷ ಮುಹೂರ್ತ ನಡೆಯಲಿದೆ ಎನ್ನಲಾಗುತ್ತಿದೆ.

ಗೌತಮಿ ಗೌಡ ಅವರ ಕುರಿತು

‘ಚಿ.ಸೌ. ಸಾವಿತ್ರಿ', ‘ಮುತ್ತಿನ ಪಲ್ಲಕ್ಕಿ' ಸೇರಿದಂತೆ ಹಲವಾರು ಧಾರಾವಾಹಿ, ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಗೌತಮಿ ಗೌಡ ಬಿಗ್ ಬಾಸ್ ರಿಯಾಲಿಟಿ ಶೋನಿಂದ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದರು.

English summary
Bigg boss kannada season 3 contestants gowthami gowda got engaged with her long time friend george christie on april 28th.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X