»   » ಅಂತೂ ಇಂತೂ ಬಂಪರ್ ಆಫರ್ ಗಿಟ್ಟಿಸಿದ 'ಬಿಗ್ ಬಾಸ್' ದಿವಾಕರ್!

ಅಂತೂ ಇಂತೂ ಬಂಪರ್ ಆಫರ್ ಗಿಟ್ಟಿಸಿದ 'ಬಿಗ್ ಬಾಸ್' ದಿವಾಕರ್!

Posted By:
Subscribe to Filmibeat Kannada
ಅಂತೂ ಇಂತೂ ಬಂಪರ್ ಆಫರ್ ಗಿಟ್ಟಿಸಿದ 'ಬಿಗ್ ಬಾಸ್' ದಿವಾಕರ್! | Fimibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಮೊದಲ ದಿನದಿಂದಲೇ ಗದ್ದಲ-ಗಲಾಟೆಯಿಂದ ಗುರುತಿಸಿಕೊಂಡವರು 'ಕಾಮನ್ ಮ್ಯಾನ್' ದಿವಾಕರ್. ವೃತ್ತಿಯಲ್ಲಿ ಸೇಲ್ಸ್ ಮ್ಯಾನ್ ಆಗಿದ್ದರೂ, 'ಬಿಗ್ ಬಾಸ್' ಅಂತ ದೊಡ್ಡ ರಿಯಾಲಿಟಿ ಶೋನಲ್ಲಿ ರನ್ನರ್ ಅಪ್ ಸ್ಥಾನ ಗಿಟ್ಟಿಸಿದ ದಿವಾಕರ್ ಗೆ ಇದೀಗ ಬಂಪರ್ ಆಫರ್ ವೊಂದು ಹುಡುಕಿಕೊಂಡು ಬಂದಿದೆ.

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಎರಡನೇ ಸ್ಥಾನ ಪಡೆದುಕೊಂಡ ಮೇಲೆ, ಕೆಂಪು ಕಲರ್ ಸ್ವಿಫ್ಟ್ ಕಾರು ಖರೀದಿ ಮಾಡಿದ ದಿವಾಕರ್, ಸಿನಿಮಾಗಳಲ್ಲಿ ನಟಿಸಬೇಕು ಎಂಬ ತಮ್ಮ ಇಚ್ಛೆಯನ್ನ ಹೊರ ಹಾಕಿದರು. ಹಾಗ್ನೋಡಿದ್ರೆ, 'ಬಿಗ್ ಬಾಸ್' ಮನೆಯಲ್ಲಿ ಇದ್ದಾಗ ಕುಡುಕನಾಗಿ ತಮ್ಮ ನಟನಾ ಪ್ರತಿಭೆಯನ್ನ ದಿವಾಕರ್ ಹೊರ ಹಾಕಿದ್ದರು.

ಈಗ ಅದೆಲ್ಲವೂ ದಿವಾಕರ್ ಭವಿಷ್ಯಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಚಿತ್ರವೊಂದರ ಪ್ರಮುಖ ಪಾತ್ರದಲ್ಲಿ ನಟಿಸುವ ಸುವರ್ಣಾವಕಾಶ 'ಬಿಗ್ ಬಾಸ್' ದಿವಾಕರ್ ಗೆ ಲಭಿಸಿದೆ. ಅದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ...

ಮನೋರಂಜನ್ ಚಿತ್ರದಲ್ಲಿ ದಿವಾಕರ್ ನಟನೆ!

'ಸಾಹೇಬ', 'ಬೃಹಸ್ಪತಿ' ಸಿನಿಮಾಗಳ ಬಳಿಕ ನಟ ಮನೋರಂಜನ್ ರವಿಚಂದ್ರನ್ ಅಭಿನಯಿಸಲು ಒಪ್ಪಿಕೊಂಡಿರುವ ಸಿನಿಮಾ 'ಚಿಲ್ಲಂ'. ಇದೇ ಚಿತ್ರದ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚುವ ಅವಕಾಶ ದಿವಾಕರ್ ಪಾಲಾಗಿದೆ.

ಸದ್ಯದಲ್ಲೇ ದಿವಾಕರ್ 'ಹೀರೋ' ಆದರೆ ಅಚ್ಚರಿ ಪಡಬೇಡಿ.!

'ಚಿಲ್ಲಂ' ಚಿತ್ರದಲ್ಲಿ ದಿವಾಕರ್ ಪಾತ್ರ ಏನು.?

'ಚಿಲ್ಲಂ' ಚಿತ್ರದಲ್ಲಿ ಹೀರೋ (ಮನೋರಂಜನ್ ರವಿಚಂದ್ರನ್) ಫ್ರೆಂಡ್ ಪಾತ್ರದಲ್ಲಿ ದಿವಾಕರ್ ಕಾಣಿಸಿಕೊಳ್ಳಲಿದ್ದಾರೆ. ನೆಗೆಟಿವ್ ಶೇಡ್ ನಲ್ಲಿ ಮಿಂಚಲಿರುವ ದಿವಾಕರ್ ಇಡೀ ಸಿನಿಮಾದಲ್ಲಿ ಹೀರೋ ಜೊತೆಯಲ್ಲೇ ಇರಲಿದ್ದಾರೆ.

ರಾಘವೇಂದ್ರ ರಾಜ್ ಕುಮಾರ್ ಸಿನಿಮಾದಲ್ಲಿ ಸರಿತಾ ನಟನೆ

ಸಿನಿಮಾದಲ್ಲಿ ಮನೋರಂಜನ್ ಗಾಂಜಾ ಸ್ಮಗ್ಲರ್

'ಚಿಲ್ಲಂ' ಚಿತ್ರದಲ್ಲಿ ಮನೋರಂಜನ್ ಗಾಂಜಾ ಸ್ಮಗ್ಲರ್ ಪಾತ್ರ ನಿರ್ವಹಿಸಲಿದ್ದಾರೆ. 'ಚಿಲ್ಲಂ' ಚಿತ್ರಕಥೆ ಡ್ರಗ್ ಮಾಫಿಯಾ ಸುತ್ತ ಸುತ್ತಲಿದ್ದು, ಪಕ್ಕಾ ಮಾಸ್ ಲುಕ್ ನಲ್ಲಿ ಮನೋರಂಜನ್ ಕಾಣಿಸಿಕೊಳ್ಳಲಿದ್ದಾರೆ.

ಗಾಂಜಾ ಸ್ಮಗ್ಲರ್ ಆದ ರವಿಚಂದ್ರನ್ ಪುತ್ರ ಮನೋರಂಜನ್!

ವಿಲನ್ ಆಗಿ ರಾಘಣ್ಣ

ಇನ್ನೂ ಇಂಟ್ರೆಸ್ಟಿಂಗ್ ಅಂದ್ರೆ, ಇದೇ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ವಿಲನ್ ಆಗಿ ಅಭಿನಯಿಸಲಿದ್ದಾರೆ. ಮುಖ್ಯ ಪಾತ್ರದಲ್ಲಿ ಹಿರಿಯ ನಟಿ ಸರಿತಾ ನಟಿಸದ್ದಾರೆ. ಇಷ್ಟೆಲ್ಲ ವಿಶೇಷತೆಗಳು ಇರುವ 'ಚಿಲ್ಲಂ' ಚಿತ್ರಕ್ಕೆ ಜೆ.ಚಂದ್ರಕಲಾ ಆಕ್ಷನ್ ಕಟ್ ಹೇಳಲಿದ್ದಾರೆ.

English summary
Common Man Diwakar of Bigg Boss Kannada 5 fame to play Manoranjan's friend in Kannada Movie 'Chillum'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X