»   » 'ದರ್ಶನ್' ತಾಯಿಯ ಬಗ್ಗೆ ಬಿಗ್ ಬಾಸ್ 'ಪ್ರಥಮ್' ಹೇಳಿದ ಇಂಟ್ರೆಸ್ಟಿಂಗ್ ವಿಚಾರ

'ದರ್ಶನ್' ತಾಯಿಯ ಬಗ್ಗೆ ಬಿಗ್ ಬಾಸ್ 'ಪ್ರಥಮ್' ಹೇಳಿದ ಇಂಟ್ರೆಸ್ಟಿಂಗ್ ವಿಚಾರ

Posted By:
Subscribe to Filmibeat Kannada
ಬಿಗ್ ಬಾಸ್ ವಿನ್ನರ್ ಪ್ರಥಮ್ ದರ್ಶನ್ ತಾಯಿಯ ಬಗ್ಗೆ ಹೇಳಿದ್ದೇನು? | FIlmibeat Kannada

ಬಿಗ್ ಬಾಸ್ ಅಂದ ತಕ್ಷಣ ಥಟ್ ಅಂತ ನೆನಪಿಗೆ ಬರೋದು ಕಿಚ್ಚ ಸುದೀಪ್. ಇನ್ನೂ ಸೀಸನ್ 5 ಮುಗಿಯುತ್ತಾ ಬಂದರೂ, ಸ್ಪರ್ದಿಗಳು ಅಂದ್ರೆ ಎಲ್ಲರೂ ನೆನಪು ಮಾಡಿಕೊಳ್ಳುವುದು ಮಾತ್ರ ನಟ, ನಿರ್ದೇಶಕ 'ಪ್ರಥಮ್' ರನ್ನ.

ಎಷ್ಟೇ ಸ್ಟಾರ್ ಗಳು ಬಿಗ್ ಬಾಸ್ ಮನೆಯೊಳಗೆ ಬಂದ್ರೂ, ಹೋದ್ರೂ.... ನಾಲ್ಕು ಜನರು ವಿನ್ನರ್ ಆದ್ರೂ, 'ಪ್ರಥಮ್' ನೀಡಿರುವಷ್ಟು ನೆನಪು ಮಾತ್ರ ಯಾರು ನೀಡಿಲ್ಲ ಅನ್ನೋದು ಸಾಕಷ್ಟು ಜನರ ಬಾಯಲ್ಲಿದೆ. ಈಗ ಪ್ರಥಮ್ ಮಾತು ಯಾಕೆ ಅಂದ್ರೆ, ಪ್ರಥಮ್ ಚಾಲೆಂಜಿಂಗ್ ಕ್ವೀನ್ ರನ್ನ ಭೇಟಿ ಮಾಡಿದ್ದಾರೆ. ಯಾರದು ಅಂತೀರಾ ? ಮುಂದೆ ಓದಿ...

ಪ್ರಥಮ್ ಪಾಲಿನ 'ಚಾಲೆಂಜಿಂಗ್ ಕ್ವೀನ್'

ಹೌದು, ಬಿಗ್ ಬಾಸ್ ವಿನ್ನರ್ ಪ್ರಥಮ್ 'ಚಾಲೆಂಜಿಂಗ್ ಕ್ವೀನ್' ರನ್ನ ಭೇಟಿ ಮಾಡಿದ್ದಾರೆ. 'ಚಾಲೆಂಜಿಂಗ್ ಕ್ವೀನ್' ಅಂದರೆ ಮತ್ಯಾರೂ ಅಲ್ಲ. ಕರ್ನಾಟಕದ ಚಾಲೆಂಜಿಂಗ್ ಸ್ಟಾರ್ ರ ತಾಯಿ 'ಮೀನಾ ತೂಗುದೀಪ ಶ್ರೀನಿವಾಸ್'. ಪ್ರಥಮ್ ಮೀನಾ ಅವ್ರನ್ನ ಮೀಟ್ ಮಾಡಿದ್ದು ಈ ಬಗ್ಗೆ ಫೇಸ್ ಬುಕ್ ನಲ್ಲಿ ಕೆಲ ವಿಚಾರಗಳನ್ನ ಹಂಚಿಕೊಂಡಿದ್ದಾರೆ.

'ತೂಗುದೀಪ' ಫ್ಯಾಮಿಲಿಗೂ ಪ್ರಥಮ್ ಅಚ್ಚು-ಮೆಚ್ಚು

ಖಾಸಗಿ ಕಾರ್ಯಕ್ರಮವೊಂದರಲ್ಲಿ 'ಮೀನಾ ತೂಗುದೀಪ ಶ್ರೀನಿವಾಸ್' ಹಾಗೂ ಪ್ರಥಮ್ ಭೇಟಿಯಾಗಿದ್ದಾರೆ. ಭೇಟಿಯಾದ ಪ್ರಾರಂಭದಲ್ಲೇ ಪ್ರಥಮ್ ರನ್ನ ಗುರುತಿಸಿ 'ಮೀನಾ' ಅವರು ತಮ್ಮ ಮಗನಂತೆ ಮಾತನಾಡಿಸಿದ್ದಾರೆ. ಬಿಗ್ ಬಾಸ್ ನಲ್ಲಿಯ ಪರ್ಫಾಮೆನ್ಸ್ ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

'ಮೀನಾ'ರ ಪರಿಶ್ರಮದ ಬಗ್ಗೆ ಪ್ರಥಮ್ ಮಾತು

ವೇದಿಕೆ ಮೇಲೆ ಪ್ರಥಮ್ 'ಮೀನಾ ತೂಗುದೀಪ ಶ್ರೀನಿವಾಸ್' ರ ಬಗ್ಗೆ ಜನರಿಗೆ ಗೊತ್ತಿಲ್ಲದ ಒಂದಿಷ್ಟು ವಿಚಾರಗಳನ್ನ ಬಿಚ್ಚಿಟ್ಟಿದ್ದಾರೆ. 'ತೂಗುದೀಪ್ ಶ್ರೀನಿವಾಸ್' ಅನಾರೋಗ್ಯಕ್ಕೆ ಒಳಗಾದಾಗ ಮೀನಾ ಅವರು ಪಟ್ಟ ಕಷ್ಟಗಳನ್ನ ಜನರ ಮುಂದೆ ಹೇಳಿದ್ದಾರೆ.

ದರ್ಶನ್-ದಿನಕರ್ ಗಾಗಿ ಕಷ್ಟಪಟ್ಟಿದ್ದ 'ಮೀನಾ ತೂಗದೀಪ್'

ತೂಗುದೀಪ್ ಶ್ರೀನಿವಾಸ್ ರನ್ನ ಕಳೆದುಕೊಂಡ ನಂತ್ರ ಮೀನಾ ಅವರು ಪಟ್ಟ ಕಷ್ಟದ ದಿನಗಳನ್ನ ಮೆಲಕು ಹಾಕಿದ್ದಾರೆ. ಮಕ್ಕಳನ್ನ ಇಂದು 'ಚಾಲೆಂಜಿಂಗ್ ಸ್ಟಾರ್' ಹಾಗೂ ತಾಂತ್ರಿಕ ಬ್ರಹ್ಮನಾಗಿ ಮಾಡಲು ಪಟ್ಟಿರೋ ಶ್ರಮದ ಬಗ್ಗೆ ತಿಳಿಸಿದ್ದಾರೆ.

ಸ್ಟೇಜ್ ಮೇಲೆ ಚಾಲೆಂಜಿಂಗ್ ಕ್ವೀನ್ ಎಂದ ಪ್ರಥಮ್

ಸ್ಟೇಜ್ ಮೇಲೆ ಇಷ್ಟೆಲ್ಲಾ ಮಾತನಾಡಿರೋ ಪ್ರಥಮ್, ಮೀನಾ ಅವ್ರಿಗೆ 'ಚಾಲೆಂಜಿಂಗ್ ಕ್ವೀನ್' ಅಂತ ಬಿರುದು ನೀಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ರನ್ನ ಹುಟ್ಟುಹಾಕಿರೋ ಚಾಲೆಂಜಿಂಗ್ ಕ್ವೀನ್ ಇವರು ಎಂದಿದ್ದಾರೆ.

English summary
Bigg Boss Kannada 4 Winner Pratham speaks about Meena Thoogdeepa Srinivas. ದರ್ಶನ್ ತಾಯಿಯ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳನ್ನ ಹೇಳಿದ ಬಿಗ್ ಬಾಸ್ ಪ್ರಥಮ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada