twitter
    For Quick Alerts
    ALLOW NOTIFICATIONS  
    For Daily Alerts

    ಮಂಜು ಪಾವಗಡ ಮೇಲೆ ಧರ್ಮಸ್ಥಳ ಮಂಜುನಾಥನ ಕೃಪೆಯನ್ನು ಸ್ಮರಿಸಿದ ತಂದೆ ಹನುಮಂತರಾಯಪ್ಪ

    By ಮಂಗಳೂರು ಪ್ರತಿನಿಧಿ
    |

    ಬಿಗ್ ಬಾಸ್ ವಿಜೇತ ಮಂಜು ಪಾವಗಡ ತಮ್ಮ ಆರಾಧ್ಯದೈವ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಮಾಡಿದ್ದಾರೆ. ಕುಟುಂಬ ಸಮೇತವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದ ಮಂಜು, ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಮಾಡಿ ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.

    ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ ತನ್ನ ಆರಾಧ್ಯದೈವ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ. ಪ್ರತಿ ವರ್ಷ ನಾಲ್ಕೈದು ಬಾರಿ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆಯುವ ಅಭ್ಯಾಸವನ್ನು ಹೊಂದಿರುವ ಮಂಜು ಪಾವಗಡ ಹೊಂದಿದ್ದು, ಈ ಬಾರಿ ಬಿಗ್ ಬಾಸ್ ವಿನ್ನರ್ ಆದ ಬಳಿಕ ಮೊದಲ ಬಾರಿ ಕ್ಷೇತ್ರಕ್ಕೆ ಆಗಮಿಸಿದ್ದು, ಕುಟುಂಬ ಸಮೇತರಾಗಿ ಬಂದು ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದಿದ್ದಾರೆ.

    ಬೆಳಿಗ್ಗೆಯೇ ಮಂಜುನಾಥ ಸ್ವಾಮಿಯ ದೇವರ ದರ್ಶನ ಪಡೆದ ಮಂಜು ಪಾವಗಡ, ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಮಂಜು ಕುಟುಂಬನ್ನು ಹರಸಿದ ಧರ್ಮಾಧಿಕಾರಿ ಹೆಗ್ಗಡೆ ಮಂಜು ಕುಟುಂಬಕ್ಕೆ ಶ್ರೀ ಮಂಜುನಾಥ ಸ್ವಾಮಿಯ ಫೋಟೋ ನೀಡಿ ಹರಸಿದ್ದಾರೆ.

    Bigg Boss Winner Manju Pavagada Visited Dharmastala Temple

    ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿ ಗಳ ಜೊತೆ ಮಾತನಾಡಿದ ಮಂಜು ಪಾವಗಡ,"ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಕೆ ಪ್ರತಿವರ್ಷ ಬರುತ್ತೇನೆ. ನಾನು ಈ ಮಟ್ಟಕ್ಕೆ ಬರೋಕೆ ಶ್ರೀ ಮಂಜುನಾಥ ಸ್ವಾಮಿಯೇ ಕಾರಣ. ಕುಟುಂಬ ಸಮೇತ ಮಂಜುನಾಥ ಸ್ವಾಮಿಯನ್ನು ನೋಡಿದ್ದರಿಂದ ಮನಸ್ಸಿಗೆ ಬಹಳ ಖುಷಿಯಾಯಿತು. ಆ ಬಳಿಕ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿದ್ದೇವೆ. ಯಾವತ್ತೂ ರಿಯಾಲಿಟಿ ಷೋ ಗಳನ್ನು ನೋಡದ ವೀರೇಂದ್ರ ಹೆಗ್ಗಡೆಯವರು ಒಂದು ದಿನ ಮೊಬೈಲ್‌ ನೋಡುತ್ತಿರುವ ಸಂದರ್ಭದಲ್ಲಿ, ಬಿಗ್ ಬಾಸ್ ಷೋ ನಲ್ಲಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ನಾನು ಹೇಳಿದ ಮಾತುಗಳ ದೃಶ್ಯಗಳನ್ನು ನೋಡಿದ್ದಾರೆ ಅಂತಾ ಅವರೇ ಹೇಳಿದಾಗ ತುಂಬಾ ಖುಷಿಯಾಯಿತು. ಕ್ಷೇತ್ರದ ಮೇಲಿನ ಭಕ್ತಿಯನ್ನು ಇದೇ ರೀತಿ ಮುಂದುವರಿಸುತ್ತಾ ಹೋಗಿ, ಒಳ್ಳೆಯದಾಗುತ್ತದೆ ಅಂತಾ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಆಶೀರ್ವಾದ ನೀಡಿದ್ದಾರೆ" ಎಂದು ಮಂಜು ಪಾವಗಡ ಹೇಳಿದ್ದಾರೆ.

    Bigg Boss Winner Manju Pavagada Visited Dharmastala Temple

    ಮಂಜು ಪಾವಗಡ ಮತ್ತು ಧರ್ಮಸ್ಥಳದ ನಡುವಿನ ನಂಟಿನ ಬಗ್ಗೆ ಮಂಜು ಪಾವಗಡ ತಂದೆ ಹನುಮಂತರಾಯಪ್ಪ ಮಾತನಾಡಿ, 'ಮಂಜು ಚಿಕ್ಕವನಿದ್ದ ಸಂದರ್ಭದಲ್ಲಿ ಅವನಿಗೆ ಒಂದು ದಿನ ತುಂಬಾ ಹುಷಾರಿಲ್ಲದಂತಾಗಿತ್ತು. ನಾನು ಆ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಕೆ‌ ಬಂದಿದ್ದೆ. ನನ್ನ ಪತ್ನಿ ಕೂಡಾ ತುಂಬಾ ಭಯಗೊಂಡಿದ್ದಳು. ಮಂಜುನಾಥ ಸ್ವಾಮಿಯನ್ನು ಪ್ರಾರ್ಥಿಸಿ, ಧರ್ಮಸ್ಥಳ ದಿಂದ ತೀರ್ಥ ಮತ್ತು ಪ್ರಸಾದ ವನ್ನು ತೆಗೆದುಕೊಂಡು ಹೋಗಿದ್ದೆ. ಮನೆಗೆ ಹೋದ ಕೂಡಲೇ ರಾತ್ರಿ ಮಂಜುಗೆ ಮಂಜುನಾಥ ಸ್ವಾಮಿಯ ತೀರ್ಥವನ್ನು ಕುಡಿಸಿದೆ. ಈ ತೀರ್ಥದಲ್ಲಿ ಮಗುವನ್ನು ಬದುಕಿಸು ಅಂತಾ ಮಂಜುನಾಥನಲ್ಲಿ ಬೇಡಿಕೊಂಡೆ. ಆಶ್ಚರ್ಯವೆಂಬಂತೆ ಮಧ್ಯರಾತ್ರಿಯೇ ಮಂಜು ಆರೋಗ್ಯದಲ್ಲಿ ಸುಧಾರಣೆ ಕಂಡಿತ್ತು. ಬೆಳಗ್ಗೆ ಮಂಜುನಾಥ ಸ್ವಾಮಿಯ ಪ್ರಸಾದ ತಿನ್ನಿಸಿ, ಕಿವಿಯಲ್ಲಿ ಮಂಜು ಅಂತಾ ಮೂರು ಬಾರಿ ಕರೆದೆ. ದೇವರ ದಯೆಯಿಂದ ಮಂಜು ಹುಷಾರಾದ. ಆ ಬಳಿಕ ವರ್ಷಪ್ರಂತಿ ಮಂಜು ಧರ್ಮಸ್ಥಳಕ್ಕೆ ಬರುತ್ತಿದ್ದಾನೆ. ದೇವರ ಮೇಲಿನ ಅದೇ ಭಕ್ತಿಯನ್ನು ಉಳಿಸಿಕೊಂಡಿದ್ದಾನೆ. ಅವನ ಶ್ರಮ ಮತ್ತು ಶ್ರದ್ಧೆಯಿಂದ ಜೀವನದಲ್ಲಿ ಯಶಸ್ಸು ಕಾಣಿದ್ದಾನೆ ಅಂತಾ ಮಂಜು ಪಾವಗಡ ತಂದೆ ಹನುಮಂತರಾಯಪ್ಪ ಹೇಳಿದ್ದಾರೆ.

    ಮಂಜು ಪಾವಗಡ ತನ್ನ ತಂದೆ ಹನುಮಂತರಾಯಪ್ಪ, ತಾಯಿ ಲಕ್ಷ್ಮಮ್ಮ, ತಮ್ಮ ರಾಘವ, ತಂಗಿ ಮಾನಸ ಜೊತೆ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಕೆ ಬಂದು, ಮಂಜುನಾಥ ನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    English summary
    Bigg Boss Kannada winner Manju Pavagada visited Dharmastala Manjunatha Swamy temple. He said he has been visiting this temple since his childhood days.
    Tuesday, August 24, 2021, 18:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X