»   » 'ಬಿಗ್ ಬಾಸ್' ಪ್ರಥಮ್ ಬಗ್ಗೆ ಬಂತು ಬಿಗ್ ಬ್ರೇಕಿಂಗ್ ನ್ಯೂಸ್.!

'ಬಿಗ್ ಬಾಸ್' ಪ್ರಥಮ್ ಬಗ್ಗೆ ಬಂತು ಬಿಗ್ ಬ್ರೇಕಿಂಗ್ ನ್ಯೂಸ್.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ 4' ವಿನ್ನರ್, ನಿರ್ದೇಶಕ ಪ್ರಥಮ್ ಈಗ ಹೀರೋ ಆಗಿ ಪ್ರಮೋಟ್ ಆಗಿದ್ದಾರೆ. ಅಕುಲ್ ಬಾಲಾಜಿ ಅಭಿನಯದ 'ದೇವ್ರವ್ನೆ ಬುಡು ಗುರು' ಚಿತ್ರವನ್ನ ನಿರ್ದೇಶನ ಮಾಡುತ್ತಿರುವ ಪ್ರಥಮ್, ಇದರ ನಡುವೆ ನಾಯಕನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.['ಬಿಗ್ ಬಾಸ್' ಗೆದ್ದ ಮೇಲೆ ಪ್ರಥಮ್ ಗೆ ಸಿಗುತ್ತಿರುವ ಗೌರವ ಇದು.!]

ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಚಿತ್ರಗಳಲ್ಲಿ ಪ್ರಥಮ್ ಅಭಿನಯಿಸುತ್ತಿದ್ದು, ಅವುಗಳಲ್ಲಿ ಮೂರು ಚಿತ್ರಗಳಿಗೆ ಒಳ್ಳೆ ಹುಡುಗ ಹೀರೋ ಆಗಿದ್ದಾರಂತೆ. ಸ್ಯಾಂಡಲ್ ವುಡ್ ಅಂಗಳದಿಂದ ಇದೀಗ ಬಂದಿರುವ ಬ್ರೇಕಿಂಗ್ ನ್ಯೂಸ್ ಇದು. ಮುಂದೆ ಓದಿ.....

4 ಚಿತ್ರಗಳಲ್ಲಿ ಪ್ರಥಮ್ ನಟನೆ'

ನಾಗತಿಹಳ್ಳಿ ಚಂದ್ರಶೇಖರ್, ಎಸ್.ನಾರಾಯಣ್, ಸುರೇಶ್ ಕುಮಾರ್ ಅಂತಹ ನಿರ್ದೇಶಕರ ಚಿತ್ರಗಳು ಸೇರಿದಂತೆ ತಮ್ಮ ಆಪ್ತರೊಬ್ಬರ ಚಿತ್ರದಲ್ಲೂ ಪ್ರಥಮ್ ನಟಿಸಲಿದ್ದಾರಂತೆ. ಈ ಮೂಲಕ ಒಟ್ಟು 4 ಚಿತ್ರಗಳಿಗೆ ಒಳ್ಳೆ ಹುಡುಗ ಸಹಿ ಹಾಕಿದ್ದಾರಂತೆ.

3 ಚಿತ್ರಕ್ಕೆ ನಾಯಕ ಈ ಪ್ರಥಮ್

ಈ ನಾಲ್ಕು ಚಿತ್ರಗಳಲ್ಲಿ ಪ್ರಥಮ್ ಮೂರು ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದರೇ, ಒಂದು ಚಿತ್ರದಲ್ಲಿ ವಿಶೇಷ ಪಾತ್ರವನ್ನ ನಿರ್ವಹಿಸುತ್ತಿದ್ದಾರಂತೆ.['ಬಿಗ್ ಬಾಸ್ ಕನ್ನಡ-4' ಗೆದ್ದ ಪ್ರಥಮ್: ಆರ್ಡರ್ ಈಸ್ ಪಾಸ್ಡ್.!]

'ಬಿಗ್ ಬಾಸ್' ಸ್ವರ್ಧಿಯೊಬ್ಬರು ಪ್ರಥಮ್ ಗೆ ನಾಯಕಿ!

'ಬಿಗ್ ಬಾಸ್' ಮನೆಯಲ್ಲಿ ಪ್ರಥಮ್ ಅವರು ಲವ್ ಮಾಡುತ್ತಿದ್ದವರನ್ನ ನಾಯಕಿಯನ್ನಾಗಿಸಲು ಇಬ್ಬರು ನಿರ್ಮಾಪಕರು ನಿರ್ಧರಿಸಿದ್ದಾರಂತೆ. ಆದ್ರೆ, ಪ್ರಥಮ್ ಈ ಅವರನ್ನ ರಿಜೆಕ್ಟ್ ಮಾಡಿದ್ದಾರಂತೆ. ತದ ನಂತರ ಬೇರೆ ನಾಯಕಿಯ ಹುಡುಕಾಟದಲ್ಲಿರುವ ನಿರ್ಮಾಪಕರು, ಪ್ರಥಮ್ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರಂತೆ.['ಭುವನ್-ಸಂಜನಾ ಮದುವೆ' ಖಂಡಿಸಿದ ಲವ್ವರ್ ಬಾಯ್ ಪ್ರಥಮ್.!]

'ಮಾರ್ಚ್'ನಲ್ಲಿ ಮೊದಲ ಸಿನಿಮಾ ಶುರು

ಈ ಪೈಕಿ ಪ್ರಥಮ್ ಅಭಿನಯಿಸಲಿರುವ ಮೊದಲ ಚಿತ್ರ ಇದೇ ಮಾರ್ಚ್ ತಿಂಗಳಿನಿಂದ ಶುರುವಾಗಲಿದೆ. ಸದ್ಯ, ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ತೊಡಗಿಸಿಕೊಂಡಿದೆಯಂತೆ.

ಸಂಭಾವನೆ ಹಣದಿಂದ ಸಮಾಜಸೇವೆ

ಪ್ರಥಮ್ ಅಭಿನಯಿಸಲಿರುವ ಚಿತ್ರಗಳಿಂದ ಬಂದ ಸಂಭಾವನೆಯ ಅರ್ಧದಷ್ಟು ಹಣವನ್ನ ಒಂದು ಟ್ರಸ್ಟ್ ರೂಪಿಸಿ, ಅದರಿಂದ ಸಮಾಜ ಸೇವೆ ಮಾಡಲು ಪ್ರಥಮ್ ನಿರ್ಧರಿಸಿದ್ದಾರಂತೆ.['ಬಿಗ್ ಬಾಸ್'ನಲ್ಲಿ 'ಪ್ರಥಮ್' ಗೆದ್ದ 50 ಲಕ್ಷ ರೈತರಿಗೆ, ಯೋಧರಿಗೆ ಮೀಸಲು!]

ಮೊದಲು 'ದೇವ್ರವ್ನೆ ಬುಡು ಗುರು'

ಅಕುಲ್ ಬಾಲಾಜಿ ಅಭಿನಯದ 'ದೇವ್ರವ್ನೆ ಬುಡು ಗುರು' ಚಿತ್ರವನ್ನ ಮೊದಲು ಕಂಪ್ಲೀಟ್ ಮಾಡಿ, ತೆರೆಗೆ ತರುವ ಯೋಚನೆಯಲ್ಲಿದ್ದಾರೆ ಪ್ರಥಮ್. ಅದಾದ ನಂತರ ಬೆಳ್ಳಿತೆರೆಯಲ್ಲಿ 'ಒಳ್ಳೆ ಹುಡುಗ'ನನನ್ನ ನೋಡಬಹುದು.[ಹುತಾತ್ಮ ಯೋಧ ಸಂದೀಪ್ ಕುಟುಂಬಕ್ಕೆ ನೆರವಾದ 'ಬಿಗ್ ಬಾಸ್' ಪ್ರಥಮ್]

English summary
Bigg Boss Kannada 4 Winner Pratham Signed 4 New Movies in Kannada. This March will be Started his first film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada