twitter
    For Quick Alerts
    ALLOW NOTIFICATIONS  
    For Daily Alerts

    ಶಿವಣ್ಣ ಬರ್ತಡೇ ಸ್ಪೆಷಲ್: ವೃತ್ತಿ ಜೀವನದ ಹಿಟ್ ಚಿತ್ರಗಳು

    |

    ಸ್ಯಾಂಡಲ್ ವುಡ್ಡಿನ ಚಿರ ಯುವಕ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ 51ನೇ ಹುಟ್ಟುಹಬ್ಬದ ಸಂಭ್ರಮ. ಬೆಳ್ಳಂಬೆಳಗ್ಗೆನೇ ಶಿವಣ್ಣ ಅಭಿಮಾನಿಗಳು ಅವರ ನಾಗಾವರ ನಿವಾಸದಲ್ಲಿ ಜಮಾಯಿಸಿದ್ದಾರೆ.

    ಈ ಬಾರಿ ಉತ್ತರಾಖಂಡ ಪ್ರವಾಹದಿಂದಾಗಿ ಹುಟ್ಟುಹಬ್ಬವನ್ನು ಶಿವಣ್ಣ ಸರಳವಾಗಿ ಆಚರಿಸಿಕೊಂಡಿದ್ದಾರೆ. ಹಾರ, ತುರಾಯಿ, ಕೇಕ್ ಮುಂತಾದವನ್ನು ತರದೇ ಪ್ರವಾಹ ಸಂತ್ರಸ್ತರಿಗೆ ದೇಣಿಗೆ ತನ್ನಿ ಎಂದು ಅಭಿಮಾನಿಗಳ ಸಂಘ ಈಗಾಗಲೇ ಕರೆ ನೀಡಿದೆ.

    ತನ್ನ 25 ವರ್ಷದ ವೃತ್ತಿ ಜೀವನದಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಶಿವರಾಜ್ ಕುಮಾರ್, 1986ರಲ್ಲಿ ಸಿಂಗೀತಂ ಶ್ರೀನಿವಾಸ್ ರಾವ್ ನಿರ್ದೇಶನದ ಆನಂದ್ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಕಾಲಿಟ್ಟರು.

    ಸಿನಿಮಾ ಜೀವನದಲ್ಲಿ ಸೋಲು, ಗೆಲುವನ್ನು ಸಮನಾಗಿ ಹಂಚಿಕೊಂಡು ಬಂದಿರುವ ಶಿವಣ್ಣ ನಟಿಸಿದ ಮೊದಲ ಮೂರೂ ಚಿತ್ರಗಳು ಸೂಪರ್ ಹಿಟ್ ಆಗಿ ಅವರಿಗೆ 'ಹ್ಯಾಟ್ರಿಕ್ ಹೀರೋ' ಎನ್ನುವ ಬಿರುದು ಬಂತು.

    ಚಿತ್ರರಂಗ ಕಂಡ ಒಬ್ಬ good human being ಶಿವಣ್ಣಗೆ ಹುಟ್ಟುಹಬ್ಬದ ಶುಭಾಷಯ ತಿಳಿಸುತ್ತಾ, ಅವರ ಸೂಪರ್ ಹಿಟ್ ಚಿತ್ರಗಳ ಪಟ್ಟಿ

    (ಶಿವರಾಜ್ ಕುಮಾರ್ ಗ್ಯಾಲರಿ)

    ಆನಂದ್

    ಆನಂದ್

    1986ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಸಿಂಗೀತಂ ಶ್ರೀನಿವಾಸ್ ರಾವ್ ನಿರ್ದೇಶಿಸಿದ್ದರು. ನಾಯಕಿಯಾಗಿ ಸುಧಾರಾಣಿ ಮತ್ತು ಚಿತ್ರಕ್ಕೆ ಶಂಕರ್ ಗಣೇಶ್ ಸಂಗೀತ ನೀಡಿದ್ದರು.

    ರಥಸಪ್ತಮಿ

    ರಥಸಪ್ತಮಿ

    1986ರಲ್ಲಿ ಬಿಡುಗಡೆಯಾದ ಮತ್ತೊಂದು ಹಿಟ್ ಚಿತ್ರ. ಎಂ ಎಸ್ ರಾಜಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ಶಿವಣ್ಣಗೆ ನಾಯಕಿಯಾಗಿ ಆಶಾರಾಣಿ ನಟಿಸಿದ್ದರು. ಚಿತ್ರಕ್ಕೆ ಶಂಕರ್ ಗಣೇಶ್ ಅವರ ಸಂಗೀತವಿತ್ತು.

    ಮನಮೆಚ್ಚಿದ ಹುಡುಗಿ

    ಮನಮೆಚ್ಚಿದ ಹುಡುಗಿ

    1987ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಎಂ ಎಸ್ ರಾಜಶೇಖರ್ ನಿರ್ದೇಶಿಸಿದ್ದರು. ಉಪೇಂದ್ರ ಕುಮಾರ್ ಸಂಗೀತವಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಸುಧಾರಾಣಿ ನಟಿಸಿದ್ದರು.

    ಓಂ

    ಓಂ

    1995ರಲ್ಲಿ ಬಿಡುಗಡೆಯಾದ ಕನ್ನಡದ ಸಾರ್ವಕಾಲಿಕ ಹಿಟ್ ಚಿತ್ರಗಳಲ್ಲೊಂದು. ಉಪೇಂದ್ರ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ಪ್ರೇಮಾ ನಟಿಸಿದ್ದರು. ಚಿತ್ರಕ್ಕೆ ಹಂಸಲೇಖಾ ಅವರ ಸಂಗೀತವಿತ್ತು.

    ನಮ್ಮೂರ ಮಂದಾರ ಹೂವೇ

    ನಮ್ಮೂರ ಮಂದಾರ ಹೂವೇ

    1996ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಶಿವಣ್ಣ ಮತ್ತು ರಮೇಶ್ ಜೊತೆಯಾಗಿ ನಟಿಸಿದ್ದಾರೆ. ಪ್ರೇಮಾ ನಾಯಕಿಯಾಗಿರುವ ಈ ಚಿತ್ರವನ್ನುಸುನಿಲ್ ಕುಮಾರ್ ದೇಸಾಯಿ ನಿರ್ದೇಶಿಸಿದ್ದರು ಮತ್ತು ಚಿತ್ರಕ್ಕೆ ಇಳಯರಾಜ ಅವರ ಸಂಗೀತವಿದೆ.

    ಜನುಮದ ಜೋಡಿ

    ಜನುಮದ ಜೋಡಿ

    1996ರಲ್ಲಿ ಬಿಡುಗಡೆಯಾದ ಮತ್ತೊಂದು ಆಲ್ ಟೈಮ್ ಸೂಪರ್ ಹಿಟ್ ಚಿತ್ರ. ಟಿ ಎಸ್ ನಾಗಾಭರಣ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ಶಿಲ್ಪಾ ಮತ್ತು ಸಂಗೀತ ವಿ ಮನೋಹರ್ ಅವರದ್ದು.

    ಸಿಂಹದಮರಿ

    ಸಿಂಹದಮರಿ

    1997ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದರು. ಸಿಮ್ರನ್ ನಾಯಕಿಯಾಗಿ ನಟಿಸಿದ್ದ ಈ ಚಿತ್ರವನ್ನು ರಾಮು ಬ್ಯಾನರಿನಲ್ಲಿ ಮೂಡಿಬಂತು.

    ಎಕೆ 47

    ಎಕೆ 47

    1997ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದರು. ಚಾಂದನಿ ನಾಯಕಿಯಾಗಿ ನಟಿಸಿದ್ದ ಈ ಚಿತ್ರಕ್ಕೆ ಹಂಸಲೇಖಾ ಅವರ ಸಂಗೀತವಿತ್ತು.

    ಜೋಗಿ

    ಜೋಗಿ

    2005ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಪ್ರೇಮ್ ನಿರ್ದೇಶಿಸಿದ್ದರು. ಜೆನ್ನಿಫರ್ ಕೊತ್ವಾಲ್, ಆರುಂಧತಿ ನಾಗ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ.

    ಅಣ್ಣತಂಗಿ

    ಅಣ್ಣತಂಗಿ

    2005ರಲ್ಲಿ ಬಿಡುಗಡೆಯಾದ ಮತ್ತೊಂದು ಹಿಟ್ ಚಿತ್ರ. ಸಾಯಿ ಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ರಾಧಿಕಾ ಶಿವಣ್ಣನ ತಂಗಿಯಾಗಿ ನಟಿಸಿದ್ದರು. ಚಿತ್ರಕ್ಕೆ ಹಂಸಲೇಖಾ ಸಂಗೀತ ನೀಡಿದ್ದರು.

    ಮೈಲಾರಿ

    ಮೈಲಾರಿ

    2010ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಆರ್ ಚಂದ್ರು ನಿರ್ದೇಶಿಸಿದ್ದರು. ಗುರುಕಿರಣ್ ಸಂಗೀತವಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಸದಾ, ಸಂಜನಾ ನಟಿಸಿದ್ದಾರೆ.

    English summary
    Shivaraj Kumar, who seems to be getting younger every year, is turning a year older today (July 12). On this special day, we would like to remember his best movies of all time.
    Friday, July 12, 2013, 13:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X