For Quick Alerts
  ALLOW NOTIFICATIONS  
  For Daily Alerts

  ದರ್ಶನ್-ಯಶ್ ಗೆ CRPF ಭದ್ರತೆ ನೀಡಲು ಕೇಂದ್ರಕ್ಕೆ ಮನವಿ

  |
  Lok Sabha Elections 2019 : ಯಶ್, ದಾಸನಿಗೆ ಸಿಗ್ತು ನೂರಾನೆ ಬಲ | Oneindia Kannada

  ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನ ಗಮನಿಸಿದ ಬಿಜೆಪಿ ಪಕ್ಷ, ಸ್ಟಾರ್ ನಟರ ಬೆಂಬಲ ನಿಂತಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಮತ್ತು ಬೆಂಬಲಿಗ ದರ್ಶನ್, ಯಶ್ ಅವರಿಗೆ ಸಿಆರ್ ಪಿಎಫ್ ಭದ್ರತೆ ನೀಡುವಂತೆ ಕೇಂದ್ರ ಗೃಹ ಸಚಿವರಿಗೆ ಕರ್ನಾಟಕ ಬಿಜೆಪಿ ಮನವಿ ಮಾಡಿದೆ.

  ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗೆ ಭದ್ರತೆ ನೀಡುವುದರ ಬಗ್ಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಕೆಲವು ಪ್ರಮುಖ ಘಟನೆಗಳ ಬಗ್ಗೆ ಉಲ್ಲೇಖಿಸಲಾಗಿದೆ.

  ನಿರ್ಮಾಪಕ ಮುನಿರತ್ನ ಹೇಳಿಕೆ ವಿರುದ್ಧ ತಿರುಗಿಬಿದ್ದ ದರ್ಶನ್-ಅಂಬಿ ಫ್ಯಾನ್ಸ್

  ನಟ ದರ್ಶನ್ ಅವರ ನಿವಾಸದ ಮೇಲೆ ಕಲ್ಲು ತೂರಾಟ ಆಗಿತ್ತು. ಇದನ್ನ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ಮಾಡಿದ್ದಾರೆ ಎಂಬುದನ್ನ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ.

  ಸುಮಲತಾ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮಂಡ್ಯ ಸುತ್ತಮುತ್ತಾ ಕೇಬಲ್ ಬಂದ್ ಮಾಡಿಸಿದ್ದರು ಎಂಬುದನ್ನ ತಿಳಿಸಲಾಗಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗವಾಗಿ, ಸುಮಲತಾ, ದರ್ಶನ್, ಯಶ್ ವಿರುದ್ಧ ಅಪಪ್ರಚಾರ ಮಾಡ್ತಿದ್ದಾರೆ ಎಂದು ತಿಳಿಸಿದ್ದಾರೆ.

  ಅಂಬಿ ಸಮಾಧಿ ಬಗ್ಗೆ ಮಾತನಾಡಿದ ಮುನಿರತ್ನಗೆ ಸುಮಲತಾ ತಿರುಗೇಟು

  ಸುಮಲತಾ ಅವರ ಮನೆ ಮತ್ತು ಅವರು ಓಡಾಡುವ ಪ್ರದೇಶಗಳಲ್ಲಿ ಕೆಲವು ಅನುಮಾನ ಬರುವಂತಹ ಭದ್ರತಾ ಸಿಬ್ಬಂದಿಗಳು ಫಾಲೋ ಮಾಡ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ.

  ಮಂಡ್ಯದಲ್ಲಿ ಸುಮಲತಾ ಅಂಬರೀಶ್ ವಿರುದ್ಧ ಸ್ವತಃ ಮುಖ್ಯಮಂತ್ರಿಗಳ ಪುತ್ರನೇ ಸ್ಪರ್ಧೆ ಮಾಡುತ್ತಿದ್ದಾರೆ. ಆದ್ದರಿಂದ ಹೀಗೆ ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ. ಅಂದ್ಹಾಗೆ, ಸುಮಲತಾ ಅವರಿಗೆ ಬಿಜೆಪಿ ಪಕ್ಷ ಅಭ್ಯರ್ಥಿಯನ್ನ ಹಾಕದೇ ಬೆಂಬಲ ನೀಡಿದೆ.

  English summary
  Karnataka BJP general secretary Arvind Limbavali write a letter to the Home minister Rajnath Singh for CRPF protection for Sumalatha Ambarish who independent candidate in Mandya lok sabha seat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X