For Quick Alerts
  ALLOW NOTIFICATIONS  
  For Daily Alerts

  ಅವಳಿ ಮಕ್ಕಳನ್ನು ಪಡೆದ ಬಾಲಿವುಡ್ ನಟಿ ಪ್ರೀತಿ ಜಿಂಟಾ

  |

  ಬಾಲಿವುಡ್ ನಟಿ ಪ್ರೀತಿ ಜಿಂಟಾ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಸದ್ಯ ಅಮೆರಿಕದಲ್ಲಿ ನೆಲೆಸಿರುವ ಪ್ರೀತಿ ಜಿಂಟಾ ಮತ್ತು ಅವರ ಪತಿ ಜೀನ್ ಗುಡ್‌ಇನಫ್ ಅಭಿಮಾನಿಗಳಿಗೆ ದಂಪತಿ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಇಷ್ಟು ದಿನಗಳ ಸಿನಿಮಾಗಳಲ್ಲಿ ರಂಜಿಸಿದ್ದ ಪ್ರೀತಿ ಈಗ ಬದುಕಿನ ಮತ್ತೊಂದು ಘಟಕ್ಕೆ ಕಾಲಿಟ್ಟಿದ್ದಾರೆ.

  ನಟನೆ ಜೊತೆ ಉದ್ಯಮಗಳಲ್ಲೂ ತೊಡಗಿಸಿಕೊಂಡಿರುವ ಪ್ರೀತಿ ಜಿಂಟಾ ಐಪಿಎಲ್‌ನ ಪಂಜಾಬ್ ಕಿಂಗ್ಸ್ ತಂಡದ ಸಹ ಮಾಲೀಕಳಾಗಿಯೂ ಯಶಸ್ವಿಯಾಗಿದ್ದಾರೆ. ಸದ್ಯ ಖುಷಿ ವಿಷಯವೇನಲ್ಲಾ ನಟಿ, ಉದ್ಯಮಿ ಪ್ರೀತಿ ಜಿಂಟಾ, ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದಾರೆ. ಈ ವಿಷಯವನ್ನು ಬಾಲಿವುಡ್ ನಟಿ ತನ್ನ ಇನ್‌ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ.

  ಇಬ್ಬರು ಅವಳಿಗಳ ತಾಯಿ ಪ್ರೀತಿ ಜಿಂಟಾ

  ಇಬ್ಬರು ಅವಳಿಗಳ ತಾಯಿ ಪ್ರೀತಿ ಜಿಂಟಾ

  ಕೆಲವು ವರ್ಷಗಳಿಂದ ಪತಿ ಜೀನ್ ಗುಡ್‌ಇನಫ್‌ರೊಂದಿಗೆ ಪ್ರೀತಿ ಅಮೆರಿಕದಲ್ಲಿ ನೆಲೆಸಿದ್ದಾರೆ. ಐಪಿಎಲ್ ಹಾಗೂ ಸಿನಿಮಾ ಸಂಬಂಧಿತ ಕೆಲಸಗಳು ಇದ್ದಾಗ ಮಾತ್ರ, ಭಾರತದಲ್ಲಿ ಕಾಣಿಸಿಕೊಳ್ಳುವ ನಟಿ ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಿದ್ದಾರೆ. ಅದರಂತೆ, ಈಗ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದಾರೆ. ಈ ಸಂಭ್ರಮವನ್ನು ಪ್ರೀತಿ ಪತಿ ಜೀನ್ ಗುಡ್‌ಇನಫ್ ಜೊತೆ ನಿಂತಿರುವ ಒಂದು ಸೆಲ್ಫಿಯನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.

  ಅವಳಿ ಮಕ್ಕಳಿ ಹೆಸರಿಟ್ಟ ಪ್ರೀತಿ ಜಿಂಟಾ

  ಅವಳಿ ಮಕ್ಕಳಿ ಹೆಸರಿಟ್ಟ ಪ್ರೀತಿ ಜಿಂಟಾ

  ಈಗಾಗಲೇ ಪ್ರೀತಿ ಜಿಂಟಾ ಅವಳಿ ಮಕ್ಕಳಿಗೆ ಹೆಸರನ್ನೂ ಇಟ್ಟಾಗಿದೆ. ಜೈ ಜಿಂಟಾ ಗುಡ್‌ಇನಫ್ ಮತ್ತು ಜಿಯಾ ಜಿಂಟಾ ಗುಡ್‌ಇನಫ್ ಎಂಬ ಎಂದು ನಾಮಕರಣ ಮಾಡಿದ್ದಾರೆ. " ನಾನು.. ನಮಗೆ ಸಂಬಂಧಿಸಿದ ಅದ್ಭುತವಾದ ಸುದ್ದಿಯೊಂದನ್ನು ನಿಮ್ಮೊಂದು ಇಂದು ಹಂಚಿಕೊಳ್ಳಲು ಬಯಸಿದ್ದೇನೆ. ಜೀನ್ ಮತ್ತು ನಾನು ತುಂಬಾ ಸಂತೋಷವಾಗಿದ್ದು, ಮತ್ತು ನಮ್ಮ ಹೃದಯಗಳು ಕೃತಜ್ಞತೆ ಹಾಗೂ ಪ್ರೀತಿಯಿಂದ ತುಂಬಿ ಹೋಗಿದೆ. ನಾವು ನಮ್ಮ ಕುಟುಂಬಕ್ಕೆ ಜೈ ಜಿಂಟಾ ಗುಡ್‌ಇನಫ್ ಹಾಗೂ ಜಿಯಾ ಜಿಂಟಾ ಗುಡ್‌ಇನಫ್‌ರನ್ನು ಖುಷಿಯಿಂದ ಸ್ವಾಗತಿಸುತ್ತಿದ್ದೇವೆ." ಎಂದು ಇನ್‌ಸ್ಟಾಗ್ರಾಂನಲ್ಲಿ ಪ್ರೀತಿ ಜಿಂಟಾ ಬರೆದುಕೊಂಡಿದ್ದಾರೆ.

  2016ರಲ್ಲಿ ಪ್ರೀತಿ ಜಿಂಟಾ ಮದುವೆ

  2016ರಲ್ಲಿ ಪ್ರೀತಿ ಜಿಂಟಾ ಮದುವೆ

  ಪ್ರೀತಿ ಜಿಂಟಾ 2016ರ ಫೆಬ್ರುವರಿ 29ರಂದು ಜೀನ್ ಗುಡ್‌ಇನಫ್ ಅವರನ್ನು ಮದುವೆಯಾಗಿದ್ದು, ಬಳಿಕ ಪತಿಯೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದಾರೆ. 46 ವರ್ಷದ ನಟಿ ಪ್ರೀತಿ ಜಿಂಟಾ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದಿರುವ ಸಂಭ್ರಮದಲ್ಲಿದ್ದಾರೆ. ಮದುವೆ ಬಳಿಕ ಪ್ರೀತಿ ಜಿಂಟಾ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಆದರೂ, ಸೋಶಿಯಲ್ ಮೀಡಿಯಾಗಳಲ್ಲಿ ಪ್ರೀತಿ ಜಿಂಟಾ ಬಹಳ ಆಕ್ಟೀವ್ ಆಗಿದ್ದಾರೆ.

  ಪ್ರೀತಿಗೆ 23 ವರ್ಷದ ಸಿನಿಜರ್ನಿ

  ಪ್ರೀತಿಗೆ 23 ವರ್ಷದ ಸಿನಿಜರ್ನಿ

  1998ರಲ್ಲಿ ಮಣಿರತ್ನಂ ನಿರ್ದೇಶಿಸಿದ್ದ ದಿಲ್ ಸೇ ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದ ಪ್ರೀತಿ, ಬಳಿಕ ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಲ್‌ ಹೋ ನಾ ಹೋ, ವೀರ್ ಜಾರಾ, ಕಭೀ ಅಲ್‌ವಿದಾ ನಾ ಕೆಹೆನಾ, ದಿಲ್ ಚಹತಾ ಹೇ ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೇ ವರ್ಷ ಆಗಸ್ಟ್ ತಿಂಗಳಲ್ಲಿ ಪ್ರೀತಿ ಜಿಂಟಾ 23 ವರ್ಷಗಳ ಸಿನಿಜರ್ನಿಯನ್ನು ಸಂಭ್ರಮಿಸಿದ್ದರು. ಈ ವಿಷಯವನ್ನು ಹಂಚಿಕೊಂಡು ಸಂಭ್ರಮಿಸಿದ್ದರು.

  English summary
  Bollywood actress Preity Zinta announced the arrival of her twin children with Gene Goodenough. The actress opted for surrogacy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X