»   » ಶಿವಣ್ಣನ ಜೊತೆ ಅಭಿನಯಿಸಲು ಬಂದ್ರು ಬಾಲಿವುಡ್ ಸ್ಟಾರ್

ಶಿವಣ್ಣನ ಜೊತೆ ಅಭಿನಯಿಸಲು ಬಂದ್ರು ಬಾಲಿವುಡ್ ಸ್ಟಾರ್

Posted By:
Subscribe to Filmibeat Kannada

ಟಗರು ಸಿನಿಮಾ ಈ ವರ್ಷದ ಹಿಟ್ ಲೀಸ್ಟ್ ಸೇರಿದಾಯ್ತು. ಇದಾದ ನಂತರ 'ದಿ ವಿಲನ್' ಹಾಗೂ 'ಕವಚ' ಸಿನಿಮಾಗಳ ಚಿತ್ರೀಕರಣದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭಾಗಿ ಆಗಿದ್ದಾರೆ. ಚಿತ್ರರಂಗದ ಬೇರೆ ಸ್ಟಾರ್ ಗಳಿಗೆ ಹೋಲಿಕೆ ಮಾಡಿಕೊಂಡರೆ ಶಿವಣ್ಣ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸುತ್ತಾರೆ. ಈಗಾಗಲೇ ಶಿವಣ್ಣನ ಮತ್ತೊಂದು ಸಿನಿಮಾ ಅನೌನ್ಸ್ ಆಗಿದ್ದು ಅಣ್ಣಾವ್ರ ಹುಟ್ಟುಹಬ್ಬಕ್ಕೆ ಸಿನಿಮಾ ಸೆಟ್ಟೇರುತ್ತಿದೆ.

ಸಾಹಸ ನಿರ್ದೇಶಕ ರವಿವರ್ಮ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದು ರುಸ್ತುಂ ಎಂದು ಚಿತ್ರಕ್ಕೆ ಟೈಟಲ್ ಕೂಡ ಫಿಕ್ಸ್ ಆಗಿದೆ. ಜಯಣ್ಣ ಸಿನಿಮಾವನ್ನ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಸದ್ಯ ಹೊಸ ಸುದ್ದಿ ಎಂದರೆ ಸಿನಿಮಾದಲ್ಲಿ ಶಿವಣ್ಣನ ಜೊತೆ ಅಭಿನಯಿಸಲು ಬಾಲಿವುಡ್ ಸ್ಟಾರ್ ಆಗಮಿಸುತ್ತಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ರವಿವರ್ಮ ಬಾಲಿವುಡ್, ಟಾಲಿವುಡ್ ಮತ್ತು ಕಾಲಿವುಡ್ ಮೂರು ಸಿನಿಮಾರಂಗದಲ್ಲಿ ಕೆಲಸ ಮಾಡಿದ್ದಾರೆ.

Bollywood artists are act in Shivaraj Kumar's Rustum Kannada movie

ಟಗರು ಸಿನಿಮಾ ವಿಮರ್ಶೆ ಮಾಡಿದ ರಾಕಿಂಗ್ ಸ್ಟಾರ್

ಇದೇ ಕಾರಣದಿಂದ ತಾವು ನಿರ್ದೇಶನ ಮಾಡುತ್ತಿರುವ ಚೊಚ್ಚಲ ಸಿನಿಮಾಗೆ ಬಾಲಿವುಡ್ ನಲ್ಲಿ ಪ್ರಖ್ಯಾತಿ ಪಡೆದುಕೊಂಡಿರುವ ಸ್ಟಾರ್ ನಟರನ್ನ ಕರೆತರಲು ಮುಂದಾಗಿದ್ದಾರೆ. ಈಗಾಗಲೇ ರವಿಮರ್ಮ ಇದೇ ವಿಚಾರವಾಗಿ ಮನೋಜ್ ಬಾಜ್ ಪೇಯಿ, ಸುನೀಶ್ ಶೆಟ್ಟಿ, ಸಂಜಯ್ ದತ್ ಹಾಗೂ ಅನಿಲ್ ಕಪೂರ್ ಅವರನ್ನ ಸಂಪರ್ಕ ಮಾಡಿದ್ದಾರಂತೆ.

ಅನಿಲ್ ಕಪೂರ್ ಈ ಹಿಂದೆಯೇ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇನ್ನೂ ಸುನೀಲ್ ಶೆಟ್ಟಿ ಮಂಗಳೂರಿನವರು ಈ ಕಾರಣಗಳಿಂದ ಇವರಿಬ್ಬರಲ್ಲಿ ಒಬ್ಬರು ಯಾರಾದರೂ ಬರುವ ಸಾಧ್ಯತೆಗಳು ಹೆಚ್ಚಾಗಿದೆ ಎನ್ನುವುದು ಅಭಿಮಾನಿಗಳ ಲೆಕ್ಕಾಚಾರ.

'ಟಗರು' ಚಿತ್ರದ ವಿಶಿಷ್ಟ ಪಾತ್ರಗಳು ಈಗ ಸಿನಿಮಾ ಟೈಟಲ್ ಆಯ್ತು | Filmibeat Kannada
Bollywood artists are act in Shivaraj Kumar's Rustum Kannada movie

ಸಾಕಷ್ಟು ದಿನಗಳ ಹಿಂದೆಯೇ ಕಥೆಯನ್ನ ಮಾಡಿಕೊಂಡಿದ್ದ ಸಾಹಸ ನಿರ್ದೇಶಕ ರವಿವರ್ಮಾ ಪ್ರೀ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ ಆಗಿದ್ದು ಇನ್ನು ಕೆಲವೇ ದಿನಗಳಲ್ಲಿ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ಹೊರ ಹಾಕಲಿದ್ದಾರೆ. ಈಗಾಗಲೇ ನಿರ್ದೇಶಕರು ಮನೋಜ್ ಬಾಜ್ ಪೇಯಿ, ಸುನೀಶ್ ಶೆಟ್ಟಿ, ಸಂಜಯ್ ದತ್ ಹಾಗೂ ಅನಿಲ್ ಕಪೂರ್ ಅವರನ್ನ ಸಂಪರ್ಕ ಮಾಡಿದ್ದಾರಂತೆ. ಅಣ್ಣಾವ್ರ ಹುಟ್ಟುಹಬ್ಬಕ್ಕೆ ಸಿನಿಮಾ ಸೆಟ್ಟೇರುತ್ತಿದೆ.

ಅಪ್ಪು ಚಿತ್ರಕ್ಕೆ ಫೈಟ್ ಹೇಳಿಕೊಡುತ್ತಾರೆ 'ಬಾಹುಬಲಿ' ಖ್ಯಾತಿಯ ಸಾಹಸ ನಿರ್ದೇಶಕ

English summary
Bollywood artists are likely to act in Shivaraj Kumar's Rustom Kannada movie. director Ravivarma have been contacted Sanjay Dutt, Anil Kapoor, Sunil Shetty and Manoj Bajpayee regard this.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada