twitter
    For Quick Alerts
    ALLOW NOTIFICATIONS  
    For Daily Alerts

    270 ಉದ್ಯೋಗಿಗಳಿಗೆ ವೇತನ ಕಡಿತ, ಗೇಟ್ ಪಾಸ್ ನೀಡಿದ ಬುಕ್ ಮೈ ಶೋ

    |

    ಅಂತರ್ಜಾಲದ ಮೂಲಕ ಸಿನಿಮಾ, ನಾಟಕ ಹಾಗೂ ವಿವಿಧ ಕಾರ್ಯಕ್ರಮಗಳ ಮುಂಗಡ ಟಿಕೆಟ್ ಕಾಯ್ದಿರಿಸುವ ಕಂಪೆನಿ ಬುಕ್ ಮೈ ಶೋ ಆರ್ಥಿಕ ಸಂಕಷ್ಟದ ಕಾರಣದಿಂದ 270 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ.

    Recommended Video

    ದರ್ಶನ್ ಬಂದು ನಿಂತು ಪ್ರಚಾರ ಮಾಡಿದ್ರು ಯೂಸ್ ಆಗ್ಲಿಲ್ಲ | Vikas | Kanadanthe Maayavadanu | Darshan

    ಭಾರತ ಹಾಗೂ ವಿವಿಧೆಡೆ ಬುಕ್ ಮೈ ಶೋ ಕಂಪೆನಿಯಲ್ಲಿ ಸುಮಾರು 1,450 ಮಂದಿ ನೌಕರರಿದ್ದು, ಅವರಲ್ಲಿ ಸುಮಾರು 270 ಮಂದಿಯಲ್ಲಿ ಕೆಲವರು ಸಂಪೂರ್ಣವಾಗಿ ಕೆಲಸ ಕಳೆದುಕೊಂಡಿದ್ದರೆ, ಇನ್ನು ಅನೇಕರನ್ನು ಫರ್ಲೋದಲ್ಲಿ ಇರಿಸಲಾಗಿದೆ. ಅಂದರೆ ಅನೇಕ ಉದ್ಯೋಗಿಗಳು ಕಂಪೆನಿಯ ಉದ್ಯೋಗಿಗಳಾಗಿಯೇ ಉಳಿಯಲಿದ್ದು, ಅವರಿಗೆ ವೇತನ ಸಿಗುವುದಿಲ್ಲ. ಆದರೆ ಎಲ್ಲ ವೈದ್ಯಕೀಯ ವಿಮೆ, ಗ್ರಾಚುಯಿಟಿ ಮತ್ತು ಇತರೆ ಸವಲತ್ತುಗಳು ಮುಂದುವರಿಯಲಿದೆ. ಮುಂದೆ ಓದಿ...

    ಬುಕ್ ಮೈ ಶೋ ದಂಧೆಯ ವಿರುದ್ಧ 'ಯುವರತ್ನ' ನಿರ್ದೇಶಕ, ನಿರ್ಮಾಪಕರ ಆಕ್ರೋಶಬುಕ್ ಮೈ ಶೋ ದಂಧೆಯ ವಿರುದ್ಧ 'ಯುವರತ್ನ' ನಿರ್ದೇಶಕ, ನಿರ್ಮಾಪಕರ ಆಕ್ರೋಶ

    ಉದ್ಯೋಗ ಕಡಿತ ಅನಿವಾರ್ಯ

    ಉದ್ಯೋಗ ಕಡಿತ ಅನಿವಾರ್ಯ

    ಕೊರೊನಾ ವೈರಸ್ ಲಾಕ್ ಡೌನ್ ಕಾರಣದಿಂದ ಬುಕ್ ಮೈ ಶೋಗೆ ತೀವ್ರ ಆರ್ಥಿಕ ಹೊಡೆತ ಉಂಟಾಗಿದೆ. ಈ ಕಾರಣದಿಂದ ವಿವಿಧ ವಿಭಾಗಗಳು ಮತ್ತು ತಂಡಗಳಿಂದ ಉದ್ಯೋಗಿಗಳ ಕಡಿತ ಅನಿವಾರ್ಯವಾಗಿದೆ ಎಂದು ಬುಕ್ ಮೈ ಶೋ ಸಂಸ್ಥಾಪಕ ಹಾಗೂ ಸಿಇಒ ಆಶೀಶ್ ಹೇಮ್ರಜಾನಿ ಉದ್ಯೋಗಿಗಳಿಗೆ ಮಾಹಿತಿ ನೀಡಿದ್ದಾರೆ.

    ವೇತನ, ಸೌಲಭ್ಯ ತ್ಯಾಗ

    ವೇತನ, ಸೌಲಭ್ಯ ತ್ಯಾಗ

    'ನಮ್ಮನ್ನು ಬಿಟ್ಟು ಹೋಗುತ್ತಿರುವವರಿಗೆ, ಈ ನಿರ್ಧಾರ ತೆಗೆದುಕೊಳ್ಳುವಂತಾಗಿರುವುದಕ್ಕೆ ನಾನು ನಿಜಕ್ಕೂ ಕ್ಷಮೆ ಕೇಳುತ್ತೇನೆ. ಸಂಸ್ಥೆಯ ಲೀಡರ್ ಶಿಪ್ ಮಟ್ಟದಲ್ಲಿ ಶೇ 10-50ರವರೆಗೆ ಸ್ವಯಂ ಪ್ರೇರಣೆಯಿಂದ ವೇತನ ಕಡಿತಕ್ಕೆ, ಎಲ್ಲ ಬೋನಸ್‌ಗಳನ್ನು ಬಿಟ್ಟುಬಿಡಲು ಮತ್ತು ವೇತನ ಏರಿಕೆಯಿಂದ ಹಿಂದೆ ಸರಿಯಲು ನಿರ್ಧರಿಸಿರುವುದು ನಿಮಗೆ ತಿಳಿದಿರಬೇಕು' ಎಂದು ಹೇಳಿದ್ದಾರೆ.

    ಕಷ್ಟಪಟ್ಟು ಮಾಡಿದ ಸಿನಿಮಾಕ್ಕೆ ಬುಕ್‌ ಮೈ ಶೋ ಇಟ್ಟ ಗುನ್ನಾಕಷ್ಟಪಟ್ಟು ಮಾಡಿದ ಸಿನಿಮಾಕ್ಕೆ ಬುಕ್‌ ಮೈ ಶೋ ಇಟ್ಟ ಗುನ್ನಾ

    ಎಲ್ಲ ವೆಚ್ಚಗಳ ಕಡಿತ

    ಎಲ್ಲ ವೆಚ್ಚಗಳ ಕಡಿತ

    'ಕಂಪೆನಿಯು ತನ್ನ ಇತರೆ ಎಲ್ಲ ವೆಚ್ಚಗಳನ್ನೂ ಕಡಿತಗೊಳಿಸಿದೆ. ಜತೆಗೆ ಮಾರಾಟಗಾರರು, ಸಹಭಾಗಿಗಳು, ಹಿಡುವಳಿದಾರರೊಂದಿಗೆ ಮರು ಮಾತುಕತೆ ನಡೆಸಿದೆ. ಎಲ್ಲ ರೀತಿಯ ಖರ್ಚು ವೆಚ್ಚಗಳನ್ನು ಕಡಿತಗೊಳಿಸುವ ಕ್ರಮಗಳನ್ನು ತೆಗೆದುಕೊಂಡ ಬಳಿಕ ಅಂತಿಮವಾಗಿ ಸಿಬ್ಬಂದಿ ಕಡಿತದ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ಅವರು ತಿಳಿಸಿದ್ದಾರೆ.

    ಹಿಂದು ವಿರೋಧಿಗೆ ಅವಕಾಶ: ಬುಕ್‌ ಮೈ ಶೋ ವಿರುದ್ಧ ಅಭಿಯಾನಹಿಂದು ವಿರೋಧಿಗೆ ಅವಕಾಶ: ಬುಕ್‌ ಮೈ ಶೋ ವಿರುದ್ಧ ಅಭಿಯಾನ

    ಎರಡು ತಿಂಗಳ ವೇತನ ಸೌಲಭ್ಯ

    ಎರಡು ತಿಂಗಳ ವೇತನ ಸೌಲಭ್ಯ

    ಫರ್ಲೋದಲ್ಲಿ ಇರಿಸಿರುವ ಉದ್ಯೋಗಿಗಳು ವೈದ್ಯಕೀಯ ವಿಮೆ, ಗ್ರಾಚುಯಿಟಿ ಮತ್ತಿತರ ಸವಲತ್ತುಗಳಿಗೆ ಅರ್ಹರಾಗಿರುತ್ತಾರೆ. ಕಂಪೆನಿ ಬಿಟ್ಟು ಹೊರಹೋಗಬೇಕಿರುವ ನೌಕರರಿಗೆ ಅವರ ನೋಟಿಸ್ ಪಿರಿಯಡ್ ಮತ್ತು ಒಪ್ಪಂದದ ಅವಧಿಯಾಚೆ ಕನಿಷ್ಠ ಎರಡು ತಿಂಗಳ ನೀಡಲಾಗುತ್ತದೆ. ಜತೆಗೆ ಸೆ. 30ರವರೆಗೂ ಕುಟುಂಬದ ನಾಮಿನಿಯೊಂದಿಗೆ ವೈದ್ಯಕೀಯ ವಿಮೆ ಪಡೆದುಕೊಳ್ಳಲಿದ್ದಾರೆ.

    English summary
    BookMyShow has laid off or forloughed 270 employees for cost cutting as coronavirus pandemic hit business.
    Friday, May 29, 2020, 13:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X