»   » ಬ್ರಹ್ಮ ಬಿಡುಗಡೆಗೆ ಮುನ್ನ ನಿರ್ದೇಶಕ ಚಂದ್ರು ಸಂದರ್ಶನ

ಬ್ರಹ್ಮ ಬಿಡುಗಡೆಗೆ ಮುನ್ನ ನಿರ್ದೇಶಕ ಚಂದ್ರು ಸಂದರ್ಶನ

By: ಬಾಲರಾಜ್ ತಂತ್ರಿ
Subscribe to Filmibeat Kannada

ಸ್ಟಾರ್ ನಿರ್ದೇಶಕ ಆರ್ ಚಂದ್ರು ಮತ್ತು ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಶನಿನ ಮೊದಲ ಚಿತ್ರ 'ಬ್ರಹ್ಮ' ಬಿಡುಗಡೆಗೆ ಸಿದ್ದವಾಗಿದೆ. 2014ರ ಬಹು ನಿರೀಕ್ಷಿತ ಬ್ರಹ್ಮ ಚಿತ್ರದ ಮೇಲೆ ಸ್ಯಾಂಡಲ್ ವುಡ್ ಭಾರೀ ನಿರೀಕ್ಷೆಯನ್ನು ಇಟ್ಟು ಕೊಂಡಿದೆ.

ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ, ಸುಮಾರು ಹದಿನೈದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಬ್ರಹ್ಮ ಚಿತ್ರದ ಆಡಿಯೋ ಈಗಾಗಲೇ ಸೂಪರ್ ಹಿಟ್ ಆಗಿ 'ಪ್ಲಾಟಿನಂ ಡಿಸ್ಕ್' ಕೂಡಾ ಬಿಡುಗಡೆಯಾಗಿದೆ. (ಉಪೇಂದ್ರ ಅಭಿನಯದ 'ಬ್ರಹ್ಮ'ಧ್ವನಿಸುರುಳಿ ವಿಮರ್ಶೆ)

ಮೈಲಾರಿ ಎಂಟರ್ಪ್ರೈಸಸ್ ಬ್ಯಾನರಡಿಯಲಿ ಮೂಡಿ ಬರುತ್ತಿರುವ ಈ ಚಿತ್ರದ ನಿರ್ಮಾಪಕರು ಮಂಜುನಾಥ್ ಬಾಬು. ಆರ್ ಚಂದ್ರು ಕಥೆ, ಚಿತ್ರಕಥೆ ಹಣೆದು ನಿರ್ದೇಶಿಸಿರುವ ಬ್ರಹ್ಮ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಉಪೇಂದ್ರ, ಪ್ರಣೀತಾ, ರಂಗಾಯಣ ರಘು, ಸೋನು ಸೂದ್, ಸಾಧು ಕೋಕಿಲ, ಸಯ್ಯಾಜಿ ಶಿಂಧೆ, ಬುಲೆಟ್ ಪ್ರಕಾಶ್ ಮುಂತಾದವರಿದ್ದಾರೆ.

ಚಿತ್ರಕ್ಕೆ ಗುರುಕಿರಣ್ ಅವರ ಸಂಗೀತವಿದ್ದು, ಶೇಖರ್ ಚಂದ್ರ ಕ್ಯಾಮರಾ ಹಿಡಿದಿದ್ದಾರೆ. (ಸೆನ್ಸಾರ್ ನಲ್ಲಿ ಉಪೇಂದ್ರ 'ಬ್ರಹ್ಮ' ಸೂಪರೋ ರಂಗ)

ಚಿತ್ರ ತಂಡಕ್ಕೆ ಶುಭ ಹಾರೈಸುತ್ತಾ, ನಿರ್ದೇಶಕ ಆರ್ ಚಂದ್ರು ಜೊತೆ ನಡೆಸಿದ ಸಂದರ್ಶನದ ಆಯ್ದ ಭಾಗ ಸ್ಲೈಡಿನಲ್ಲಿ?

ಬ್ರಹ್ಮ ಎಂದರೆ ಸೃಷ್ಠಿಕರ್ತ

ಪ್ರ: ಬ್ರಹ್ಮ ಎಂದರೆ ಸೃಷ್ಠಿಕರ್ತ, ಚಿತ್ರಕ್ಕೆ ಬ್ರಹ್ಮ ಎನ್ನುವ ಟೈಟಲ್ ಏಕೆ?
ಚಂದ್ರು: ನನ್ನ ತಂದೆಯ ಬಳಿ ನನಗೆ ಚಂದ್ರು ಎಂದು ಹೆಸರು ಯಾಕಿಟ್ಟಿದ್ದು ಎಂದರೆ ಅವರು ಏನು ಹೇಳುತ್ತಾರೆ. ಹಾಗೆಯೇ, ಬ್ರಹ್ಮ ನನ್ನ ಕನಸಿನ ಕೂಸು, ಚಿತ್ರದ ಕಥೆ ಮತ್ತು ಚಿತ್ರದಲ್ಲಿನ ನಾಯಕನ ಪಾತ್ರಕ್ಕೆ ಈ ಟೈಟಲ್ ಸೂಟ್ ಆಗುತ್ತೆ.

ಪ್ರ: ಚಿತ್ರದ ಸ್ಟೋರಿ ಲೈನ್ ಹೇಗೆ ಸಾಗುತ್ತೆ, ನಾಯಕನನ್ನು ಎಷ್ಟು ಶೇಡ್ ನಲ್ಲಿ ತೋರಿಸಿದ್ದೀರಾ?
ಚಂದ್ರು: ಇದೊಂದು ಸ್ವಮೇಕ್, ಗಟ್ಟಿ ಕಥೆಯುಳ್ಳ ಔಟ್ ಎಂಡ್ ಔಟ್ ಕಮರ್ಷಿಯಲ್ ಚಿತ್ರ. ಕ್ಲಾಸಿಗೂ ಮಾಸಿಗೂ ಸೈ, ಜೈ.

ನನ್ನ ಇತರ ಚಿತ್ರಕ್ಕಿಂತ ಇದು ಭಿನ್ನ

ಪ್ರ: ನಿಮ್ಮ ಇದುವರೆಗಿನ ಸಿನಿಮಾ ಲವ್ ಸ್ಟೋರಿ ಟ್ರ್ಯಾಕ್ ನಲ್ಲಿ ಸಾಗಿರುವ ಕಥೆಯುಳ್ಳದ್ದು. ನಿಮ್ಮ ಇತರ ಚಿತ್ರಗಳಿಗಿಂತ ಈ ಚಿತ್ರ ಹೇಗೆ ಭಿನ್ನವಾಗಿದೆ?
ಚಂದ್ರು: ಚಂದ್ರು ಸಿನಿಮಾ ಅಂದರೆ ಅದರಲ್ಲಿ ಒಂದು ಸಂದೇಶವಿರುತ್ತೆ, ಸೆಂಟಿಮೆಂಟ್ ಇರುತ್ತೆ. ಬ್ರಹ್ಮ ಚಿತ್ರ ಬೇರೆ format ನಲ್ಲಿ ಸಾಗಿದರೂ ಚಿತ್ರದ ಮೂಲಕ ಸಮಾಜಕ್ಕೆ ಸಂದೇಶ ನೀಡಿದ್ದೇನೆ.

ಪ್ರ: ಟ್ರೈಲರ್ ಮತ್ತು ಪೋಸ್ಟರ್ ನಲ್ಲಿ ಕುದುರೆ ದೃಶ್ಯಗಳಿವೆ, ಚಿತ್ರ ಮಗಧೀರ ಕಥೆಯ ಸಾಲಿನಲ್ಲಿ ಸಾಗುತ್ತಾ?
ಚಂದ್ರು: ಬಹಳಷ್ಟು ಬಾರಿ ನಾನು ಹೇಳಿದ್ದೇನೆ. ಮಗಧೀರ ಚಿತ್ರಕ್ಕೂ ನನ್ನ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರದ flash back ನಲ್ಲಿ ಬರುವ ಐತಿಹಾಸಿಕ, ಯುದ್ದದ ಸನ್ನಿವೇಶಕ್ಕೆ ನಾನು ಇದನ್ನು ಬಳಸಿಕೊಂಡಿದ್ದೇನೆ ಅಷ್ಟೇ..

ಯಾವ ಭಾಷೆಯ ಆಡಿಯನ್ಸಿಗೆ ಚಿತ್ರ ಹೊಂದುತ್ತೆ?

ಪ್ರ: ಮೂರು ಭಾಷೆಯ ಸಿನಿಮಾ, ಇದು ಯಾವ ಭಾಷೆಯ ಆಡಿಯನ್ಸ್ ಗೆ ಸೂಟ್ ಆಗಬಹುದು?
ಚಂದ್ರು: ಮೂರೂ ಭಾಷೆಯ ಜನರಿಗೆ ಸೂಟ್ ಆಗಬೇಕೆನ್ನುವುದು ನನ್ನ ಉದ್ದೇಶ. ಉಪ್ಪಿ ಸಾರ್ ಗೆ ತೆಲುಗುನಲ್ಲೂ ಅಭಿಮಾನಿಗಳಿದ್ದಾರೆ. ತಮಿಳು ಚಿತ್ರದಲ್ಲೂ ಈ ಹಿಂದೆ ನಟಿಸಿದ್ದಾರೆ. ಕನ್ನಡ ನನ್ನ ಮಾತೃ ಭಾಷೆ, ಇಲ್ಲಿನ ಕಲಾಭಿಮಾನಿಗಳಿಗೆ ಮತ್ತು ಉಪ್ಪಿ ಅಭಿಮಾನಿಗಳಿಗೆ ಚಿತ್ರ ಖಂಡಿತ ಇಷ್ಟವಾಗುತ್ತೆ.

ಪ್ರ: ಉಪೇಂದ್ರ ಕೂಡಾ ನಿರ್ದೇಶಕರು. ಈ ಚಿತ್ರದಲ್ಲಿ ನಿರ್ದೇಶನದ ಭಾಗದಲ್ಲಿ ನಿಮಗೆ ಅವರು ಸಾಥ್ ನೀಡಿದ್ದಾರಾ?
ಚಂದ್ರು: ನನ್ನ ಚಿತ್ರದಲ್ಲಿ ನಾನು ನನ್ನದೇ ಆದ ಶೈಲಿಯಲ್ಲಿ ಕೆಲಸ ಮಾಡತ್ತೇನೆ.

ಇದು ಯಾರ ಸಿನಿಮಾ ಸರ್?

ಪ್ರ: ಇದು ಉಪೇಂದ್ರ ಅವರ ಸಿನಿಮಾನ ಅಥವಾ ಚಂದ್ರು ಸಿನಿಮಾನ?
ಚಂದ್ರು: ಇದು ನನ್ನ ಸಿನಿಮಾ, ನನ್ನದೇ ಶೈಲಿಯಲ್ಲಿ ತೆಗೆದಿರುವ ಸಿನಿಮಾ. Of course, ಉಪೇಂದ್ರ ಅವರ ಅಭಿಮಾನಿಗಳಿಗೆ ಇಷ್ಟವಾಗುವ ಎಲ್ಲಾ ಅಂಶಗಳು ಚಿತ್ರದಲ್ಲಿದೆ.

ಪ್ರ: ಚಿತ್ರೀಕರಣಕ್ಕೆ ಯಾವ ಯಾವ ಲೊಕೇಶನ್ ಬಳಸಿ ಕೊಂಡಿದ್ದೀರಿ?
ಚಂದ್ರು: ಮಲೇಶಿಯಾ, ಮೈಸೂರು, ಮುಂಬೈ ಮತ್ತು ಬೆಂಗಳೂರಿನ ವಿವಿಧ ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

ಮೈನ್ ಥಿಯೇಟರ್ ಕನ್ಫರ್ಮ್ ಆಯ್ತಾ ಹೇಗೆ?

ಪ್ರ: ಮೈನ್ ಥಿಯೇಟರ್ ಕಪಾಲಿಗೆ ಶಿಫ್ಟ್ ಆಗುತ್ತೆ ಎನ್ನುವ ಸುದ್ದಿಯಿದೆ?
ಚಂದ್ರು: ಕನ್ನಡ ಚಿತ್ರಗಳು ಚೆನ್ನಾಗಿ ಓಡಬೇಕೆಂದು ಬಯಸುವವನು ನಾನು. ಯಾರ ಚಿತ್ರಕ್ಕೂ ನನ್ನ ಚಿತ್ರದಿಂದ ತೊಂದರೆಯಾಗಬಾರದು. ಚಿತ್ರ ವಿತರಕರ ಜೊತೆ ಮಾತುಕತೆ ನಡೆಸಿದ ಮೇಲೆ ನಾನು ಜಾಹೀರಾತು ನೀಡಿರುವುದು. ಚಿತ್ರ ಮೈನ್ ಥಿಯೇಟರ್ ಸಂತೋಷ್ ಚಿತ್ರಮಂದಿರದಲ್ಲೇ ಬಿಡುಗಡೆಯಾಗಲಿದೆ. (ಗೋಲ್ಡನ್ ಸ್ಟಾರ್ ಗಣೇಶ್ ಮೇಲೆ ಉಪೇಂದ್ರ 'ಬ್ರಹ್ಮಾಸ್ತ್ರ')

ಪ್ರ: ಎಷ್ಟು ಥಿಯೇಟರಿನಲ್ಲಿ ಸಿನಿಮಾ ಬಿಡುಗಡೆಯಾಗ್ತಾ ಇದೆ?

ಚಂದ್ರು: ಇದುವರೆಗೆ 250 ಚಿತ್ರಮಂದಿರ ಫೈನಲ್ ಆಗಿದೆ. ಇನ್ನಷ್ಟು ಚಿತ್ರಮಂದಿರಗಳ ಜೊತೆ ವಿತರಕರ ಮೂಲಕ ಮಾತುಕತೆ ನಡೆಯುತ್ತಿದೆ.

ಕೊನೆಯದಾಗಿ, ಡಬ್ಬಿಂಗ್ ಬಗ್ಗೆ ಹೇಳಿ?

ಪ್ರ: ಚಿತ್ರದ ತಮಿಳು ಮತ್ತು ತೆಲುಗು ವರ್ಸನ್ ಯಾವಾಗ ರಿಲೀಸ್?
ಚಂದ್ರು: ಎರಡೂ ರಾಜ್ಯಗಳ ವಿತರಕರ ಜೊತೆ ಮಾತುಕತೆ ನಡೆಯುತ್ತಿದೆ. ಅಲ್ಲಿನ ತಲಾ 350 ಚಿತ್ರಮಂದಿರಗಳು ಸದ್ಯಕ್ಕೆ ಕನ್ಫರ್ಮ್ ಆಗಿದೆ. ಎರಡು ವಾರದ ನಂತರ ಎರಡೂ ಭಾಷೆಯಲ್ಲಿ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ.

ಪ್ರ: ಲಾಸ್ಟ್ ಬಟ್ ನಾಟ್ ಲೀಸ್ಟ್, ಡಬ್ಬಿಂಗ್ ಬೇಕಾ ಬೇಡ್ವಾ?
ಚಂದ್ರು: ಬೇಡ, HMT ಕಂಪೆನಿ ಮುಚ್ಚಿದಾಗ ನೌಕರರಿಗೆ ಆದ ಹಾಗೇ ನಮ್ಮ ಚಿತ್ರೋದ್ಯಮವನ್ನು ನಂಬಿದವರಿಗೂ ಆಗುತ್ತೆ. ನಾನು ಡಬ್ಬಿಂಗ್ ಸಂಸ್ಕೃತಿಗೆ ವಿರೋಧಿ..

English summary
Brahma movie releasing across the state on Feb 7th. Movie Director R Chandru is given quick interview to Oneindia.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada