For Quick Alerts
  ALLOW NOTIFICATIONS  
  For Daily Alerts

  ವಿಡಿಯೋ : 'ಬ್ರಹ್ಮಾಚಾರಿ'ಯ ಫಸ್ಟ್ ನೈಟ್ ಟೀಸರ್ ಸಖತ್ ಫನ್ನಿ

  |

  ''ಇವನು ನಮ್ಮ ಫ್ರೆಂಡ್ ರಾಮು, ಸುನೀತ ಕೃಷ್ಣಮೂರ್ತಿ ಜೊತೆಗೆ ಮೊನ್ನೆ ಮದುವೆ ಆಯ್ತು. ನಿನ್ನೆ ಪ್ರಸ್ತನೂ ಆಯ್ತು'' ಎಂದು 'ಬ್ರಹ್ಮಾಚಾರಿ'ಯ ಪರಿಚಯವನ್ನು ನಿರ್ದೇಶಕರು ಮಾಡಿಸಿದ್ದಾರೆ.

  ಸತೀಶ್ ನೀನಾಸಂ ಹುಟ್ಟುಹಬ್ಬದ ವಿಶೇಷವಾಗಿ ಇಂದು (ಗುರುವಾರ) ಅವರ ಹೊಸ ಸಿನಿಮಾ 'ಬ್ರಹ್ಮಾಚಾರಿ'ಯ ಮೊದಲ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಸಿಕ್ಕಾಪಟ್ಟೆ ಫನ್ನಿಯಾಗಿದ್ದು, ಶಿವರಾಜ್ ಕೆ ಆರ್ ಪೇಟೆ ಧ್ವನಿಯ ಮೂಲಕ ಶುರು ಆಗುತ್ತಿದೆ.

  'ಬ್ರಹ್ಮಚಾರಿ'ಗೆ ಜೋಡಿಯಾದ ನಟಿ ಅದಿತಿ ಪ್ರಭುದೇವ

  'ಬ್ರಹ್ಮಾಚಾರಿ'ಯ ಫಸ್ಟ್ ನೈಟ್ ಕಥೆಯನ್ನು ಟೀಸರ್ ಮೂಲಕ ತೋರಿಸಿದ್ದಾರೆ. ಸತೀಶ್ ನೀನಾಸಂ ಜೋಡಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ದತ್ತಣ್ಣ ಹಾಗೂ ಅಶೋಕ್ ಟೀಸರ್ ನಲ್ಲಿ ಬಂದು ಹೋಗಿದ್ದಾರೆ. ಟೀಸರ್ ನಲ್ಲಿಯೇ ಚಿತ್ರದಲ್ಲಿ ಸಿಕ್ಕಾಪಟ್ಟೆ ಕಾಮಿಡಿ ಇರುವ ಸೂಚನೆ ಸಿಕ್ಕಿದೆ.

  ಚಂದ್ರ ಮೋಹನ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು 'ಬಾಂಬೆ ಮಿಠಾಯಿ' ಮತ್ತು 'ಡಬಲ್ ಇಂಜಿನ್' ಚಿತ್ರಗಳನ್ನು ನಿರ್ದೇಶನ ಮಾಡಿದ್ದರು.

  ಉದಯ್ ಮೆಹ್ತಾ ಬಂಡವಾಳ ಹಾಕಿದ್ದಾರೆ. ಧರ್ಮ ವಿಶ್ ಸಿನಿಮಾಗೆ ಸಂಗೀತ ನೀಡಿದ್ದಾರೆ. ಸದ್ಯ, ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಟೀಸರ್ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.

  'ಬ್ರಹ್ಮಾಚಾರಿ' ಸಿನಿಮಾ ಟೀಸರ್ ನೋಡಲು ಇಲ್ಲಿ ಕ್ಲಿಕ್ ಮಾಡಿ.

  English summary
  'Brahmachari' kannada movie teaser out on the on the occasion of Satish Ninasam birthday. Actress Adithi Prabhudeva selected to play lead role opposite actor Satish Ninasam in The movie is producing by Uday Mehatha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X