»   » ರಕ್ಷಾಬಂಧನ:ಭ್ರಾತೃತ್ವ ಮೆರೆಯುವ ಕನ್ನಡ ಚಿತ್ರಗಳು

ರಕ್ಷಾಬಂಧನ:ಭ್ರಾತೃತ್ವ ಮೆರೆಯುವ ಕನ್ನಡ ಚಿತ್ರಗಳು

Posted By:
Subscribe to Filmibeat Kannada

ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ 'ರಕ್ಷಾಬಂಧನ' ಅಥವಾ 'ರಾಖಿ' ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲೂ ಸಂಭ್ರಮದಿಂದ ಆಚರಿಸಲಾಗುತ್ತದೆ. ಅಣ್ಣ ತಂಗಿಯರ ಬಾಂಧವ್ಯವನ್ನು ಭಾವನಾತ್ಮಕವಾಗಿ ಸ್ಮರಿಸುವ ಈ ದಿನ "ರಕ್ಷಾಬಂಧನ".

ಹಿಂದೂ ಸಂಪ್ರದಾಯದನ್ವಯ ಶ್ರಾವಣ ಮಾಸದ ಹುಣ್ಣಿಮೆಯಂದು ಅಥವಾ ಯಜುರ್ವೇದದ ಉಪಕರ್ಮದ ದಿನದಂದು ರಕ್ಷಾಬಂಧನವನ್ನು ಆಚರಿಸುವುದು ಪದ್ದತಿ. ಸಹೋದರಿಯು ತನ್ನ ಸಹೋದರನ ಏಳಿಗೆಗಾಗಿ ಮತ್ತು ದುಷ್ಟ ಶಕ್ತಿಗಳಿಂದ ಸಹೋದರನಿಗೆ ರಕ್ಷಣೆ ಸಿಗಲೆಂದು ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ.

ಸಹೋದರನ ಅಭಿವೃದ್ದಿಗೆ ಹಾರೈಸುವ ಅಕ್ಕ - ತಂಗಿಯರು ರಾಖಿ ಪಡೆದು ಸಿಹಿ ವಿನಿಮ ಮಾಡಿಕೊಂಡು ಸಂಭ್ರಮಿಸುವುದು ಪದ್ದತಿ. ಒನ್ ಇಂಡಿಯಾ ಕನ್ನಡದ ಎಲ್ಲಾ ಓದುಗರಿಗೂ ರಕ್ಷಾಬಂಧನ, ನೂಲಹುಣ್ಣಿಮೆ ಹಬ್ಬದ ಶುಭಾಷಯಗಳು.

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಬಂದ ಹೋದ ಭ್ರಾತೃತ್ವ ಮೆರೆಯುವ ಕನ್ನಡ ಚಿತ್ರಗಳಾವುವು? ಸ್ಲೈಡಿನಲ್ಲಿ..

ದೇವರು ಕೊಟ್ಟ ತಂಗಿ

ಓಂ ಸಾಯಿ ಪ್ರಕಾಶ್ ನಿರ್ದೇಶನದ ಈ ಚಿತ್ರ ನವೆಂಬರ್ 2009ರಲ್ಲಿ ಬಿಡುಗಡೆಯಾಯಿತು. ಶಿವರಾಜ್ ಕುಮಾರ್, ಮೀರಾ ಜಾಸ್ಮಿನ್ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರಕ್ಕೆ ಹಂಸಲೇಖಾ ಸಂಗೀತ ನೀಡಿದ್ದರು.

ತಂಗಿಗಾಗಿ

ಪಿ ಸತ್ಯಾ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್, ಶ್ವೇತಾ ಚೆಂಗಪ್ಪ, ರಂಗಾಯಣ ರಘು, ಬುಲೆಟ್ ಪ್ರಕಾಶ್ ಪ್ರಮುಖ ಭೂಮಿಕೆಯಲ್ಲಿದ್ದರು. ಸಾಧು ಕೋಕಿಲಾ ಸಂಗೀತ ನೀಡಿದ್ದ ಈ ಚಿತ್ರ 2006ರಲ್ಲಿ ಬಿಡುಗಡೆಯಾಗಿತ್ತು.

ಶೌರ್ಯ

2010ರಲ್ಲಿ ಬಿಡುಗಡೆಯಾದ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ದರ್ಶನ್, ಮುಮೈತ್ ಖಾನ್, ಮದಲಸಾ ಶರ್ಮಾ, ಬುಲೆಟ್ ಪ್ರಕಾಶ್, ರಮೇಶ್ ಭಟ್, ಚಿತ್ರಾ ಶೆಣೈ ಮುಂತಾದವರಿದ್ದರು. ಚಿತ್ರಕ್ಕೆ ಸಂಗೀತ ಮತ್ತು ನಿರ್ದೇಶನ ಸಾಧು ಕೋಕಿಲಾ ಅವರದ್ದು.

ಅಣ್ಣತಂಗಿ

2005ರಲ್ಲಿ ಬಿಡುಗಡೆಯಾದ ಈ ಚಿತ್ರದ ನಿರ್ದೇಶನ ಸಾಯಿ ಪ್ರಕಾಶ್ ಅವರದ್ದು, ಸಂಗೀತ ಹಂಸಲೇಖಾ. ಶಿವರಾಜ್ ಕುಮಾರ್, ರಾಧಿಕಾ, ದೀಪು, ಸುಧಾರಾಣಿ, ಶ್ರೀನಿವಾಸಮೂರ್ತಿ, ಹೇಮಾ ಚೌಧುರಿ ಪ್ರಮುಖ ಭೂಮಿಕೆಯಲ್ಲಿದ್ದರು.

ತವರಿಗೆ ಬಾ ತಂಗಿ

ಶಿವರಾಜ್ ಕುಮಾರ್ ಮತ್ತು ರಾಧಿಕಾ ಅಣ್ಣ ತಂಗಿಯಾಗಿ ನಟಿಸಿದ ಮತ್ತೊಂದು ಚಿತ್ರ. ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರಕ್ಕೆ ಸಂಗೀತ ನೀಡಿದವರು ಹಂಸಲೇಖಾ. ಅನು ಪ್ರಭಾಕರ್ ಮತ್ತು ಕೋಮಲ್ ಇತರ ತಾರಾಗಣದಲ್ಲಿದ್ದಾರೆ.

ವರ್ಷ

ಜುಲೈ 2005ರಲ್ಲಿ ಬಿಡುಗಡೆಯಾದ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಡಾ. ವಿಷ್ಣುವರ್ಧನ್, ರಮೇಶ್, ಅನು ಪ್ರಭಾಕರ್, ಮಾನ್ಯ, ಕೋಮಲ್, ದೊಡ್ಡಣ್ಣ, ಶ್ರೀನಿವಾಸ ಮೂರ್ತಿ ಮುಂತಾದವರಿದ್ದಾರೆ. ಎಸ್ ನಾರಾಯಣ್ ನಿರ್ದೇಶನದ ಈ ಚಿತ್ರಕ್ಕೆ ಎಸ್ ಎ ರಾಜಕುಮಾರ್ ಸಂಗೀತ ನೀಡಿದ್ದರು.

ತಾಯಿಯ ಮಡಿಲು

ಎಸ್ ನಾರಾಯಣ್ ನಿರ್ದೇಶನದ ಈ ಚಿತ್ರದಲ್ಲಿ ಶಿವರಾಜ್ ಕುಮಾರ್, ರಕ್ಷಿತಾ, ಜಯಸುಧಾ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಚಿತ್ರಕ್ಕೆ ಎಸ್ ಎ ರಾಜಕುಮಾರ್ ಅವರ ಸಂಗೀತವಿದೆ.

English summary
Today is Raksha Bandhan day. Kannada film industry has given several brother and sister sentiment movies. Some of the movies in recent past.
Please Wait while comments are loading...