For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರರಂಗದ ಅಪೂರ್ವ ಸಹೋದರರು

  |

  ಹಲವು ಕಲಾವಿದರಿಗೆ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಲು ಕಲಾ ಕುಟುಂಬದ ಹಿನ್ನಲೆಯಿದ್ದರೆ, ಇನ್ನು ಹಲವರು ತಮ್ಮದೇ ಪರಿಶ್ರಮದಿಂದ ಚಿತ್ರರಂಗದಲ್ಲಿ ನೆಲೆಕಂಡವರು.

  ಚಿತ್ರರಂಗವೆಂಬ ಮಾಯಾಲೋಕದಲ್ಲಿ ಕಲಾ ಕುಟುಂಬ ಎನ್ನುವ ಹಿನ್ನಲೆ ಯಾವುದೇ ನಾಯಕ ಅಥವಾ ನಾಯಕಿಗಾಗಲಿ ಒಂದು ಮಟ್ಟಿಗೆ ಯಶಸ್ಸು ನೀಡಬಹುದೇ ಹೊರತು ಅದು ಶಾಸ್ವತವಲ್ಲ.

  ಸಹೋದರರು ಅಥವಾ ಸಹೋದರಿಯರು ಕಲೆಯನ್ನೇ ಕಸುಬಾಗಿರಿಸಿಕೊಂಡವರು ಭಾರತೀಯ ಚಿತ್ರರಂಗದ ಎಲ್ಲಾ ಭಾಷೆಗಳಲ್ಲೂ ಇದೆ. ಹಿಂದಿ ಚಿತ್ರರಂಗದಲ್ಲಿ ಇದಕ್ಕೆ ಕೊಡಬಹುದಾದ ಉದಾಹರಣೆಯೆಂದರೆ ಸನ್ನಿ ಡಿಯೋಲ್ - ಬಾಬ್ಬಿ ಡಿಯೋಲ್, ಸಲ್ಮಾನ್ ಖಾನ್ - ಅರ್ಭಾಜ್ ಖಾನ್- ಸೋಹೇಲ್ ಖಾನ್.

  ಇನ್ನು ಇತ್ತ ತಮಿಳಿನಲ್ಲಿ ಸೂರ್ಯ - ಕಾರ್ತಿ, ತೆಲುಗಿನಲ್ಲಿ ಚಿರಂಜೀವಿ - ಪವನ್ ಕಲ್ಯಾಣ್, ಬಾಲಕೃಷ್ಣ - ಹರಿಕೃಷ್ಣ , ಜ್ಯೂ ಎನ್ಟಿಆರ್ - ಕಲ್ಯಾಣ್ ರಾಮ್ ಹೀಗೆ ಪಟ್ಟಿ ಸಾಗುತ್ತದೆ.

  ಇನ್ನು ನಮ್ಮ ಕನ್ನಡ ಚಿತ್ರರಂಗದ ಪ್ರಸಕ್ತ ಅಪೂರ್ವ ಸಹೋದರರ ಬಗ್ಗೆ ಒಂದು ಝಲಕ್..

  ವಿಜಯ್ ರಾಘವೇಂದ್ರ - ಶ್ರೀಮುರುಳಿ

  ವಿಜಯ್ ರಾಘವೇಂದ್ರ - ಶ್ರೀಮುರುಳಿ

  ಚಿತ್ರರಂಗದ ಖ್ಯಾತ ನಿರ್ಮಾಪಕರಲ್ಲಿ ಒಬ್ಬರಾದ ಎಸ್ ಎ ಚನ್ನೇಗೌಡರ ಮಕ್ಕಳಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ, ವರನಟ ಡಾ.ರಾಜಕುಮಾರ್ ಅವರ ಹತ್ತಿರದ ಸಂಬಂಧಿಗಳು ಕೂಡಾ. 'ಚಿನ್ನಾರಿ ಮುತ್ತ' ಚಿತ್ರದಲ್ಲಿ ಬಾಲನಟನಾಗಿ ಎಂಟ್ರಿ ಕೊಟ್ಟರು. ಬಿಗ್ ಬಾಸ್ ಕಾರ್ಯಕ್ರದ ಸ್ಪರ್ಧಿಗಳಲ್ಲಿ ಒಬ್ಬರಾದ ವಿಜಯ್ 32ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಸೂಪರ್ ಹಿಟ್ ಚಿತ್ರಗಳನ್ನು ಪಟ್ಟಿ ಮಾಡುವುದಾದರೆ ರಿಷಿ, ಸೇವಂತಿ ಸೇವಂತಿ, ಕಳ್ಳ ಮಳ್ಳ ಸುಳ್ಳ, ಸ್ನೇಹಿತರು. ದಕ್ಷಿಣದ ನಾಲ್ಕೂ ಭಾಷೆಗಳಲ್ಲಿ ನಟಿಸಿರುವ ಶ್ರೀಮುರಳಿ, ಚಂದ್ರ ಚಕೋರಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಚಂದ್ರ ಚಕೋರಿ, ಕಂಠಿ ಮುಂತಾದ ಹಿಟ್ ಚಿತ್ರಗಳನ್ನು ನೀಡಿರುವ ಶ್ರೀಮುರುಳಿ ಸುಮಾರು ಇಪ್ಪತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ವಿಜಯ್ ಮತ್ತು ಶ್ರೀಮುರುಳಿ ಮಿಂಚಿನ ಓಟ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದಾರೆ.

  ಚಿರಂಜೀವಿ ಸರ್ಜಾ - ಧ್ರುವ್ ಸರ್ಜಾ

  ಚಿರಂಜೀವಿ ಸರ್ಜಾ - ಧ್ರುವ್ ಸರ್ಜಾ

  ಖ್ಯಾತ ಖಳನಟ ಶಕ್ತಿಪ್ರಸಾದ್ ಮೊಮ್ಮಕ್ಕಳಾದ ಇವರಿಬ್ಬರು ಅರ್ಜುನ್ ಸರ್ಜಾ ಸಹೋದರಿಯ ಮಕ್ಕಳು. ವಾಯುಪುತ್ರ ಚಿತ್ರದ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟ ಚಿರು ಇದುವರೆಗೆ ಆರು ಚಿತ್ರಗಳಲ್ಲಿ ನಟಿಸಿದ್ದಾರೆ. ಧ್ರುವ ಸರ್ಜಾ ಇದುವರೆಗೆ ನಟಿಸಿದ್ದು ಒಂದೇ ಚಿತ್ರದಲ್ಲಿ. ಮೊದಲ ಚಿತ್ರ ಅದ್ದೂರಿ ಸೂಪರ್ ಹಿಟ್ ಆಗಿತ್ತು.

  ರವಿಚಂದ್ರನ್ - ಬಾಲಾಜಿ

  ರವಿಚಂದ್ರನ್ - ಬಾಲಾಜಿ

  ಖ್ಯಾತ ನಿರ್ಮಾಪಕ, ಹಂಚಿಕೆದಾರ ಎನ್ ವೀರಸ್ವಾಮಿ ಪುತ್ರರು. ಖದೀಮ ಕಳ್ಳರು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಅಡಿಯಿಟ್ಟ ರವಿಚಂದ್ರನ್ ನಿರ್ಮಾಪಕ, ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರಾಗಿ ಕೂಡಾ ಕೆಲಸ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಈ ಕನಸುಗಾರ ಸುಮಾರು ಎಪ್ಪತ್ತಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸುಮಾರು ಹಿಟ್ ಚಿತ್ರಗಳನ್ನು ನೀಡಿರುವ ರವಿಚಂದ್ರನ್ ಸಹೋದರ ಬಾಲಾಜಿ ಚಿತ್ರರಂಗದಲ್ಲಿ ಅಷ್ಟೇನೂ ಯಶಸ್ಸು ಕಾಣಲಿಲ್ಲ. ಇನಿಯ ಚಿತ್ರದ ಮೂಲಕ ಬಾಲಾಜಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

  ದರ್ಶನ್ - ದಿನಕರ್

  ದರ್ಶನ್ - ದಿನಕರ್

  ಹೆಸರಾಂತ ಖಳ ನಟ ತೂಗುದೀಪ ಶ್ರೀನಿವಾಸ್ ಪುತ್ರರಾದ ದರ್ಶನ್ ಪ್ರಸಿದ್ದ ನಟ ಮತ್ತು ದಿನಕರ್ ನಿರ್ದೇಶಕ. ಮಜೆಸ್ಟಿಕ್ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾದ ದರ್ಶನ್ ಸುಮಾರು ಐವತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ನಟಿಸಿದ ಬಹುತೇಕ ಚಿತ್ರಗಳು ಹಿಟ್ ಚಿತ್ರಗಳು. ದರ್ಶನ್ ಸಹೋದರ ದಿನಕರ್ ಭರವಸೆಯ ಯುವ ನಿರ್ದೇಶಕ. ಇವರು ಇದುವರೆಗೆ ನಿರ್ದೇಶಿಸಿದ ಮೂರೂ ಚಿತ್ರಗಳು ಹಿಟ್ ಆಗಿವೆ.

  ಶಿವಣ್ಣ - ರಾಘಣ್ಣ - ಪುನೀತ್

  ಶಿವಣ್ಣ - ರಾಘಣ್ಣ - ಪುನೀತ್

  ಡಾ. ರಾಜ್ - ಪಾರ್ವತಮ್ಮ ದಂಪತಿಗಳ ಈ ಮೂವರೂ ಪುತ್ರರು ಚಲನಚಿತ್ರರಂಗದಲ್ಲಿ ತೊಡಗಿಸಿಕೊಂಡವರು. ಶಿವಣ್ಣ ಮತ್ತು ಪುನೀತ್ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದರೆ, ರಾಘವೇಂದ್ರ ರಾಜಕುಮಾರ್ ನಿರ್ಮಾಪಕರಾಗಿದ್ದಾರೆ.

  ಜಗ್ಗೇಶ್ - ಕೋಮಲ್ ಕುಮಾರ್

  ಜಗ್ಗೇಶ್ - ಕೋಮಲ್ ಕುಮಾರ್

  ಶಿವಲಿಂಗಪ್ಪ ಮತ್ತು ನಂಜಮ್ಮ ದಂಪತಿಗಳ ಮಕ್ಕಳಾದ ಜಗ್ಗೇಶ್ ಮತ್ತು ಕೋಮಲ್ ಹಾಸ್ಯ ನಟರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಜಗ್ಗೇಶ್ ಚಿತ್ರರಂಗದ ಜೊತೆಗೆ ರಾಜಕೀಯದಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಕೋಮಲ್ ಹಾಸ್ಯ ನಟನಾಗಿ ಈಗ ನಾಯಕನಾಗಿ ಭಡ್ತಿ ಪಡೆದಿದ್ದಾರೆ.

  ಕುಮಾರ್ ಬಂಗಾರಪ್ಪ - ಮಧು ಬಂಗಾರಪ್ಪ

  ಕುಮಾರ್ ಬಂಗಾರಪ್ಪ - ಮಧು ಬಂಗಾರಪ್ಪ

  ಮಾಜಿ ಸಿಎಂ ಎಸ್ ಬಂಗಾರಪ್ಪ ಪುತ್ರರಾದ ಇವರಿಬ್ಬರ ನಡುವೆ ಸಂಬಂಧ ಅಳಸಿ ಹೋಗಿವೆ. ಕೆರಳಿದ ಸರ್ಪ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕುಮಾರ್ ಅವರಿಗೆ ಹೆಚ್ಚಾಗಿ ರಾಜಕೀಯದ ಮೇಲೆ ಆಸಕ್ತಿ. ಮಧು ಬಂಗಾರಪ್ಪ
  ಆಡಿಯೋ ಕಂಪೆನೆ ನಡೆಸಿಕೊಂಡಿದ್ದವರು. ಇವರ ದೇವಿ ಎನ್ನುವ ಚಿತ್ರ ಸೆಟ್ಟೇರಿದೆ. ಇವರು ಸೊರಬ ಕ್ಷೇತ್ರದ ಶಾಸಕ.

  ಸಿ ಆರ್ ಸಿಂಹ - ಶ್ರೀನಾಥ್

  ಸಿ ಆರ್ ಸಿಂಹ - ಶ್ರೀನಾಥ್

  ರಾಮಸ್ವಾಮಿ ಶಾಸ್ತ್ರಿ ಮಕ್ಕಳು ಸಿ ಆರ್ ಸಿಂಹ ಮತ್ತು ಶ್ರೀನಾಥ್. ಸಿ ಆರ್ ಸಿಂಹ ಹೆಚ್ಚಾಗಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡವರು. ಪ್ರಣಯರಾಜ ಶ್ರೀನಾಥ್ ಅವರನ್ನು ಪುಟ್ಟಣ್ಣ ಕಣಗಾಲ್ ಚಿತ್ರರಂಗಕ್ಕೆ ಪರಿಚಯಿಸಿದರು. ಶುಭಮಂಗಳ, ಗರುಡರೇಖೆ, ಮಾನಸ ಸರೋವರ, ಧರ್ಮಸೆರೆ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ಶ್ರೀನಾಥ್ ನೀಡಿದ್ದಾರೆ.

  ರಿಯಲ್ ಸ್ಟಾರ್ ಉಪೇಂದ್ರ

  ರಿಯಲ್ ಸ್ಟಾರ್ ಉಪೇಂದ್ರ

  ಉಡುಪಿ ಮೂಲದ ಉಪೇಂದ್ರ ಹೆಚ್ಚಿನ ವಿದ್ಯಾಭ್ಯಾಸ ನಡೆಸಿದ್ದು ಬೆಂಗಳೂರಿನಲ್ಲೇ. ಉಪೇಂದ್ರ ಬಿಕಾಂ ಪದವೀಧರರಾಗಿದ್ದು ನಗರದ ಆಚಾರ್ಯ ಪಾಠಶಾಲಾ ವಿದ್ಯಾರ್ಥಿ.

  English summary
  Brothers in Kannada FIlm Industry. We can see mainly Dr. Raj and Tugudeepa Srinivas sons in Kannada film industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X