»   » ಯಡಿಯೂರಪ್ಪ ವಿರುದ್ಧ 'ಬಿರುಗಾಳಿ'ಯ ಹೇಳಿಕೆ ನೀಡಿದ ನಟ ಚೇತನ್!

ಯಡಿಯೂರಪ್ಪ ವಿರುದ್ಧ 'ಬಿರುಗಾಳಿ'ಯ ಹೇಳಿಕೆ ನೀಡಿದ ನಟ ಚೇತನ್!

Posted By:
Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ನಟ ಚೇತನ್ ಕಿಡಿಕಾರಿದ್ದಾರೆ. ಇಂದು ಬೆಂಗಳೂರಿನಲ್ಲಿ 'ಲಿಂಗಾಯತ ಮತ್ತು ವೀರಶೈವ ಪ್ರತ್ಯೇಕ ಧರ್ಮ' ವಿಚಾರವಾಗಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ವಿರುದ್ಧ ಚೇತನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Chetan Kumar’s Noorondu Nenapu Upcoming Movie

ಲಿಂಗಾಯತ ಸಮಾಜ ಒಡೆದಿದ್ದು ಯಡಿಯೂರಪ್ಪ: ನಟ ಚೇತನ್ ಆರೋಪ

''ಲಿಂಗಾಯಿತ ವೀರಶೈವ ಧರ್ಮ ನಮಗೆ ಬೇಕಾಗಿಲ್ಲ. ನಮ್ಮ ಒಗ್ಗಟ್ಟು ಒಡೆಯಲು ಮುಂದಾಗಿದ್ದು ಯಡಿಯೂರಪ್ಪ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಯಡಿಯೂರಪ್ಪ ದಲಿತರ ಮನೆಯಲ್ಲಿ ತಿಂಡಿ ತಿನ್ನುವ ನಾಟಕ ಮಾಡುತ್ತಾರೆ. ಇಂತಹವರನ್ನು ಸಿನಿಮಾದವರೊಬ್ಬರು ಅಭಿನಯ ಬಸವಣ್ಣ ಎಂದು ಕರೆದಿದ್ದಾರೆ'' ಎಂದು ಕಾರ್ಯಕ್ರಮದಲ್ಲಿ ಯಡಿಯೂರಪ್ಪ ವಿರುದ್ಧ ನಟ ಚೇತನ್ ಗುಡುಗಿದ್ದಾರೆ.

BS Yeddyurappa divided Lingayat Community alleges Actor Chetan

ಚೇತನ್ ಅವರ ಈ ಹೇಳಿಕೆ ಯಡಿಯೂರಪ್ಪ ಬೆಂಬಲಿಗರು ಗರಂ ಆಗಿದ್ದಾರೆ. ''ಇಂತಹ ಕಾರ್ಯಕ್ರಮದಲ್ಲಿ ರಾಜಕೀಯ ತರಬೇಡಿ'' ಎಂದು ಯಡಿಯೂರಪ್ಪ ಬೆಂಬಲಿಗರೊಬ್ಬರು ಚೇತನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

English summary
Kannada actor Chetan has alleged that former chief minister BS Yeddyurappa divided Lingayat Community for his political gains
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada