»   » ಒಂದೇ ಹಾಡಿನಲ್ಲಿ 50ಕ್ಕೂ ಅಧಿಕ ಕನ್ನಡ ಕಲಾವಿದರು ಅಭಿನಯ.!

ಒಂದೇ ಹಾಡಿನಲ್ಲಿ 50ಕ್ಕೂ ಅಧಿಕ ಕನ್ನಡ ಕಲಾವಿದರು ಅಭಿನಯ.!

Posted By:
Subscribe to Filmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಆರ್ ಜೆ ರೋಹಿತ್ ಅಭಿನಯದ 'ಬಕಾಸುರ' ಚಿತ್ರದ ವಿಶೇಷ ಹಾಡಿನಲ್ಲಿ ಕನ್ನಡದ ಹಲವು ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ, ಈ ಹಾಡು ಯಾವುದು? ಮತ್ತು ಯಾವ ಯಾವ ಕಲಾವಿದರು ಅಭಿನಯಿಸಿದ್ದಾರೆ ಎಂಬುದು ಬಹಿರಂಗವಾಗಿದೆ.

ಸ್ಯಾಂಡಲ್ ವುಡ್ ನಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ಪ್ರಯತ್ನ ಮಾಡಲಾಗಿದ್ದು, ಸುಮಾರು 50ಕ್ಕೂ ಅಧಿಕ ನಟ-ನಟಿಯರು, ನಿರ್ದೇಶಕ, ತಂತ್ರಜ್ಞರು ಈ ಹಾಡಿನಲ್ಲಿ ಬಂದು ಹೋಗಿದ್ದಾರೆ. ಅವಿನಾಶ್ ಬಿ ಸಂಗೀತ ನೀಡಿರುವ ಈ ಚಿತ್ರದಲ್ಲಿ ಈ ಹಾಡನ್ನ ಪ್ರಚಾರಕ್ಕೆಂದು ಬಳಸಲಾಗುತ್ತಿದೆ.

Buckaasuura Promotional Song Release

ಒಂದೇ ಸಿನಿಮಾದಲ್ಲಿ ರವಿಚಂದ್ರನ್, ಶಿವಣ್ಣ, ಪುನೀತ್ ಹಾಗೂ ಸುದೀಪ್..!

ಸದ್ಯ, ಬಿಡುಗಡೆಯಾಗಿರುವ ಹಾಡಿನಲ್ಲಿ ಗಮನಿಸುವುದಾದರೇ, ಡಾ.ಶಿವರಾಜ್ ಕುಮಾರ್, ಪುನೀತ್ ರಾಜ್ ಮಾರ್, ಗಣೇಶ್, ವಿಜಯ್ ರಾಘವೇಂದ್ರ, ಪ್ರಜ್ವಲ್ ದೇವರಾಜ್, ನೀನಾಸಂ ಸತೀಶ್, ಶ್ರೀಮುರಳಿ, ಪಾರೂಲ್ ಯಾದವ್, ಮೇಘನಾ ಗಾಂವ್ಕರ್, ಮೇಘನಾ ರಾಜ್, ಶಾನ್ವಿ, ನಭಾ ನಟೇಶ್, ರಶ್ಮಿಕಾ ಮಂದಣ್ಣ, ಶ್ರದ್ಧಾ ಶ್ರೀನಾಥ್, ನಿರ್ದೇಶಕರಾದ ಸಿಂಪಲ್ ಸುನಿ, ಪವನ್ ಒಡೆಯರ್, ಅನೂಪ್ ಭಂಡಾರಿ, ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ, ಗುರುಕಿರಣ್, ರಘು ದೀಕ್ಷಿತ್ ಸೇರಿದಂತೆ ಒಟ್ಟು 56 ಜನ ಕಲಾವಿದರು ಇದ್ದಾರೆ.

RJ ರೋಹಿತ್, ರವಿಚಂದ್ರನ್ ಅಭಿನಯದ 'ಬಕಾಸುರ' ಟೀಸರ್

ಅಂದ್ಹಾಗೆ, ಆರ್.ಜೆ ರೋಹಿತ್ ನಾಯಕನಾಗಿ ಅಭಿನಯಿಸುತ್ತಿದ್ದು, ಈ ಚಿತ್ರದಲ್ಲಿ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಕರ್ವ' ಖ್ಯಾತಿಯ ನಿರ್ದೇಶಕ ನವನೀತ್ 'ಬಕಾಸುರ' ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕಿರುತೆರೆ ನಟಿ ಕಾವ್ಯ ಗೌಡ ನಾಯಕಿಯಾಗಿ ಹಿರಿತೆರೆ ಪ್ರವೇಶ ಮಾಡುತ್ತಿದ್ದಾರೆ.

ಇನ್ನುಳಿದಂತೆ ರಾಜಸಿಂಹ ಈ ಚಿತ್ರಕ್ಕೆ ಕಥೆ ಬರೆದಿದ್ದು, ರೋಹಿತ್ ಮತ್ತು ನವನೀತ್ ಚಿತ್ರಕಥೆ ಬರೆದಿದ್ದಾರೆ. ಶಶಿಕುಮಾರ್, ಮಕರಂದ್ ದೇಶಪಾಂಡೆ, ಸಿತಾರ, ಸಾಧುಕೋಕಿಲಾ, ವಿಜಯ್ ಚೆಂಡೂರ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ.

English summary
Crazy star ravichandran and rj rohith starrer Kannada movie buckasuura Promotional Song Release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada