»   » ಬರೋಬ್ಬರಿ 35 ಕೆಜಿ ತೂಕ ಇಳಿಸಿಕೊಂಡ ಹಾಸ್ಯ ನಟ ಬುಲೆಟ್ ಪ್ರಕಾಶ್ !

ಬರೋಬ್ಬರಿ 35 ಕೆಜಿ ತೂಕ ಇಳಿಸಿಕೊಂಡ ಹಾಸ್ಯ ನಟ ಬುಲೆಟ್ ಪ್ರಕಾಶ್ !

Posted By:
Subscribe to Filmibeat Kannada

ಇತ್ತೀಚಿಗೆ ಸದಾ ವಿವಾದಗಳ ಮೂಲಕ ಸುದ್ದಿ ಮಾಡುತ್ತಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ಈಗ ತಮ್ಮ ತೂಕದ ವಿಚಾರವಾಗಿ ಸುದ್ದಿಯಲ್ಲಿ ಇದ್ದಾರೆ.

ಬುಲೆಟ್ ಪ್ರಕಾಶ್ ರವರ ಈ ಪ್ರಯತ್ನಕ್ಕೆ 'ಭೇಷ್' ಎಂದು ಬೆನ್ನು ತಟ್ಟಲೇಬೇಕು.!

ಗುಂಡು ಗುಂಡಾಗಿ ಇದ್ದ ಬುಲೆಟ್ ಪ್ರಕಾಶ್ ಈಗ ಸಣ್ಣ ಆಗಿದ್ದಾರೆ. ಅದಕ್ಕೆ ಅವರು ಸಖತ್ ವರ್ಕೌಟ್ ಮಾಡುತ್ತಿದ್ದಾರೆ. ಡಯಟ್ ಹಾಗೂ ವ್ಯಾಯಾಮ ಮೂಲಕ ಈಗ ಬುಲೆಟ್ ತಮ್ಮ ತೂಕದಲ್ಲಿ ಬರೋಬ್ಬರಿ 35 ಕೆಜಿಯನ್ನು ತಗ್ಗಿಸಿಕೊಂಡಿದ್ದಾರೆ.

Bullet Prakash loses his weight

35 ಕೆಜಿ ತೂಕ ಇಳಿಸಿಕೊಂಡ ವಿಷಯವನ್ನು ಬುಲೆಟ್ ಪ್ರಕಾಶ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ''ಎಲ್ಲರಿಗೂ ನಮಸ್ಕಾರ ನಾನು ಸುಮಾರು 35 ಕೆಜಿ ತೂಕ ಕಡಿಮೆ ಮಾಡಿದ್ದಿನಿ, ಇನ್ನೂ ಕಡಿಮೆ ಮಾಡುತ್ತೀನಿ, ನಿಮಗೆ ನನ್ನಲ್ಲಿ ಬದಲಾವಣೆ ಕಾಣುತ್ತಿದೆಯ.'' ಎಂದು ಫೇಸ್ ಬುಕ್ ನಲ್ಲಿ ಅಭಿಮಾನಿಗಳಿಗೆ ಪ್ರಶ್ನೆ ಕೇಳಿದ್ದಾರೆ.

35 ಕೆಜಿ ತೂಕ ತಗ್ಗಿಸಿರುವ ಬುಲೆಟ್ ಮೊದಲು ನಿಜಕ್ಕೂ ಎಷ್ಟು ಕೆಜಿ ತೂಕ ಇದ್ದರು, ಈಗ ಎಷ್ಟಿದ್ದಾರೆ ಎಂಬುದನ್ನು ಇಲ್ಲಿ ಹೇಳಿಕೊಂಡಿಲ್ಲ. ಅಂದಹಾಗೆ, ಈ ಹಿಂದೆ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ಬಂದಿದ್ದ ಬುಲೆಟ್ ಪ್ರಕಾಶ್ ತಾವು ಸಿಕ್ಸ್ ಪ್ಯಾಕ್ ಮಾಡುವುದಾಗಿ ಹೇಳಿದ್ದರು. ಅದೇ ರೀತಿ ಈಗ ಕಷ್ಟ ಕಟ್ಟು ತಮ್ಮ ತೂಕವನ್ನು ಇಳಿಸಿಕೊಳ್ಳುತ್ತಿದ್ದಾರೆ.

English summary
Kannada comedy Actor Bullet Prakash loses his weight.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada