For Quick Alerts
  ALLOW NOTIFICATIONS  
  For Daily Alerts

  ರಿಲೀಸ್ ಮೊದಲೇ 'ಬಟರ್ ಪ್ಲೈ' ಹಾರಾಟ ಬಲು ಜೋರು

  By Naveen
  |

  ರಮೇಶ್ ಅರವಿಂದ್ ನಿರ್ದೇಶನದಲ್ಲಿ ಕನ್ನಡದ 'ಬಟರ್ ಪ್ಲೈ' ಸಿನಿಮಾ ಬರುತ್ತಿದೆ. ಹಿಂದಿಯ 'ಕ್ವೀನ್' ಸಿನಿಮಾ ರಿಮೇಕ್ ಇದಾಗಿದೆ. ಆದರೆ ರಿಲೀಸ್ ಆಗುವುದಕ್ಕೆ ಮೊದಲೇ ಈ ಸಿನಿಮಾ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿದೆ. ಅದಕ್ಕೆ ಒಂದು ತಾಜಾ ಉದಾಹರಣೆ ಚಿತ್ರದ ಮೇಕಿಂಗ್ ವಿಡಿಯೋ.

   ಸಂದರ್ಶನ : ಒಂಟಿಯಾಗಿ ಹನಿಮೂನ್ ಗೆ ಹೊರಟ 'ಬಟರ್ ಫ್ಲೈ' ಪಾರೂಲ್ ಸಂದರ್ಶನ : ಒಂಟಿಯಾಗಿ ಹನಿಮೂನ್ ಗೆ ಹೊರಟ 'ಬಟರ್ ಫ್ಲೈ' ಪಾರೂಲ್

  ಇತ್ತೀಚಿಗಷ್ಟೆ 'ಬಟರ್ ಫ್ಲೈ' ಸಿನಿಮಾದ ಮೇಕಿಂಗ್ ವಿಡಿಯೋ ರಿಲೀಸ್ ಆಗಿತ್ತು. ಚಿತ್ರದ ಪತ್ರಿಕಾಗೋಷ್ಠಿ ಕಾರ್ಯಕ್ರಮದಲ್ಲಿ ರಮೇಶ್ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಆದರೆ ಈಗ ಆ ವಿಡಿಯೋ ಯೂ ಟ್ಯೂಬ್ ನಲ್ಲಿ ದೊಡ್ಡ ಜನಪ್ರಿಯತೆ ಗಳಿಸಿದೆ. ರಿಲೀಸ್ ಆದ ಕೆಲವೇ ದಿನದಲ್ಲಿ ಈ ಮೇಕಿಂಗ್ ವಿಡಿಯೋವನ್ನು 1 ಮಿಲಿಯನ್ ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.

  ಪ್ಯಾರಿಸ್ ನಲ್ಲಿ ನಡೆದ ಚಿತ್ರೀಕರಣದ ಮೇಕಿಂಗ್ ವಿಡಿಯೋ ಇದಾಗಿತ್ತು. ಪಾರೂಲ್ ಯಾದವ್ ತುಂಟಾಟದೊಂದಿಗೆ ಮೇಕಿಂಗ್ ವಿಡಿಯೋ ಸಖತ್ ಮಜವಾಗಿ ಇತ್ತು. ಇನ್ನು ಈ ಸಿನಿಮಾದ 80 ರಷ್ಟು ಚಿತ್ರೀಕರಣ ಮುಗಿದಿದ್ದು ತಮ್ಮ ಶೂಟಿಂಗ್ ಜರ್ನಿಯನ್ನು ಈ ವಿಡಿಯೋ ಮೂಲಕ ಚಿತ್ರತಂಡ ಹಂಚಿಕೊಂಡಿತ್ತು.

  Butterfly kannada movie making video reaches 1 million youtube views

  ಅಂದಹಾಗೆ, ಅಮಿತ್ ತ್ರಿವೇದಿ 'ಬಟರ್ ಫ್ಲೈ' ಸಿನಿಮಾಗೆ ಸಂಗೀತ ನೀಡಿದ್ದಾರೆ. ಜಯಂತ್ ಕಾಯ್ಕಿಣಿ ಆರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ತಮಿಳಿನಲ್ಲಿ 'ಪ್ಯಾರಿಸ್ ಪ್ಯಾರಿಸ್', ತೆಲುಗಿನಲ್ಲಿ 'ಒನ್ಸ್ ಅಗೈನ್ ಕ್ವೀನ್' ಮತ್ತು ಮಲೆಯಾಳಂ ನಲ್ಲಿ 'ಜಮ್ ಜಮ್' ಎಂಬ ಹೆಸರಿನಲ್ಲಿ 'ಕ್ವೀನ್' ಸಿನಿಮಾ ದಕ್ಷಿಣ ಭಾರತಕ್ಕೆ ಬರುತ್ತಿದೆ.

  English summary
  Kannada actress Parul Yadav's 'Butterfly' kannada movie making video reaches 1 million youtube views. 'Butterfly' is a remake of 'Queen' movie. The movie is directed by Ramesh Aravind.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X