ಇಂದು ನಡೆಯಲಿದೆ ಪಾರೂಲ್ ಯಾದವ್ ಕಲ್ಯಾಣ
ನಟಿ ಪಾರೂಲ್ ಯಾದವ್ ಮದುವೆ ಇಂದು ನಡೆಯುತ್ತಿದೆ. ಸಿನಿಮಾಗಳಲ್ಲಿ ಬ್ಯುಸಿ ಇದ್ದ ಪಾರೂಲ್ ಇದ್ದಕ್ಕಿದ್ದ ಹಾಗೆ ಮದುವೆ ಆಗ್ತಿದ್ದಾರಾ ಎಂದು ಗೊಂದಲ ಪಡಬೇಡಿ. ಪಾರೂಲ್ ಮದುವೆ ನಡೆಯುತ್ತಿರುವುದು ನಿಜ ಜೀವನದಲ್ಲಿ ಅಲ್ಲ.. ಸಿನಿಮಾದಲ್ಲಿ ಮಾತ್ರ.
ಪಾರೂಲ್ 'ಬಟರ್ ಫ್ಲೈ' ಸಿನಿಮಾದ ನಾಯಕಿಯಾಗಿದ್ದು, ಆ ಚಿತ್ರದ ಒಂದು ಹಾಡು ಇಂದು ಬಿಡುಗಡೆಯಾಗುತ್ತಿದೆ. ಸಿನಿಮಾದ ಮೊದಲ ಹಾಡು ಇದಾಗಿದೆ. ಚಿತ್ರದಲ್ಲಿ ಪಾರೂಲ್ ಮದುವೆ ಆಗಲಿದ್ದು, ಆ ಸಂದರ್ಭಕ್ಕೆ ಬರುವ ಹಾಡು ಇಂದು ಬಿಡುಗಡೆಯಾಗುತ್ತಿದೆ.
ಚಿತ್ರದಲ್ಲಿ ಪಾರೂಲ್ ಪಾತ್ರದ ಹೆಸರು ಪಾರ್ವತಿಯಾಗಿದೆ. ಗೋಕರ್ಣದ ಹುಡುಗಿ ಪಾರ್ವತಿಯನ್ನು ವಿಜಯ್ ಮದುವೆ ಆಗಲಿದ್ದಾರೆ. ''ನಾಳೆ ನಮ್ಮ ಮನೆಯಲ್ಲೊಂದು..'' ಎಂಬ ಈ ಹಾಡು ಇಂದು ಸಂಜೆ ನಾಲ್ಕು ಗಂಟೆಗೆ ಬಿಡುಗಡೆಯಾಗುತ್ತಿದೆ.

'ಬಟರ್ ಫ್ಲೈ', ಚಿತ್ರ ಹಿಂದಿಯ ಕ್ವೀನ್' ಸಿನಿಮಾದ ರಿಮೇಕ್ ಆಗಿದೆ. ಆ ಸಿನಿಮಾಗೆ ಮ್ಯೂಸಿಕ್ ಮಾಡಿದ್ದ ಅಮಿತ್ ತ್ರಿವೇದಿ ಅವರೇ ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ.
ನಾಲ್ಕು ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ನಾಲ್ಕು ಭಾಷೆಯ ಮದುವೆ ಹಾಡುಗಳು ಕೂಡ ಇಂದು ಬಿಡುಗಡೆಯಾಗುತ್ತಿವೆ. ಅಂದಹಾಗೆ, ಮೂರು ಭಾಷೆಗಳಲ್ಲಿ ಈ ಚಿತ್ರಕ್ಕೆ ರಮೇಶ್ ಅರವಿಂದ್ ನಿರ್ದೇಶಕರಾಗಿದ್ದಾರೆ.


Click it and Unblock the Notifications











