»   » ಮನ ತಣಿಸಿದ ಕ್ಯಾಬರೆ ನರ್ತಕಿಯರಿಗೆ ನುಡಿನಮನ

ಮನ ತಣಿಸಿದ ಕ್ಯಾಬರೆ ನರ್ತಕಿಯರಿಗೆ ನುಡಿನಮನ

Posted By:
Subscribe to Filmibeat Kannada

ಕನ್ನಡ ಚಿತ್ರರಂಗವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಕ್ಯಾಬರೆ ನರ್ತಕಿಯರಿಗೆ ಅವರದೇ ಆದ ಸ್ಥಾನಮಾನವಿತ್ತು. ಎಲ್ಲಾ ಕ್ಲಾಸ್ ಮತ್ತು ಮಾಸ್ ಚಿತ್ರಗಳಲ್ಲಿ ಕ್ಯಾಬರೆ ಡ್ಯಾನ್ಸ್ ಇಲ್ಲದ ಚಿತ್ರ ಆಗಿನ ಕಾಲದಲ್ಲಿ ವಿರಳ ಎನ್ನಬಹುದಿತ್ತು.

ಕ್ಯಾಬರೆ ಡ್ಯಾನ್ಸ್ ಎನ್ನುವ ಟ್ರೆಂಡ್ 70ರ ದಶಕದಲ್ಲೇ ಆರಂಭವಾಗಿತ್ತು. ಸಂಜೀವ್ ಕುಮಾರ್ ಮುಖ್ಯ ಭೂಮಿಕೆಯಲ್ಲಿದ್ದ ಇನ್ಸಾನ್ ಆರ್ ಸೈತಾನ್ ಎನ್ನುವ ಚಿತ್ರದಲ್ಲಿ ಫರ್ಹಾಲ್ ಕ್ಯಾಬರೆ ನರ್ತಕಿಯಾಗಿ ರಸಿಕರ ಮನ ಸೆಳೆದಿದ್ದರು.

ಕ್ಯಾಬರೆ ಡ್ಯಾನ್ಸ್ ಎಂದಾಗ ಚಿತ್ರರಂಗ ಮತ್ತು ಚಿತ್ರರಸಿಕರು ಇಂದಿಗೂ ಮರೆಯಲಾಗದ ಹೆಸರೆಂದರೆ 'ಹೆಲನ್ ಜೈರಾಗ್ ರಿಚರ್ಡ್ಸನ್'. ಮೈಮೇಲೆ ತೋಡಾ ಕಪ್ಡಾ..ಬಿಂದಾಸ್ ನರ್ತನದ ಮೂಲಕ ಈಕೆ ನರ್ತಿಸುತ್ತಿದ್ದ ಪರಿ ಆ ಜಮಾನದಲ್ಲೇ ಹೀರೋಯಿನ್ ಗಳಿಗಿಂತ ಹೆಚ್ಚಿನ ಜನಪ್ರಿಯತೆ ಈಕೆಗೆ ತಂದು ಕೊಟ್ಟಿತ್ತು.

ಜ್ಯೋತಿಲಕ್ಷ್ಮಿ

ಜ್ಯೋತಿಲಕ್ಷ್ಮಿ, ಅನುರಾಧಾ ಸಮಕಾಲೀನ ಕ್ಯಾಬೆರೆ ನರ್ತಕಿಯರು. ಕನ್ನಡ ಚಿತ್ರಗಳ ಜೊತೆ ತೆಲುಗು, ತಮಿಳು ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಜ್ಯೋತಿಲಕ್ಷ್ಮಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದರು. ಅದರಲ್ಲಿ ಮೆಗಾಸ್ಟಾರ್ ಚಿರಂಜೀವಿ ಕೂಡಾ ಒಬ್ಬರು.

ಜಯಮಾಲಿನಿ

22.12.1958ರಲ್ಲಿ ಆಂಧ್ರಪ್ರದೇಶದ ಸಲ್ಲೂರ್ ಪೇಟ್ ನಲ್ಲಿ ಜನಿಸಿದ ಜಯಮಾಲಿನಿ, ಶಾಲಿಮಾರ್ ಎನ್ನುವ ಹಿಂದಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಕುಣಿಯಲು ಆರಂಭಿಸಿದರು. 17 ತೆಲುಗು, 25 ತಮಿಳು, 9 ಮಲಯಾಳಂ, 5 ಹಿಂದಿ ಮತ್ತು 20 ಕನ್ನಡ ಚಿತ್ರಗಳಲ್ಲಿ ನಟಿಸಿದ ಖ್ಯಾತಿ ಜಯಮಾಲಿನಿಯದ್ದು. 'ದೀನಳ ಮೊರೆಯ ಆಲಿಸು ಸ್ವಾಮಿ' ಎಂದು ವಿಷ್ಣುವರ್ಧನ್, ದ್ವಾರಕೀಶ್ ಅಭಿನಯದ ಗುರು ಶಿಷ್ಯರು ಚಿತ್ರದಲ್ಲಿ ಜಯಮಾಲಿನಿಯ ಡ್ಯಾನ್ಸ್ ಮರೆಯಲಾಗದಂತದ್ದು. ಪೋಲೀಸ್ ಇನ್ಸ್ಪೆಕ್ಟರ್ ರನ್ನು ಮದುವೆಯಾಗಿರುವ ಜಯಮಾಲಿನಿ ಮೂರು ಮಕ್ಕಳೊಂದಿಗೆ ಚೆನ್ನೈನಲ್ಲಿ ವಾಸವಾಗಿದ್ದಾರೆ.

ಡಿಸ್ಕೋಶಾಂತಿ

1985 - 1996ರ ಅವಧಿಯಲ್ಲಿ ಯಶಸ್ಸಿನ ಉತ್ತುಂಗ ಶಿಖರಕ್ಕೆ ಏರಿದ ಕ್ಯಾಬರೆ ನರ್ತಕಿಯರ ಪೈಕಿ ಡಿಸ್ಕೋಶಾಂತಿ ಕೂಡಾ ಒಬ್ಬರು. 1985ರಲ್ಲಿ ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಈಕೆ ಎಸ್ ಪಿ ಸಾಂಗ್ಲಿಯಾನಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

ದಿ. ಸಿಲ್ಕ್ ಸ್ಮಿತಾ

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರಿನಲ್ಲಿ ಜನಿಸಿದ ಸಿಲ್ಕ್ ಸ್ಮಿತಾ, ತನ್ನ ಎರಡನೇ ಚಿತ್ರದಲ್ಲಿ ಸಿಲ್ಕ್ ಎನ್ನುವ ಹೆಸರಿನ ಪಾತ್ರ ಮಾಡಿದ್ದರು. ಅಲ್ಲಿಂದ ವಿಜಯಲಕ್ಷ್ಮಿ 'ಸಿಲ್ಕ್ ಸ್ಮಿತಾ' ಎಂದೇ ಜನಪ್ರಿಯರಾದರು. 1996ರಲ್ಲಿ ಚೆನ್ನೈ ಅಪಾರ್ಟ್ಮೆಂಟ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಪ್ರಚಂಡಕುಳ್ಳ, ಹಳ್ಳಿ ಮೇಷ್ಟ್ರು, ಅಳಿಮಯ್ಯ ಮುಂತಾದ ಕನ್ನಡ ಚಿತ್ರದಲ್ಲಿ ಸಿಲ್ಕ್ ಸ್ಮಿತಾ ನಟಿಸಿದ್ದಾರೆ.

ಅನುರಾಧ

ಐದು ಭಾಷೆಗಳಲ್ಲಿ ಸುಮಾರು 160ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಕುಣಿದಿದ್ದ ಅನುರಾಧಾ ತನ್ನ 13ನೇ ವಯಸ್ಸಿನಲ್ಲಿ ಬಣ್ಣದಲೋಕಕ್ಕೆ ಕಾಲಿಟ್ಟಿದ್ದರು. ಅನುರಾಧಾ ತನ್ನ ಮಗಳು ಅಭಿನಯಶ್ರೀ ಜೊತೆ 'ಅಂಬಿ' ಕನ್ನಡ ಚಿತ್ರದಲ್ಲಿ ಒಟ್ಟಾಗಿ ಕುಣಿದಿದ್ದರು.

70ರ ದಶಕದಿಂದಲೇ ಕನ್ನಡ ಚಿತ್ರರಂಗದಲ್ಲೂ ಕ್ಯಾಬರೆ ಡ್ಯಾನ್ಸ್ ಗಳಿಗೆ ಬರವಿರಲಿಲ್ಲ. ಜಯಮಾಲಿನಿ, ಅನುರಾಧಾ, ಡಿಸ್ಕೋ ಶಾಂತಿ, ಸಿಲ್ಕ್ ಸ್ಮಿತಾ, ಜ್ಯೋತಿಲಕ್ಷ್ಮಿ ಹೀಗೆ ಸಾಗುವ ಪಟ್ಟಿಗಳು ಅಸಂಖ್ಯಾತ ಚಿತ್ರರಸಿಕರ ಮನದಂಗಣದಲ್ಲಿ ಈಗಲೂ ಮನೆಮಾಡಿವೆ.

ಹೆಲನ್ ಹೊರತು ಪಡಿಸಿ ಮಿಕ್ಕ ಐದೂ ರತಿಮಣಿಗಳು ಕನ್ನಡ ಚಿತ್ರದಲ್ಲಿ ಕ್ಯಾಬರಾ ನರ್ತಕಿಯಾಗಿ ಮಾತ್ರವಲ್ಲದೆ ಸಹ ನಟಿಯಾಗಿ ಕೂಡಾ ನಟಿಸಿದ್ದರು.

ಆದರೆ ಈಗ ಕಾಲ ಬದಲಾಗಿದೆ. ಹಿರೋಯಿನ್ ಗಳೇ ಕ್ಯಾಬರೆ ನರ್ತನಕ್ಕಿಂತ ಮೇಲಾದ ಐಟಂ ಸಾಂಗಿನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಭಾರತೀಯ ಚಿತ್ರರಂಗದಲ್ಲಿ ಕ್ಯಾಬರೆ ನರ್ತನ ಎನ್ನುವುದು ನಶಿಸಿ ಹೋಗುತ್ತಿದೆ.

ಆ ಕಾಲದಲ್ಲಿ ನಮ್ಮ ಕಷ್ಟದಲ್ಲೂ, ಸುಖದಲ್ಲೂ ತಮ್ಮ ನರ್ತನೆಯ ಮೂಲಕ ಮನಸ್ಸಿಗೆ ಮುದ ನೀಡಿದ ಇವರ ಬಗ್ಗೆ ಸ್ವಲ್ಪ ತಿಳಿದು ಕೊಳ್ಳೋಣ.

English summary
A brief description about Cabrera dancers who hails from South India.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada